ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Snooping

ADVERTISEMENT

ಪೆಗಾಸಸ್ ಬಳಸಿ ಅಕ್ರಮ ಗೂಢಚಾರಿಕೆ ಮಾಡುವುದು ದೇಶದ್ರೋಹ: ಮಲ್ಲಿಕಾರ್ಜುನ ಖರ್ಗೆ

2017ರಲ್ಲಿ ಭಾರತ ಸರ್ಕಾರವು ಇಸ್ರೇಲ್‌ನೊಂದಿಗಿನ ಒಪ್ಪಂದದ ಭಾಗವಾಗಿ ಪೆಗಾಸಸ್ ಗೂಢಚರ್ಯೆ ತಂತ್ರಾಂಶ ಖರೀದಿಸಿದೆ ಎಂಬ ನ್ಯೂಯಾರ್ಕ್ ಟೈಮ್ಸ್ ವರದಿಯ ಆಧಾರದ ಮೇಲೆ ಕಾಂಗ್ರೆಸ್ ಪಕ್ಷವು ಶನಿವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
Last Updated 29 ಜನವರಿ 2022, 8:02 IST
ಪೆಗಾಸಸ್ ಬಳಸಿ ಅಕ್ರಮ ಗೂಢಚಾರಿಕೆ ಮಾಡುವುದು ದೇಶದ್ರೋಹ: ಮಲ್ಲಿಕಾರ್ಜುನ ಖರ್ಗೆ

‘ಭಾರತದ ಪ್ರಜಾಪ್ರಭುತ್ವವನ್ನು ಹೊಸಕಿ ಹಾಕಲು‘ ಪೆಗಾಸಸ್ ಬೇಹುಗಾರಿಕೆ: ರಾಹುಲ್‌

ನವದೆಹಲಿ: ಪೆಗಾಸಸ್ ಬಳಸಿ ಬೇಹುಗಾರಿಕೆ ಆರೋಪದ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ಬುಧವಾರ ಮೂವರು ಸೈಬರ್‌ ತಜ್ಞರ ಸಮಿತಿಯನ್ನು ರಚಿಸಿದೆ. ಈ ಕ್ರಮವನ್ನು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ 'ಮಹತ್ವದ ಹೆಜ್ಜೆ' ಎಂದು ಬಣ್ಣಿಸಿದರು. ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ಕೇವಲ ಪ್ರಧಾನ ಮಂತ್ರಿ ಅಥವಾ ಗೃಹ ಸಚಿವರು ಪೆಗಾಸಸ್‌ ಕುತಂತ್ರಾಂಶ ಬಳಕೆಗೆ ಆದೇಶಿಸಿರಬಹುದು ಎಂದು ಆರೋಪಿಸಿದರು.
Last Updated 27 ಅಕ್ಟೋಬರ್ 2021, 14:05 IST
‘ಭಾರತದ ಪ್ರಜಾಪ್ರಭುತ್ವವನ್ನು ಹೊಸಕಿ ಹಾಕಲು‘ ಪೆಗಾಸಸ್ ಬೇಹುಗಾರಿಕೆ: ರಾಹುಲ್‌

ಪೆಗಾಸಸ್ ಗೂಢಚರ್ಯೆ: ತನಿಖೆ ಕುರಿತಂತೆ ನಾಳೆ ಸುಪ್ರೀಂ ಕೋರ್ಟ್ ತೀರ್ಪು

ಪೆಗಾಸಸ್ ಹಗರಣದ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಗಳ ಮೇಲಿನ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು ಸೆಪ್ಟೆಂಬರ್ 13 ರಂದು ಕಾಯ್ದಿರಿಸಿತ್ತು, ಕೇಂದ್ರವು ಪೆಗಾಸಸ್ ಸ್ಪೈವೇರ್ ಅನ್ನು ಕಾನೂನುಬಾಹಿರ ವಿಧಾನಗಳ ಮೂಲಕ ನಾಗರಿಕರ ಮೇಲೆ ಗೂಢಚರ್ಯೆ ನಡೆಸಲು ಬಳಸಿದೆಯೇ ಅಥವಾ ಇಲ್ಲವೇ ಎಂಬುದನ್ನು ಮಾತ್ರ ತಿಳಿಯಬೇಕಿದೆ ಎಂದು ಪೀಠ ಹೇಳಿದೆ.
Last Updated 26 ಅಕ್ಟೋಬರ್ 2021, 11:02 IST
ಪೆಗಾಸಸ್ ಗೂಢಚರ್ಯೆ: ತನಿಖೆ ಕುರಿತಂತೆ ನಾಳೆ ಸುಪ್ರೀಂ ಕೋರ್ಟ್ ತೀರ್ಪು

ಪೆಗಾಸಸ್‌| ಕೇಂದ್ರದ ನಡೆ ಶಂಕಾಸ್ಪದ: ಸಂವಾದದಲ್ಲಿ ಅಭಿಪ್ರಾಯ

‘ಪೆಗಾಸಸ್‌ ಗೂಢಚರ್ಯೆ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ನಡೆಯೇ ಶಂಕಾಸ್ಪದವಾಗಿದೆ. ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ಗೂಢಚರ್ಯೆಗೆ ಸಂಬಂಧಿಸಿದ ಮಾಹಿತಿ ಬಹಿರಂಗಪಡಿಸದಿರುವ ಧೋರಣೆ ಸರಿಯಲ್ಲ’ ಎಂಬ ಅಭಿಪ್ರಾಯ ‘ಪ್ರಜಾವಾಣಿ’ ಬಹುಮಾಧ್ಯಮ ವೇದಿಕೆಯಲ್ಲಿ ಗುರುವಾರ ನಡೆದ ಸಂವಾದದಲ್ಲಿ ವ್ಯಕ್ತವಾಯಿತು.
Last Updated 16 ಸೆಪ್ಟೆಂಬರ್ 2021, 19:13 IST
ಪೆಗಾಸಸ್‌| ಕೇಂದ್ರದ ನಡೆ ಶಂಕಾಸ್ಪದ: ಸಂವಾದದಲ್ಲಿ ಅಭಿಪ್ರಾಯ

ಕಾಂಗ್ರೆಸ್ಸಿಗರು ‘ಬೇಹುಗಾರಿಕೆಯ ಜೇಮ್ಸ್‌ಬಾಂಡ್‌ಗಳು’: ಕೇಂದ್ರ ಸಚಿವ ನಖ್ವಿ  

ಪೆಗಾಸಸ್ ಗೂಢಚರ್ಯೆ ಆರೋಪಗಳ ಕುರಿತ ಚರ್ಚೆಗೆ ಆಗ್ರಹಿಸಿ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ‘ಕಾಂಗ್ರೆಸ್‌ ಪಕ್ಷವು ಅಧಿಕಾರದಲ್ಲಿದ್ದಾಗ ‘ಬೇಹುಗಾರಿಕೆಯ ಜೇಮ್ಸ್ ಬಾಂಡ್’ನಂತೆ ವರ್ತಿಸಿದೆ. ಆದರೆ, ಈಗ ಸುಳ್ಳುಗಳ ಮೂಲಕ ಸಂಸತ್ತಿನ ಸಮಯ ಹಾಳು ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
Last Updated 1 ಆಗಸ್ಟ್ 2021, 8:23 IST
ಕಾಂಗ್ರೆಸ್ಸಿಗರು ‘ಬೇಹುಗಾರಿಕೆಯ ಜೇಮ್ಸ್‌ಬಾಂಡ್‌ಗಳು’: ಕೇಂದ್ರ ಸಚಿವ ನಖ್ವಿ  

ಆಳ–ಅಗಲ| ಪೆಗಾಸಸ್‌ ಕಣ್ಗಾವಲು ಕೋಟೆ ಬಯಲು

ಬೇಹುಗಾರಿಕೆಯ ಜಾಡು ಹಿಡಿದು ಜಾಗತಿಕ ಮಟ್ಟದಲ್ಲಿ ನಡೆದ ತನಿಖೆ ಸದ್ಯದ ಬಹುಚರ್ಚಿತ ವಿಷಯ. ಪ್ಯಾರಿಸ್ ಮೂಲದ ಲಾಭರಹಿತ ಸಂಘಟನೆ ‘ಫಾರ್‌ಬಿಡನ್ ಸ್ಟೋರೀಸ್‘ ಮತ್ತು ಮಾನವ ಹಕ್ಕುಗಳ ಸಂಘಟನೆಯಾದ ‘ಅಮ್ನೆಸ್ಟಿ ಇಂಟರ್‌ನ್ಯಾಷನಲ್’ ಸೇರಿ ನಡೆಸಿದ ತನಿಖೆಯ ಅಂಶಗಳು ಬಯಲಾಗಿವೆ. ತಮ್ಮ ದೇಶದ ರಾಜಕಾರಣಿಗಳು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ಮೇಲೆ ಆಯಾ ದೇಶಗಳ ಸರ್ಕಾರಗಳು ಬೇಹುಗಾರಿಕೆ ನಡೆಸಿವೆ ಎಂದು ವರದಿ ಅಭಿಪ್ರಾಯಪಟ್ಟಿದೆ. ಬೇಹುಗಾರಿಕೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಾಗಿದೆ. ಅದುವೇ ‘ಪೆಗಾಸಸ್’ ಎಂಬ ಕುತಂತ್ರಾಂಶ.
Last Updated 22 ಜುಲೈ 2021, 19:30 IST
ಆಳ–ಅಗಲ| ಪೆಗಾಸಸ್‌ ಕಣ್ಗಾವಲು ಕೋಟೆ ಬಯಲು

ಕಂಪ್ಯೂಟರ್‌ಗೆ ಕಣ್ಗಾವಲು ಕೇಂದ್ರಕ್ಕೆ ‘ಸುಪ್ರೀಂ’ ನೋಟಿಸ್‌

ಕಂಪ್ಯೂಟರ್‌ಗಳ ಮೇಲೆ ಕಣ್ಗಾವಲು ಇರಿಸಲು ಕೇಂದ್ರದ 10 ಸಂಸ್ಥೆಗಳಿಗೆ ಅವಕಾಶ ನೀಡಿ ಕೇಂದ್ರ ಸರ್ಕಾರ ಕಳೆದ ಡಿಸೆಂಬರ್‌ 20ರಂದು ಹೊರಡಿಸಿದ ಅಧಿಸೂಚನೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆಗೆ ಎತ್ತಿಕೊಂಡಿದೆ.
Last Updated 14 ಜನವರಿ 2019, 19:30 IST
ಕಂಪ್ಯೂಟರ್‌ಗೆ ಕಣ್ಗಾವಲು ಕೇಂದ್ರಕ್ಕೆ ‘ಸುಪ್ರೀಂ’ ನೋಟಿಸ್‌
ADVERTISEMENT

ಜನತಂತ್ರದ ಬೆನ್ನು ಇರಿವ ಬೇಹುಗಾರಿಕೆ ಕಣ್ಣುಗಳು

ಕಾನೂನಿನ ಚೌಕಟ್ಟಿನಲ್ಲಿ ಬದುಕು ಸಾಗಿಸುವ ಜನರ ನಿತ್ಯ ವ್ಯವಹಾರಗಳ ಮೇಲೆ ಪ್ರಭುತ್ವ ಭೂತ ಕನ್ನಡಿ ಇಡುವುದು ನಾಗರಿಕ ಸಮಾಜದ ಲಕ್ಷಣವಲ್ಲ
Last Updated 24 ಡಿಸೆಂಬರ್ 2018, 19:53 IST
ಜನತಂತ್ರದ ಬೆನ್ನು ಇರಿವ ಬೇಹುಗಾರಿಕೆ ಕಣ್ಣುಗಳು
ADVERTISEMENT
ADVERTISEMENT
ADVERTISEMENT