ಗುವಾಹಟಿ: ಅಸ್ಸಾಂನಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ 1300 ಮಾಧ್ಯಮಿಕ ಇಂಗ್ಲಿಷ್ (ಎಂಇ) ಮದರಸಾಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಾಮಾನ್ಯ ಮಾಧ್ಯಮಿಕ ಇಂಗ್ಲಿಷ್ ಶಾಲೆಗಳನ್ನಾಗಿ ಬದಲಿಸಲಾಗಿದೆ ಎಂದು ರಾಜ್ಯ ಸರ್ಕಾರ ಗುರುವಾರ ಹೇಳಿದೆ.

ಈ ಕುರಿತು ಆದೇಶ ಹೊರಡಿಸಿರುವ ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕಿ ಸುರಂಜನಾ ಸೇನಾಪತಿ, ‘ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 1281 ಹಿರಿಯ ಪ್ರಾಥಮಿಕ ಮಾಧ್ಯಮಿಕ ಇಂಗ್ಲಿಷ್ ಮದರಸಾಗಳನ್ನು ಇನ್ನು ಮುಂದೆ ಎಂಇ ಶಾಲೆ ಎಂದಷ್ಟೇ ಕರೆಯಲಾಗುತ್ತದೆ’ ಎಂದಿದ್ದಾರೆ.

ಇದಕ್ಕೂ ಪೂರ್ವದಲ್ಲಿ 2021ರ ಏಪ್ರಿಲ್ನಲ್ಲಿ ರಾಜ್ಯ ಸರ್ಕಾರದ ಮದರಸಾ ಮಂಡಳಿ ಮೂಲಕ ನಿರ್ವಹಣೆಗೊಳ್ಳುತ್ತಿದ್ದ 610 ಮದರಸಾಗಳನ್ನು ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನಾಗಿ ಪರಿವರ್ತಿಸಲಾಗಿತ್ತು. ಶಾಲೆಗಳ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವೇತನ, ಭತ್ಯೆಯಲ್ಲೂ ಯಾವುದೇ ಬದಲಾವಣೆ ಇಲ್ಲ’ ಎಂದಿದ್ದಾರೆ.

‘ಈ ಶಾಲೆಗಳು ಹಿಂದೆ ಹೇಗೆ ಕಾರ್ಯನಿರ್ವಹಿಸುತ್ತಿದ್ದವೋ ಈಗಲೂ ಹಾಗೇ ಇರಲಿವೆ. ಆದರೆ ಸರ್ಕಾರದ ನಿಯಮಾವಳಿಗೆ ತಕ್ಕಂತೆ ಸ್ವಲ್ಪ ಬದಲಾವಣೆ ಆಗಲಿದೆ’ ಎಂದು ಸೇನಾಪತಿ ತಿಳಿಸಿದ್ದಾರೆ.

ಧರ್ಮಶಾಸ್ತ್ರವನ್ನು ಕಲಿಸಲಾಗುತ್ತದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಲು ಸೇನಾಪತಿ ನಿರಾಕರಿಸಿದ್ದಾರೆ.

2018ರ ನಂತರದಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ರಾಜ್ಯ ಸರ್ಕಾರದ ನಿರ್ವಹಣೆಯಲ್ಲಿದ್ದ ಮದರಸಾಗಳಲ್ಲಿ ಕೆಲವನ್ನು ಮುಚ್ಚಲಾಗಿದ್ದು, ಉಳಿದವನ್ನು ಸಾಮಾನ್ಯ ಶಾಲೆಗಳನ್ನಾಗಿ ಪರಿವರ್ತಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.