ನವದೆಹಲಿ: 2017ರಲ್ಲಿ ಭಾರತ ಸರ್ಕಾರವು ಇಸ್ರೇಲ್ನೊಂದಿಗಿನ ಒಪ್ಪಂದದ ಭಾಗವಾಗಿ ಪೆಗಾಸಸ್ ಗೂಢಚರ್ಯೆ ತಂತ್ರಾಂಶ ಖರೀದಿಸಿದೆ ಎಂಬ ನ್ಯೂಯಾರ್ಕ್ ಟೈಮ್ಸ್ ವರದಿಯ ಆಧಾರದ ಮೇಲೆ ಕಾಂಗ್ರೆಸ್ ಪಕ್ಷವು ಶನಿವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಪೆಗಾಸಸ್ ಗೂಢಚರ್ಯೆ ಬಳಸಿ ಅಕ್ರಮವಾಗಿಬೇಹುಗಾರಿಕೆಮಾಡುವುದು ದೇಶದ್ರೋಹಕ್ಕೆ ಸಮಾನವಾಗಿದೆ ಎಂದು ಹೇಳಿದೆ.

ಇದನ್ನೂ ಓದಿ:2017ರ ಭಾರತ– ಇಸ್ರೇಲ್ ಒಪ್ಪಂದದಲ್ಲಿ ‘ಪೆಗಾಸಸ್’ ಖರೀದಿ: ನ್ಯೂಯಾರ್ಕ್ ಟೈಮ್ಸ್

'ಮೋದಿ ಸರ್ಕಾರವು ಭಾರತದ ಶತ್ರುಗಳಂತೆ ವರ್ತಿಸಿದೆ.ದೇಶದ ನಾಗರಿಕರ ವಿರುದ್ಧ ಯುದ್ಧ ಅಸ್ತ್ರವನ್ನು ಬಳಸಿದ್ದು ಏಕೆ? ಪೆಗಾಸಸ್ ಬಳಸಿ ಅಕ್ರಮವಾಗಿ ಗೂಢಚಾರಿಕೆ ಮಾಡುವುದು ದೇಶದ್ರೋಹಕ್ಕೆ ಸಮ. ಯಾರೂ ಕಾನೂನಿಗಿಂತ ದೊಡ್ಡವರಲ್ಲ. ನ್ಯಾಯ ಒದಗಿಸುವುದನ್ನು ನಾವು ಖಾತ್ರಿಪಡಿಸಲಿದ್ದೇವೆ' ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ.

ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, 2017ರ ಭಾರತ ಮತ್ತು ಇಸ್ರೇಲ್ ನಡುವೆ ಸುಮಾರು ಎರಡು ಶತಕೋಟಿ ಅಮೆರಿಕನ್ ಡಾಲರ್ ಮೊತ್ತದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರ ಸಾಧನಗಳ ಒಪ್ಪಂದದಲ್ಲಿ ಪೆಗಾಸಸ್ ಗೂಢಚರ್ಯೆ ತಂತ್ರಾಂಶ ಹಾಗೂ ಕ್ಷಿಪಣಿ ವ್ಯವಸ್ಥೆಯು ಕೇಂದ್ರಬಿಂದುವಾಗಿದ್ದವು ಎಂದು ಉಲ್ಲೇಖಿಸಿದೆ.

ನ್ಯೂಯಾರ್ಕ್ ಟೈಮ್ಸ್ ವರದಿ ಕುರಿತು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿದಾಗ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಈ ಹಿಂದೆ ಇಸ್ರೇಲ್ನ ಖಾಸಗಿ ಭದ್ರತಾ ಸಂಸ್ಥೆ ಎನ್ಎಸ್ಒ ಗ್ರೂಪ್ ತಯಾರಿಸಿದ ಪೆಗಾಸಸ್ ಕುತಂತ್ರಾಂಶವು ವಿವಿಧ ಸರ್ಕಾರಗಳ ಅಧಿಕೃತ ಗೂಢಚರ್ಯೆ ಸಾಧನವಾಗಿಬಳಕೆಯಾಗಿದೆ ಎಂದು ವರದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.