ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಿದರೆ ಸ್ವಾಭಿಮಾನ ಹೆಚ್ಚು: ವೆಂಕಯ್ಯ ನಾಯ್ಡು
ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡುವುದು ಮಕ್ಕಳ ಸ್ವಾಭಿಮಾನ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಮತ್ತು ಇದನ್ನು ಕನಿಷ್ಠ 5 ನೇ ತರಗತಿಯವರೆಗೆ ಬೋಧನೆಯ ಪ್ರಾಥಮಿಕ ಮಾಧ್ಯಮವನ್ನಾಗಿ ಮಾಡಬೇಕು ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಭಾನುವಾರ ಹೇಳಿದರು. ಮನೆಯಲ್ಲಿ ಮಾತನಾಡದ ಭಾಷೆಯಲ್ಲಿ ಮಗುವಿಗೆ ಶಿಕ್ಷಣ ನೀಡುವುದು ವಿಶೇಷವಾಗಿ ಪ್ರಾಥಮಿಕ ಹಂತದಲ್ಲಿ ಕಲಿಯಲು ದೊಡ್ಡ ಅಡ್ಡಿಯಾಗಬಹುದು ಎಂದು ಶಿಕ್ಷಣ ಸಚಿವಾಲಯ ಮತ್ತು ಸಂಸ್ಕೃತಿ ಸಚಿವಾಲಯ ಆಯೋಜಿಸಿರುವ ವೆಬಿನಾರ್‌ನ ಉದ್ಘಾಟನಾ ಅಧಿವೇಶನದಲ್ಲಿ ಹೇಳಿದರು.Last Updated 21 ಫೆಬ್ರುವರಿ 2021, 15:15 IST