ಬೆಂಗಳೂರು: ಲೆನೊವೊ ಒಡೆತನದ ಸ್ಮಾರ್ಟ್ಫೋನ್ ಮತ್ತು ಗ್ಯಾಜೆಟ್ ತಯಾರಿಕಾ ಕಂಪನಿ ಮೊಟೊರೊಲಾ, ಚೀನಾ ಮಾರುಕಟ್ಟೆಗೆ ನೂತನ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ.

5G ನೆಟ್ವರ್ಕ್ ಬೆಂಬಲ ಹೊಂದಿರುವ ಮೊಟೊರೊಲಾ ಜಿ ಸರಣಿಯ ಹೊಸ Moto G53 5G ಸ್ಮಾರ್ಟ್ಫೋನ್, 6.5 ಇಂಚಿನ ಎಚ್ಡಿ+ ಡಿಸ್ಪ್ಲೇ ಹೊಂದಿದೆ.

ಸ್ನ್ಯಾಪ್ಡ್ರ್ಯಾಗನ್ ಪ್ರೊಸೆಸರ್ ಜತೆಗೆ 4GB + 128GB ಮತ್ತು 8 GB RAM ಮತ್ತು 128 GB ಸ್ಟೋರೇಜ್ ಇರುವ ಎರಡು ಮಾದರಿಗಳಲ್ಲಿ ನೂತನ ಸ್ಮಾರ್ಟ್ಫೋನ್ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ. ಅಝ್ಯುರ್ ವೈಟ್ ಮತ್ತು ಕ್ಸುನ್ವು ಬ್ಲ್ಯಾಕ್ ಎಂಬ ಎರಡು ಬಣ್ಣಗಳ ಆಯ್ಕೆ ಇರಲಿದೆ. ಜತೆಗೆ 5,000mAh ಬ್ಯಾಟರಿ ಹಾಗೂ 18W ಫಾಸ್ಟ್ ಚಾರ್ಜಿಂಗ್ ಬೆಂಬಲ ಇರಲಿದೆ.

ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಹೊಸ ಸ್ಮಾರ್ಟ್ಫೋನ್ ಪ್ರಸ್ತುತ ಲಭ್ಯವಿದ್ದು, ಭಾರತ ಸಹಿತ ಏಷ್ಯಾದ ಇತರ ಮಾರುಕಟ್ಟೆಗಳಲ್ಲಿ ಲಭ್ಯತೆ ಬಗ್ಗೆ ಕಂಪನಿ ವಿವರ ಬಹಿರಂಗಪಡಿಸಿಲ್ಲ.

Redmi Note 12: 200 ಮೆಗಾಪಿಕ್ಸೆಲ್ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲಿದೆ ರೆಡ್ಮಿ

ಹೊಸ Moto G53 5G ಸ್ಮಾರ್ಟ್ಫೋನ್ನಲ್ಲಿ ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 2 ಮೆಗಾಪಿಕ್ಸೆಲ್ ಮ್ಯಾಕ್ರೊ ಕ್ಯಾಮೆರಾ ಲೆನ್ಸ್ ಇದೆ. ಅಲ್ಲದೆ, ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಸೆನ್ಸರ್ ಇರಲಿದೆ ಎಂದು ಮೊಟೊ ಹೇಳಿದೆ.

Asus ROG Phone 6: ಸ್ನ್ಯಾಪ್ಡ್ರ್ಯಾಗನ್ 8+ ಜನರೇಶನ್ 1 ಸ್ಮಾರ್ಟ್ಫೋನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.