ಬೆಂಗಳೂರು: ದೇಶದ ಜನಪ್ರಿಯ ಕಂಪನಿಗಳಲ್ಲಿ ಒಂದಾದ ‘ಸಿಸ್ಕಾ’ ತನ್ನ ಅಕ್ಸೆಸರೀಸ್ ಹೆಸರಿನಲ್ಲಿ ‘ಸಿಸ್ಕಾ ಡೊನ್ನಾ ಎಸ್‌ಎಸ್‌ಡಬ್ಲ್ಯು 106’ ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದೆ.

ಈ ವಾಚ್ ದೀರ್ಘಾವಧಿಯ ಬ್ಯಾಟರಿ ಬಾಳಿಕೆ, ಆಕರ್ಷಕ ವಿನ್ಯಾಸ ಹಾಗೂ ಹಲವು ವೈಶಿಷ್ಟ್ಯಗಳೊಂದಿಗೆ ಗಮನ ಸೆಳೆಯುತ್ತದೆ. ವಾಚ್ ಅನ್ನು ವಿಶೇಷವಾಗಿ ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.

ಸ್ಮಾರ್ಟ್‌ವಾಚ್‌ನಲ್ಲಿ ಮಹಿಳೆಯರಿಗಾಗಿ ಗರ್ಭಧಾರಣೆಯ ಟ್ರ್ಯಾಕಿಂಗ್ ಅನ್ನು ಸಂಯೋಜಿಸಿದೆ. ಮಗುವಿನ ನಿರೀಕ್ಷೆಯಲ್ಲಿರುವ ಮಹಿಳೆಯರಿಗೆ ಆರೋಗ್ಯವನ್ನು ಹೇಗೆ ಸುಧಾರಿಸುವುದು ಎಂಬುದರ ಕುರಿತು ಶಿಫಾರಸುಗಳನ್ನು ನೀಡುತ್ತದೆ.

ಬೆಲೆ ಮತ್ತು ಲಭ್ಯತೆ: ಸಿಸ್ಕಾ ಡೊನ್ನಾ ಎಸ್‌ಎಸ್‌ಡಬ್ಲ್ಯು 106 ಸ್ಮಾರ್ಟ್‌ವಾಚ್‌ನ ₹5,999 ರಷ್ಟಿದೆ. ಗುಲಾಬಿ, ಚಿನ್ನದ (ಸ್ವರ್ಣ) ಬಣ್ಣದಲ್ಲಿ ಲಭ್ಯವಿದೆ. ಕಂಪನಿ ಹೇಳುವ ಪ್ರಕಾರ ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ 2 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಬರುತ್ತದೆ.

ವೈಶಿಷ್ಟ್ಯಗಳು: ಮಹಿಳೆಯರ ಆರೋಗ್ಯದ ಮೇಲ್ವಿಚಾರಣಾ ನಡೆಸುವ ಉದ್ದೇಶದಿಂದ ಸ್ಮಾರ್ಟ್‌ವಾಚ್ ಮುಖ್ಯ ಉದ್ದೇಶವಾಗಿದೆ. ಮಹಿಳೆಯರ ಋತುಚಕ್ರ, ಅಂಡಾಣು ಬಿಡುಗಡೆ ಅವಧಿ ಸೇರಿದಂತೆ ಇತರೆ ಆರೋಗ್ಯ ಸಂಬಂಧಿತ ಮಾಹಿತಿಯನ್ನು ವಾಚ್ ಟ್ರ್ಯಾಕ್ ಮಾಡುತ್ತದೆ. ಗೂಗಲ್ ಪ್ಲೇಸ್ಟೋರ್‌ನಲ್ಲಿ (Google Play) ‘Syska Donna app’ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ವಾಚ್ ಅನ್ನು ಕಾನ್ಫಿಗರ್ ಮಾಡಬಹುದು.

ಸ್ಮಾರ್ಟ್‌ವಾಚ್ ಬ್ಲೂಟೂತ್ ಮೂಲಕ ಕರೆ ಮಾಡುವ ಕಾರ್ಯವನ್ನು ಹೊಂದಿದ್ದು, ಬಳಕೆದಾರರಿಗೆ ಕರೆಗಳನ್ನು ಮಾಡಲು ಅಥವಾ ಸಂಪರ್ಕ ಕಡಿತಗೊಳಿಸಲು ಅನುಮತಿಸುತ್ತದೆ. ಇದು ಫೋನ್ ಕರೆ ದಾಖಲೆಗಳನ್ನು ಪರಿಶೀಲಿಸಲು, ನೆಚ್ಚಿನ ಸಂಪರ್ಕಗಳನ್ನು ಆಯ್ಕೆ ಮಾಡಲು, ವಿಳಾಸ ಪುಸ್ತಕವನ್ನು ಸಿಂಕ್ ಮಾಡಲು ಮತ್ತು ಗಡಿಯಾರದಿಂದಲೇ ವಾಲ್ಯೂಮ್ ಅನ್ನು ಹೊಂದಿಸಲು ಅನುಮತಿಸುತ್ತದೆ.

ಈ ವಾಚ್ ಸ್ಪ್ಯಾನ್ ಮೋಡ್ ಅನ್ನು ಹೊಂದಿದ್ದು, ವಾಚ್ ಡಿಸ್‌ಪ್ಲೇಯನ್ನು ಎರಡು ಭಾಗಗಳಾಗಿ ವಿಭಜಿಸುವ ಮೂಲಕ ಬಳಕೆದಾರರಿಗೆ ಬಹುಕಾರ್ಯಕ್ಕೆ ಸಹಾಯ ಮಾಡುತ್ತದೆ.

ಇದು ಪಿಪಿಜಿ ತಂತ್ರಜ್ಞಾನದ ಆಧಾರದ ಮೇಲೆ ಹೃದಯ ಬಡಿತ ಮತ್ತು ರಕ್ತದಲ್ಲಿರುವ ಆಮ್ಲಜನಕದ ಮಟ್ಟವನ್ನು ಮೇಲ್ವಿಚಾರಣೆ ಮಾಡುವ SpO2 ಮತ್ತು ಹೃದಯ ಬಡಿತ ಟ್ರ್ಯಾಕಿಂಗ್ ಕಾರ್ಯವನ್ನು ಹೊಂದಿದೆ. ಜೊತೆಗೆ ರಕ್ತದೊತ್ತಡದ ಮಾಪನ (ರೇಟಿಂಗ್ಸ್) ಪರಿಶೀಲಿಸಿಕೊಳ್ಳಬಹುದು. ಸ್ಮಾರ್ಟ್‌ವಾಚ್ ಬಳಕೆದಾರರಿಗೆ ತಾಪಮಾನ ಬದಲಾವಣೆ ಸೇರಿದಂತೆ ಮಳೆ, ಮೋಡ, ಬಿಸಿಲಿನಂಥ ಹವಾಮಾನ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಒದಗಿಸಲಿದೆ.

ಬಳಕೆದಾರರ ಕ್ಯಾಲೊರಿಗಳನ್ನು ಮತ್ತು ಪ್ರಯಾಣಿಸಿದ ದೂರವನ್ನು ವಾಚ್ ಟ್ರ್ಯಾಕ್ ಮಾಡುತ್ತದೆ. ಜೊತೆಗೆ ಗೌಪ್ಯತೆಯನ್ನು ರಕ್ಷಿಸಲು ಸ್ಮಾರ್ಟ್ ವಾಚ್‌ನಲ್ಲಿರುವ ಅಂತರ್ನಿರ್ಮಿತ ವೈಶಿಷ್ಟ್ಯವನ್ನು ಬಳಸಿಕೊಂಡು ಬಳಕೆದಾರರು ಪರದೆಯನ್ನು (ಡಿಸ್‌ಪ್ಲೇ) ಲಾಕ್ ಮಾಡಬಹುದು.

ಪ್ಲೇ, ವಿರಾಮ, ಮುಂದಿನ ಮತ್ತು ಹಿಂದಿನ ಹಾಡನ್ನು ಆಯ್ಕೆ ಮಾಡುವ ಮೂಲಕ ಮತ್ತು ವಾಲ್ಯೂಮ್ ಅನ್ನು ಸರಿಹೊಂದಿಸುವ ಮೂಲಕ ಬಳಕೆದಾರರು ವಾಚ್‌ನಿಂದಲ್ಲೇ ಸಂಗೀತವನ್ನು ನಿಯಂತ್ರಿಸಬಹುದು.

ಓದಿ... Apple Event:ಹೊಸ ಐಪ್ಯಾಡ್, ಐಪ್ಯಾಡ್ ಪ್ರೊ, ಟಿವಿ ಬಿಡುಗಡೆ ಮಾಡಿದ ಆ್ಯಪಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.