ಬೆಂಗಳೂರು: ಮೋಟೊರೊಲಾ ಕಂಪನಿಯು ‘ಜಿ’ ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ‘ಮೋಟೊ ಜಿ14’ ಹೆಸರಿನ ಈ ಸ್ಮಾರ್ಟ್‌ಫೋನ್ ಪ್ರೀಮಿಯಂ ವಿನ್ಯಾಸ ಹೊಂದಿದ್ದು, ಈ ಶ್ರೇಣಿಯ ಇತರ ಸ್ಮಾರ್ಟ್‌ಫೋನ್‌ಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಇದು 6.5 ಇಂಚಿನ ಪರದೆಯನ್ನು ಹೊಂದಿದೆ. ವಾತಾವರಣದಲ್ಲಿನ ಬೆಳಕು ಕಡಿಮೆ ಇದ್ದಾಗ, ಕಣ್ಣಿಗೆ ತ್ರಾಸವಾಗದಂತೆ ಇದು ನೋಡಿಕೊಳ್ಳುತ್ತದೆ. 4 ಜಿಬಿ ರ್‍ಯಾಮ್ ಹೊಂದಿರುವ ಈ ಸ್ಮಾರ್ಟ್‌ಫೋನ್‌ನಲ್ಲಿ 128 ಜಿಬಿ ಆಂತರಿಕ ಮೆಮೊರಿ ಇದೆ. ಇದನ್ನು ಮೈಕ್ರೊ ಎಸ್‌ಡಿ ಕಾರ್ಡ್ ಬಳಸಿ 1 ಟಿ.ಬಿ.ವರೆಗೆ ವಿಸ್ತರಿಸಿಕೊಳ್ಳುವ ಅವಕಾಶ ಇದೆ. ಅಲ್ಲದೆ, ಎರಡು ಸಿಮ್ ಸ್ಲಾಟ್ ಇದರಲ್ಲಿ ಲಭ್ಯವಿದೆ.

ಈ ಸ್ಮಾರ್ಟ್‌ಫೋನ್ 5000 ಎಂಎಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ‘ಜಿ ಸರಣಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ನಾವು, ಎಲ್ಲರಿಗೂ ಪ್ರೀಮಿಯಂ ಅನುಭವ ನೀಡುವ ಸ್ಮಾರ್ಟ್‌ಫೋನ್‌ಗಳು ಸಿಗುವಂತೆ ಮಾಡುವ ಉದ್ದೇಶ ಹೊಂದಿದ್ದೇವೆ’ ಎಂದು ಮೋಟೊರೊಲಾ ಏಷ್ಯಾ ಪ್ಯಾಸಿಫಿಕ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಶಾಂತ್ ಮಣಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.