ಬೆಂಗಳೂರು: ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್ಸಂಗ್ ತನ್ನ ಹೊಸ ಗ್ಯಾಲಕ್ಸಿ ಬಡ್ಸ್3, ಗ್ಯಾಲಕ್ಸಿ ಬಡ್ಸ್3 ಪ್ರೊ, ಗ್ಯಾಲಕ್ಸಿ ವಾಚ್7 ಮತ್ತು ಗ್ಯಾಲಕ್ಸಿ ವಾಚ್ ಅಲ್ಟ್ರಾ ಸ್ಮಾರ್ಟ್ವಾಚ್ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಮುಂಚಿತವಾಗಿ ಖರೀದಿಸಲು ಬಯಸುವ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ಘೋಷಿಸಿದೆ.

ಗ್ಯಾಲಕ್ಸಿ ವಾಚ್7 ಮತ್ತು ಗ್ಯಾಲಕ್ಸಿ ವಾಚ್ ಅಲ್ಟ್ರಾ ಸ್ಮಾರ್ಟ್ವಾಚ್ಗಳು ಎಐ ಆಧರಿತವಾದ ಸಾಧನಗಳಾಗಿದ್ದು, ಬಳಕೆದಾರ ಸ್ನೇಹಿಯಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

‘‘ಗ್ಯಾಲಕ್ಸಿ ವಾಚ್ ಅಲ್ಟ್ರಾ’ ಗ್ಯಾಲಕ್ಸಿ ವಾಚ್ ಉತ್ಪನ್ನಗಳ ಶ್ರೇಣಿಗೆ ಹೊಸತಾದ ಸೇರ್ಪಡೆಯಾಗಿದೆ. ಇದು ಟೈಟಾನಿಯಂ ಗ್ರೇಡ್ 4 ಫ್ರೇಮ್ ಮತ್ತು 10 ಎಟಿಎಂ ವಾಟರ್ ರೆಸಿಸ್ಟೆನ್ಸ್ ಸಾಮರ್ಥ್ಯ ಹೊಂದಿದೆ. ಇದರಲ್ಲಿರುವ ಎಮರ್ಜೆನ್ಸಿ ಸೈರನ್ ಅನ್ನು ಅನಿವಾರ್ಯ ಸಂದರ್ಭಗಳಲ್ಲಿ ಸುರಕ್ಷತೆಗಾಗಿ ಬಳಸಬಹುದಾಗಿದೆ. ದೀರ್ಘ ಬಾಳಿಕೆಯ ಬ್ಯಾಟರಿ ಹೊಂದಿದ್ದು,100 ಗಂಟೆಗಳವರೆಗಿನ ಪವರ್ ಸೇವಿಂಗ್ ಆಯ್ಕೆ ಒದಗಿಸುತ್ತದೆ. ಅಲ್ಲದೇ 48 ಗಂಟೆಗಳವರೆಗಿನ ಎಕ್ಸರ್ ಸೈಸ್ ಪವರ್ ಸೇವಿಂಗ್ ಸೌಲಭ್ಯ ನೀಡುತ್ತದೆ’ ಎಂದು ತಿಳಿಸಿದೆ.

ಗ್ಯಾಲಕ್ಸಿ ವಾಚ್ ಅಲ್ಟ್ರಾ ಟೈಟಾನಿಯಂ ಗ್ರೇ, ಟೈಟಾನಿಯಂ ವೈಟ್ ಮತ್ತು ಟೈಟಾನಿಯಂ ಸಿಲ್ವರ್ ಬಣ್ಣದಲ್ಲಿ ದೊರೆಯುತ್ತದೆ. 47 ಎಂಎಂ ಗಾತ್ರದಲ್ಲಿ ಲಭ್ಯವಿರುತ್ತದೆ. ಇದು 3ಎನ್ಎಂ ಚಿಪ್ಸೆಟ್ ಹೊಂದಿದೆ.

ಗ್ಯಾಲಕ್ಸಿ ವಾಚ್7 ಅನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದ್ದು, 100ಕ್ಕೂ ಹೆಚ್ಚು ವರ್ಕ್ಔಟ್ಗಳನ್ನು ನಿಖರವಾಗಿ ಟ್ರ್ಯಾಕ್ ಮಾಡಬಹುದಾದ ಸೌಲಭ್ಯವನ್ನು ಹೊಂದಿದೆ. ನಿದ್ರಾ ಸಮಯದ ವಿಶ್ಲೇಷಣೆಗಾಗಿ ಹೊಸ ಗ್ಯಾಲಕ್ಸಿ ಎಐ ಅಲ್ಗಾರಿದಮ್ ಜೊತೆಗೆ ಎಲೆಕ್ಟ್ರೋಕಾರ್ಡಿಯೋಗ್ರಾಮ್ (ಇಸಿಜಿ) ಮತ್ತು ರಕ್ತದೊತ್ತಡ (ಬಿಪಿ) ಮೇಲ್ವಿಚಾರಣೆಯನ್ನು ಇದರಲ್ಲಿ ಮಾಡಬಹುದಾಗಿದೆ.

ಗ್ಯಾಲಕ್ಸಿ ವಾಚ್7 ಅನ್ನು ಪ್ರೀ ಬುಕ್ ಮಾಡುವ ಗ್ರಾಹಕರು ₹8,000 ಮೌಲ್ಯದ ಕ್ಯಾಶ್ಬ್ಯಾಕ್ ಅಥವಾ ₹8000 ಮೌಲ್ಯದ ಬೋನಸ್ ಅನ್ನು ಪಡೆಯುತ್ತಾರೆ. ಗ್ಯಾಲಕ್ಸಿ ವಾಚ್ ಅಲ್ಟ್ರಾಅನ್ನು ಮುಂಚಿತವಾಗಿ ಬುಕ್ ಮಾಡುವ ಗ್ರಾಹಕರು ₹10,000 ಮೌಲ್ಯದ ಕ್ಯಾಶ್ಬ್ಯಾಕ್ ಅಥವಾ ₹10,000 ಮೌಲ್ಯದ ಬೋನಸ್ ಅನ್ನು ಪಡೆಯಬಹುದು ಎಂದು ಕಂಪನಿ ತಿಳಿಸಿದೆ.

ಬೆಲೆ ವಿವರ (ಮಾಡೆಲ್ : ವೇರಿಯಂಟ್ : ಬೆಲೆ )

ವಾಚ್7 : ವಾಚ್7 40 ಎಂಎಂ ಬಿಟಿ : ₹29,999

ವಾಚ್7 : ವಾಚ್7 40 ಎಂಎಂ ಎಲ್ ಟಿ ಇ : ₹33999

ವಾಚ್7 : ವಾಚ್7 44 ಎಂಎಂ ಬಿಟಿ : ₹32,999

ವಾಚ್7 : ವಾಚ್7 44 ಎಂಎಂ ಎಲ್ ಟಿ ಇ : ₹36,999

ವಾಚ್ ಅಲ್ಟ್ರಾ: ವಾಚ್ ಅಲ್ಟ್ರಾ : ₹59,999

ಬಡ್ಸ್ 3 ಸರಣಿಯ ಬೆಲೆಗಳು (ಮಾಡೆಲ್ : ಬೆಲೆ)

ಬಡ್ಸ್3 : ₹14,999

ಬಡ್ಸ್3 ಪ್ರೊ : ₹19,999

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.