ಸ್ಯಾನ್ಫ್ರಾನ್ಸಿಸ್ಕೊ(ಅಮೆರಿಕ)(ರಾಯಿಟರ್ಸ್): ಕೃತಕಬುದ್ಧಿಮತ್ತೆ (ಎಐ) ಆಧಾರಿತ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುವ ನೂತನ ಐಪ್ಯಾಡ್ನ ಮಾದರಿಗಳನ್ನು ಪ್ರದರ್ಶಿಸುವ ಸಂಬಂಧ ಆ್ಯಪಲ್ ಕಂಪನಿಯು ವರ್ಚುವಲ್ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಿತ್ತು.

ತನ್ನ ಪ್ರತಿಸ್ಪರ್ಧಿ ಕಂಪನಿಗಳು ಕೃತಕ ಬುದ್ಧಿಮತ್ತೆ ಆಧರಿತ ಉತ್ಪನ್ನಗಳನ್ನು ಹೆಚ್ಚಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ಕಾರಣ, ಆ್ಯಪಲ್ ಕೂಡ ಈ ಮಾದರಿಯ ತನ್ನ ಉತ್ಪನ್ನಗಳ ಪ್ರದರ್ಶನಕ್ಕೆ ಮುಂದಾಗಿದ್ದು ಗಮನಾರ್ಹ.

ಶಿಕ್ಷಣ ಕ್ಷೇತ್ರದಲ್ಲಿರುವವರು ಮುಂದಿನ ಶೈಕ್ಷಣಿಕ ವರ್ಷವನ್ನು ಗಮನದಲ್ಲಿಟ್ಟುಕೊಂಡು ಹೊಸ ಗ್ಯಾಜೆಟ್ಗಳ ಖರೀದಿ ಬಗ್ಗೆ ನಿರ್ಧಾರ ಕೈಗೊಳ್ಳುವ ಕಾರಣ, ಆ್ಯಪಲ್ ಕಂಪನಿಯು ಹೊಸ ಐಪ್ಯಾಡ್ಗಳನ್ನು ಮೇ ತಿಂಗಳಲ್ಲಿಯೇ ಮಾರುಕಟ್ಟೆಗೆ ಪರಿಚಯಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಆ್ಯಪಲ್ ಕಂಪನಿಯು, ಸೃಜನಾತ್ಮಕ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿರುವವರನ್ನು ಗುರಿಯಾಗಿಟ್ಟುಕೊಂಡು, ಅಧಿಕ ಬೆಲೆಯ ಸಾಧನಗಳನ್ನು ‘ಐಪ್ಯಾಡ್ ಪ್ರೊ’ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ಈ ಐಪ್ಯಾಡ್ಗಳಲ್ಲಿ, ಮ್ಯಾಕ್ಬುಕ್ ಲ್ಯಾಪ್ಟಾಪ್ಗಳಲ್ಲಿ ಬಳಸಲಾಗುವ ಚಿಪ್ಗಳನ್ನು ಅಳವಡಿಸಲಾಗಿರುತ್ತದೆ. ಆದರೆ, ಈ ಚಿಪ್ಗಳನ್ನು ಮೇಲ್ದರ್ಜೆಗೇರಿಸಿರುವ ಜೊತೆಗೆ, ಕೃತಕಬುದ್ಧಿಮತ್ತೆ ಆಧರಿತ ಕಾರ್ಯಗಳಿಗೆ ಅಗತ್ಯವಿರುವ ಕ್ಷಮತೆಯನ್ನು ಹೊಂದಿರುವ ಹೊಸ ಪ್ರೊಸೆಸರ್ಗಳನ್ನು ಸಹ ಇವುಗಳಲ್ಲಿ ಅಳವಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಆ್ಯಪಲ್ನ ಪ್ರತಿಸ್ಪರ್ಧಿ ಕಂಪನಿಗಳಾದ ಮೈಕ್ರೊಸಾಫ್ಟ್ ಮತ್ತು ಅಲ್ಫಾಬೆಟ್ನ ಗೂಗಲ್, ಈಗಾಗಲೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ತಮ್ಮ ಉತ್ಪನ್ನಗಳಲ್ಲಿ ಪರಿಚಯಿಸಿವೆ. ಇ–ಮೇಲ್ ಸಿದ್ಧಪಡಿಸುವುದು ಸೇರಿದಂತೆ ಹಲವು ಕಾರ್ಯಗಳಿಗೆ ‘ವರ್ಚುವಲ್ ಸಹಾಯಕ’ನ ಕಾರ್ಯ ನಿರ್ವಹಿಸುವ ಚಾಟ್ಬಾಟ್ಗಳನ್ನು ಸಹ ಪರಿಚಯಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.