ಬೆಂಗಳೂರು: ಪುಟ್ಟ ವಿನ್ಯಾಸದಲ್ಲಿ ಗರಿಷ್ಠ ಶಬ್ದ ಹೊರಹೊಮ್ಮಿಸುವ ಸೌಂಡ್ ಬಾರ್ ಅನ್ನು ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಗೋವೊ ಬಿಡುಗಡೆ ಮಾಡಿದ್ದು, ಗೋಸರೌಂಡ್ 300 ಎಂಬ ಹೆಸರಿನ ಈ ಸಾಧನದ ಆರಂಭಿಕ ಬೆಲೆಯನ್ನು ₹1,499ಕ್ಕೆ ನಿಗದಿಪಡಿಸಿದೆ.

ಶ್ರವಣ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಗೋವೊ, ಹಬ್ಬದ ಸಂದರ್ಭದಲ್ಲಿ ಈ ಸುಧಾರಿತ ಸಾಧವನ್ನು ಬಿಡುಗಡೆ ಮಾಡಿದೆ. ಸಂಗೀತ, ಸಿನಿಮಾ ಹಾಗೂ ಗೇಮಿಂಗ್ ಇಷ್ಟಪಡುವವರಿಗೆ ಸ್ಪಷ್ಟ ಹಾಗೂ ಅದ್ಭುತ ಶಬ್ಧ ಹೊರಹೊಮ್ಮಿಸುವ ಮೂಲಕ ಹೊಸ ಅನುಭೂತಿ ನೀಡುವ ಸಾಧನ ಇದಾಗಿದೆ. ಗಾತ್ರದಲ್ಲಿ ಕಿರಿದಾದರೂ, ಹೊರಹೊಮ್ಮಿಸುವ ಶಬ್ದ ದೊಡ್ಡದು ಎಂದು ಕಂಪನಿ ಹೇಳಿದೆ.

2027ರ ಹೊತ್ತಿಗೆ ಭಾರತದಲ್ಲಿನ ಸ್ಪೀಕರ್ ಮಾರುಕಟ್ಟೆಯಲ್ಲಿ ಇದು ಶೇ 9.39ರಷ್ಟು ವೃದ್ಧಿ ಕಾಣಲಿದೆ ಎಂದು ಅಂದಾಜಿಸಲಾಗಿದೆ. ಅದರಲ್ಲೂ ಗೃಹ ಬಳಕೆಯ ಆಡಿಯೊ ಉತ್ಪನ್ನಗಳಲ್ಲಿ ಗೋವೊ ಬೆಳವಣಿಗೆಯ ಹಾದಿ ಕಾಣಲಿದೆ.

ಇದನ್ನು ಗಮನದಲ್ಲಿಟ್ಟುಕೊಂಡು ಗೋವೊ ಕಂಪನಿಯು ಗೋಸರೌಂಡ್ 300 ಸೌಂಡ್ಬಾರ್ ಹಲವು ಹೊಸ ಬಗೆಯ ಸೌಕರ್ಯಗಳನ್ನು ಹೊರತಂದಿದೆ. ಅದು ಹೊರಹೊಮ್ಮಿಸುವ ಅದ್ಭುತ ಶಬ್ದ, ಆಕರ್ಷಕ ವಿನ್ಯಾಸ, ಉತ್ತಮ ಬಾಸ್ ಹೊರಹೊಮ್ಮಿಸುವಿಕೆ ಹಾಗೂ ಆಕರ್ಷಕ ಬೆಲೆಯಿಂದಾಗಿ ಗ್ರಾಹಕರ ಅಚ್ಚುಮೆಚ್ಚು ಎನಿಸಿಕೊಳ್ಳಲಿದೆ. 52 ಮಿ.ಮೀ. ಡ್ರೈವರ್ಸ್ ಹೊಂದಿರುವ ಈ ಸೌಂಡ್ಬಾರ್ ಗರಿಷ್ಠ 24 ವಾಟ್ನ ಶಬ್ದವನ್ನು ಹೊರಹೊಮ್ಮಿಸಲಿದೆ. ಆ ಮೂಲಕ ಕೇಳುಗರ ಕಿವಿಗೆ ಹಿತ ನೀಡುವ ತಂತ್ರಜ್ಞಾನ ಇದರದ್ದು ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಗೋಸರೌಂಡ್ 300 ಸೌಂಡ್ಬಾರ್ ಕುರಿತು ಗೊವೊ ಸಂಸ್ಥಾಪಕ ವರುಣ್ ಪೋದ್ದಾರ್ ಮಾತನಾಡಿ, ‘ನಾವೀನ್ಯತೆ ಮತ್ತು ತಂತ್ರಜ್ಞಾನ ಎರಡೂ ಹದವಾಗಿ ಬೆರೆತ ಸಾಧನ ಇದಾಗಿದೆ. ಗುಣಮಟ್ಟದ ಉತ್ಪನ್ನಗಳನ್ನು ಇನ್ನಷ್ಟು ಹೊರತರುವ ಹಾಗೂ ಈ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸುವ ಯೋಜನೆ ಕಂಪನಿಯದ್ದಾಗಿದೆ. ಬಹಳಷ್ಟು ಜನರು ಸ್ಮಾರ್ಟ್ ಸ್ಪೀಕರ್ಗಳನ್ನು ಬಳಸುತ್ತಿರುವ ಈ ಹೊತ್ತಿನಲ್ಲಿ, ಕಂಪನಿಯು ಗೋವೊ ಗೋಸರೌಂಡ್ 300 ಸೌಂಡ್ಬಾರ್ ಅನ್ನು ಪರಿಚಯಿಸುತ್ತಿದೆ. ಆ ಮೂಲಕ ಹೊಸ ತಂತ್ರಜ್ಞಾನ ಇಷ್ಟಪಡುವ ನಮ್ಮ ಗ್ರಾಹಕರಿಗೆ ಈ ನೂತನ ತಂತ್ರಜ್ಞಾನ ಇನ್ನಷ್ಟು ಇಷ್ಟವಾಗುವ ಭರವಸೆ ಇದೆ’ ಎಂದಿದ್ದಾರೆ.

ಗೋವೊ ಗೋಸರೌಂಡ್ 300 ಸೌಂಡ್ಬಾರ್ನ ಸೌಕರ್ಯಗಳು

ಅದ್ಭುತ 3ಡಿ ಸರೌಂಡ್ ಸೌಂಡ್ ಹೊಂದಿರುವ ಗೊಸರೌಂಡ್ 300 ಸ್ಪೀಕರ್, ಡೈನಮಿಕ್ ಎಲ್ಇಡಿ ಲೈಟ್ಸ್ ಹೊಂದಿವೆ. ಇದು ವೀಕ್ಷಿಸುವ ಕಾರ್ಯಕ್ರಮಕ್ಕೆ ತಕ್ಕಂತೆ ಆವರಣದದಲ್ಲಿ ಬೆಳಕಿನ ಮೂಲಕ ಆನಂದ ಹೆಚ್ಚಿಸಲಿದೆ.

ಉತ್ತಮ ಬ್ಯಾಟರಿ ಬ್ಯಾಕ್ಅಪ್: 8 ಗಂಟೆಗಳ ಪ್ಲೇಟೈಮ್ ಹೊಂದಿರುವ ಗೊಸರೌಂಡ್ ಮೂಲಕ ಇಷ್ಟದ ಸಂಗೀತ ಆಲಿಸಲು, ಮೆಚ್ಚಿನ ಸಿನಿಮಾ ವೀಕ್ಷಿಸಲು ಹಾಗೂ ಕುತೂಹಲ ಹೆಚ್ಚಿಸುವ ಗೇಮ್ಗಳನ್ನು ತಡೆರಹಿತವಾಗಿ ಆಡುವಷ್ಟರ ಮಟ್ಟಿಗೆ ಇದರ ಬ್ಯಾಟರಿ ಬ್ಯಾಕ್ಅಪ್ ಇದೆ.

ಬಹು ಸಾಧನಗಳಿಗೆ ಸಂಪರ್ಕ: ಹಲವು ಸಾಧನಗಳಿಗೆ ಸಂಪರ್ಕ ಸಾಧಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದಕ್ಕಾಗಿ ಎಯುಎಕ್ಸ್, ಯುಎಸ್ಬಿ, ಟಿಎಫ್ ಕಾರ್ಡ್ ಇನ್ಪುಟ್ಸ್ ಹಾಗೂ ಎಫ್ಎಂ ಇದರಲ್ಲಿದೆ.

ಬ್ಲೂಟೂತ್ ವಿ5.3: ಮೊಬೈಲ್ಗಳನ್ನು ಯಾವುದೇ ವಿಳಂಬವಿಲ್ಲದೆ ಗೊಸರೌಂಡ್ನೊಂದಿಗೆ ಸಂಪರ್ಕಿಸಬಹುದಾಗಿದೆ.

ಗೋವೊ ಗೋಸರೌಂಡ್ 300 ಸೌಂಡ್ಬಾರ್ನ ಬೆಲೆ ₹5,999 ಇದ್ದರೂ, ಅಮೆಜಾನ್ ಹಾಗೂ ರಿಟೇಲ್ ಮಳಿಗೆಯಲ್ಲಿ ಈ ಸಾಧನ ₹1499ಕ್ಕೆ ಲಭ್ಯ. ಪ್ಲಾಟಿನಂ ಕಪ್ಪು ಬಣ್ಣದ ಸಾಧನ ಇದಾಗಿದ್ದು, ಒಂದು ವರ್ಷ ವಾರಂಟಿಯೊಂದಿಗೆ ಸಿಗಲಿದೆ ಎಂದು ಕಂಪನಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.