ಬೆಂಗಳೂರು: ನೋಕಿಯಾ ಕಂಪನಿ ಭಾರತದಲ್ಲಿ ಹೊಸ ಆ್ಯಂಡ್ರಾಯ್ಡ್ ಸ್ಮಾರ್ಟ್ ಟಿವಿ ಬಿಡುಗಡೆ ಮಾಡಿದೆ. 43 ಇಂಚಿನ 4ಕೆ ಸ್ಮಾರ್ಟ್ ಟಿವಿ ವಿನ್ಯಾಸದಿಂದಲೂ ಗಮನ ಸೆಳೆಯುತ್ತಿದೆ.

ಜೂನ್ 8ರಿಂದ ಫ್ಲಿಪ್ಕಾರ್ಟ್ನಲ್ಲಿ ನೋಕಿಯಾ 43 ಇಂಚು ಸ್ಮಾರ್ಟ್ ಟಿವಿ ಖರೀದಿಗೆ ಲಭ್ಯವಿದೆ. ಇದರ ಬೆಲೆ ₹31,999 ನಿಗದಿಯಾಗಿದೆ.

ಆ್ಯಂಡ್ರಾಯ್ಡ್ 9 ಹೊಂದಿರುವ ಸ್ಮಾರ್ಟ್ ಟಿವಿಗೆ ಮಾಲಿ 450 ಕ್ವಾಡ್ ಕೋರ್ ಗ್ರಾಫಿಕ್ ಪ್ರೊಸೆಸರ್ ಜೊತೆಯಾಗಿದೆ. ಸಿಎ53 ಕ್ವಾಡ್ಕೋರ್ 1ಗಿಗಾ ಹರ್ಟ್ಸ್ ಪ್ರೊಸೆಸರ್ ಹಾಗೂ 2.25 ಜಿಬಿ ರ್ಯಾಮ್, ಆ್ಯಪ್ಗಳ ಸಂಗ್ರಹಕ್ಕೆ 16 ಜಿಬಿ ಸಂಗ್ರಹ ಸಾಮರ್ಥ್ಯ ಹೊಂದಿದೆ.

4ಕೆ ರೆಸಲ್ಯೂಷನ್ (3840 x 2160) ಅಲ್ಟ್ರಾ ಎಚ್ಡಿ ಎಲ್ಇಡಿ ಫ್ಲ್ಯಾಟ್ ಡಿಸ್ಪ್ಲೇ ಪ್ಯಾನೆಲ್, 178 ಡಿಗ್ರಿ ವೀಕ್ಷಣೆ ಕೋನ, 16:9 ಆಸ್ಪೆಕ್ಟ್ ರೇಷಿಯೊ ಹಾಗೂ 60ಹರ್ಟ್ಸ್ ರಿಫ್ರೆಷ್ ರೇಟ್ ಹೊಂದಿದೆ. ಜೆಬಿಎಲ್ ಅಭಿವೃದ್ಧಿ ಪಡಿಸಿರುವ 2 ಸ್ಪೀಕರ್ಗಳನ್ನು ಟಿವಿ ಒಳಗೊಂಡಿದ್ದು, ಡಿಟಿಎಸ್ ಹಾಗೂ ಡಾಲ್ಬಿ ಆಡಿಯೊ ಎರಡರ ಸೌಲಭ್ಯವನ್ನೂ ಹೊಂದಿದೆ. ಸ್ಪೀಕರ್ ಸಾಮರ್ಥ್ಯ 24 ವ್ಯಾಟ್ ಇದೆ.

ನೆಟ್ಫ್ಲಿಕ್ಸ್, ಯುಟ್ಯೂಬ್, ಡಿಸ್ನಿ ಹಾಟ್ಸ್ಟಾರ್+ ಸೇರಿದಂತೆ ಬಹುತೇಕ ಎಲ್ಲ ವಿಡಿಯೊ ಸ್ಟ್ರೀಮಿಂಗ್ ಅಪ್ಲಿಕೇಷನ್ಗಳನ್ನು ಒಳಗೊಂಡಿದೆ. ಇತರೆ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಲು ಗೂಗಲ್ ಪ್ಲೇ ಸ್ಟೋರ್ ಇದೆ. ಮೊಬೈಲ್ನಿಂದ ಟಿವಿಗೆ ಸಂಪರ್ಕಿಸುವ ಕ್ರೋಮ್ಕಾಸ್ಟ್ ವ್ಯವಸ್ಥೆ ಒಳಗೊಂಡಿದೆ.

ವೈ–ಫೈ, ಬ್ಲೂಟೂಥ್ ಸಂಪರ್ಕ ವ್ಯವಸ್ಥೆ, ಮೂರು ಎಚ್ಡಿಎಂಐ ಪೋರ್ಟ್ಗಳು, 2 ಯುಎಸ್ಬಿ ಪೋರ್ಟ್ಗಳು, ಡಿಜಿಟಲ್ ಆಡಿಯೊ ಔಟ್ಪುಟ್, ಆರ್ಎಫ್ ಸಂಪರ್ಕ, ಅನಲಾಗ್ ಆಡಿಯೊ ಸಂಪರ್ಕಕ್ಕೆ ಪೋರ್ಟ್ ನೀಡಲಾಗಿದೆ. ಹೊಸ ಸ್ಮಾರ್ಟ್ ಟಿವಿ ತೂಕ 9.4 ಕೆ.ಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.