ವಾಟ್ಸ್ಆ್ಯಪ್‌ಗಿಂತ ಮೊದಲು ದೇಶದಲ್ಲೂ ಜನಪ್ರಿಯವಾಗಿದ್ದ ವಿ-ಚಾಟ್ ಎಂಬ ಸಂದೇಶ ಸಂವಹನ ಆ್ಯಪ್‌ಗೆ ಈಗ ಜಗತ್ತಿನಾದ್ಯಂತ ನೂರು ಕೋಟಿ ಬಳಕೆದಾರರಿದ್ದಾರೆ. ಚೀನಾ ಮೂಲದ ಈ ಆ್ಯಪ್, ಚೀನಾದ ಹೊರಗಿನ ಬಳಕೆದಾರರು ಹಂಚಿಕೊಳ್ಳುವ ಡಾಕ್ಯುಮೆಂಟ್‌ಗಳು ಮತ್ತು ಚಿತ್ರಗಳನ್ನು ಮಾನಿಟರ್ ಮಾಡುತ್ತಿದೆ ಎಂಬ ಅಂಶ ಬಯಲಾಗಿದೆ.

ಅಂತರಜಾಲ ದಿಗ್ಗಜ ಕಂಪನಿಯಾಗಿರುವ ಟೆನ್ಸೆಂಟ್ ಬೆಂಬಲಿತ ವಿಚಾಟ್, ತನ್ನ ಅಂತರರಾಷ್ಟ್ರೀಯ ಬಳಕೆದಾರರ ಮೇಲೆ ಗುಪ್ತವಾಗಿ ಹದ್ದಿನ ಕಣ್ಣಿರಿಸಿದ್ದು, ಜನರು ಹಂಚಿಕೊಳ್ಳುವ ಫೈಲ್‌ಗಳನ್ನು ತಪಾಸಣೆಗೊಳಪಡಿಸುತ್ತಿದೆ ಎಂದು ಇತ್ತೀಚೆಗೆ ವಾಟ್ಸ್ಆ್ಯಪ್‌ನಲ್ಲಿ ಪೆಗಾಸಸ್ ವೈರಸ್ ದಾಳಿ ಬಗ್ಗೆ ಎಚ್ಚರಿಕೆ ನೀಡಿದ್ದ ಸಂಶೋಧನಾ ತಂಡ ‘ಸಿಟಿಜನ್ ಲ್ಯಾಬ್’ ಅಧ್ಯಯನ ವರದಿಯೊಂದರಲ್ಲಿ ತಿಳಿಸಿದೆ.

ಚೀನಾದ ವಿಚಾಟ್ ಬಳಕೆದಾರರು ಹಂಚಿಕೊಳ್ಳುತ್ತಿರುವ ವಿಷಯ ಮತ್ತು ಫೈಲ್‌ಗಳನ್ನು ಈಗಾಗಲೇ ಸೆನ್ಸಾರ್ ಮಾಡಲಾಗುತ್ತಿದೆ. ಆದರೆ, ಚೀನಾ ಹೊರಗಿನ ದೇಶದವರ ವಿಷಯಗಳನ್ನು ಸದ್ಯಕ್ಕೆ ಮಾನಿಟರ್ ಮಾಡಲಾಗುತ್ತಿದೆಯಷ್ಟೇ ಎಂದು ವರದಿಯಲ್ಲಿ ತಿಳಿಸಲಾಗಿದೆ.

'ರಾಜಕೀಯವಾಗಿ ಸೂಕ್ಷ್ಮ' ಎನಿಸುವ ವಿಷಯಗಳನ್ನು ಚೀನಾದಲ್ಲಿ ಈಗಾಗಲೇ ಸೆನ್ಸಾರ್ ಮಾಡಲಾಗುತ್ತಿದೆ ಎಂದು ಟೊರಂಟೋ ಯುನಿವರ್ಸಿಟಿಯ ಸುರಕ್ಷತಾ ಸಂಶೋಧನಾ ತಂಡ 'ಸಿಟಿಜನ್ ಲ್ಯಾಬ್'ನ ಸಂಶೋಧಕರು ತಮ್ಮ 'ವಿ ಚಾಟ್, ದೇ ವಾಚ್' ಎಂಬ ಅಧ್ಯಯನ ವರದಿಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.