ನವದೆಹಲಿ: ಮೊಬೈಲ್ ಉದ್ಯಮದಲ್ಲಿನ ಮುಂಚೂಣಿ ಸಂಸ್ಥೆ ಒನ್ಪ್ಲಸ್, ತನ್ನ ಕ್ಲೌಡ್ 11 ಕಾರ್ಯಕ್ರಮದಲ್ಲಿ ಒನ್ಪ್ಲಸ್ 11 ಮೊಬೈಲ್ ಸೇರಿದಂತೆ ಹಲವಾರು ಹೊಸ ಉತ್ಪನ್ನಗಳನ್ನು ಪರಿಚಯಿಸಿದೆ. ತನ್ನ ಮೊದಲ ಆಂಡ್ರಾಯ್ಡ್ ಟ್ಯಾಬ್ಲೆಟ್ ಅನ್ನು ಕೂಡ ಬಿಡುಗಡೆಗೊಳಿಸಿದೆ.

ಕಂಪನಿಯು ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಒನ್ಪ್ಲಸ್ 11, ಒನ್ಪ್ಲಸ್ 11R, ಒನ್ಪ್ಲಸ್ ಪ್ಯಾಡ್, ಒನ್ಪ್ಲಸ್ ಬಡ್ ಪ್ರೊ 2, ಒನ್ಪ್ಲಸ್ ಟಿವಿ Q2 ಪ್ರೊ ಮತ್ತು ಮೆಕ್ಯಾನಿಕಲ್ ಕೀಬೋರ್ಡ್ ಅನ್ನು ಪರಿಚಯಿಸಿತು.

ಒನ್ಪ್ಲಸ್ ಕ್ಲೌಡ್ 11 ವೈಶಿಷ್ಟ್ಯವೆಂದರೆ ಸ್ನಾಪ್ಡ್ರಾಗನ್ 8 ಜೆನ್ 2-ಬೆಂಬಲಿತ ಒನ್ಪ್ಲಸ್ 11. ಇದು 3 ನೇ ತಲೆಮಾರಿನ ಹ್ಯಾಸೆಲ್ಬ್ಲಾಡ್ ಕ್ಯಾಮೆರಾ ಸಿಸ್ಟಮ್ ಮತ್ತು 100W ವೇಗದ ಚಾರ್ಜಿಂಗ್ನೊಂದಿಗೆ ಕಾಣಿಸಿಕೊಂಡಿದೆ. ಇದಲ್ಲದೆ, ಫೋನ್ 16GB RAM ಹೊಂದಿದೆ. ಕಂಪನಿಯು ನಾಲ್ಕು ಪ್ರಮುಖ ಆ್ಯಂಡ್ರಾಯ್ಡ್ OS ಅಪ್ಡೇಟ್ ಮತ್ತು ಐದು ವರ್ಷಗಳ ಸೆಕ್ಯುರಿಟಿ ಅಪ್ಡೇಟ್ ನೀಡುವುದಾಗಿ ಘೋಷಿಸಿದೆ. ಒನ್ಪ್ಲಸ್ 11 ಒರಿಜಿನಲ್ ವರ್ಷನ್ ಬೆಲೆ ₹56,999 ರಿಂದ ಪ್ರಾರಂಭವಾಗಲಿದೆ. ಇದು ಹಿಂದಿನ ವರ್ಷದ ಒನ್ಪ್ಲಸ್ 10 Pro ನ ಆರಂಭಿಕ ಬೆಲೆಗೆ ಹೋಲಿಸಿದರೆ ಕಡಿಮೆಯಾಗಿದೆ.

ಒನ್ಪ್ಲಸ್ 11R ಸ್ನಾಪ್ಡ್ರಾಗನ್ 8+ Gen 1 ಪ್ರೊಸೆಸರ್ ಅನ್ನು ಆಧರಿಸಿದೆ ಮತ್ತು ಫೋನ್ ಹ್ಯಾಸೆಲ್ಬ್ಲಾಡ್ ಬ್ರ್ಯಾಂಡಿಂಗ್ ಅನ್ನು ಹೊರತುಪಡಿಸಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಕೂಡ ಹೊಂದಿದೆ. ಒನ್ಪ್ಲಸ್ 11R ಬೆಲೆ ₹ 39,999 ರಿಂದ ಪ್ರಾರಂಭವಾಗುತ್ತದೆ. ಮೆಕ್ಯಾನಿಕಲ್ ಕೀಬೋರ್ಡ್ ಏಪ್ರಿಲ್ನಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.