ಭಾರತದ ಬಜೆಟೆಡ್ ಮಾರುಕಟ್ಟೆಯು ಬಹಳ ವಿಸ್ತಾರವಾಗಿದೆ ಎನ್ನುವುದು ಒನ್‌ಪ್ಲಸ್ ಕಂಪನಿಗೆ ಮನವರಿಕೆ ಆಗಿದೆ. ಹೀಗಾಗಿಯೇ ಕಂಪನಿಯು ಪ್ರೀಮಿಯಂ ವಿಭಾಗದಿಂದಾಚೆಗೆ ಬಜೆಟೆಡ್ ಸ್ಮಾರ್ಟ್ ಸಾಧನಗಳನ್ನು ನೀಡುವುದರ ಕಡೆಗೂ ಹೆಚ್ಚು ಗಮನ ಹರಿಸಲು ಆರಂಭಿಸಿದೆ. ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆಯುವ ಸಲುವಾಗಿ ಕಡಿಮೆ ಬೆಲೆಯ ಸ್ಮಾರ್ಟ್ ಸಾಧನಗಳನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಈಚೆಗಷ್ಟೇ ಒನ್‌ಪ್ಲಸ್ ನಾರ್ಡ್ ಬಡ್ಸ್ ಬಿಡುಗಡೆ ಮಾಡಿದೆ. ಇದರ ಬೆಲೆ ₹ 2,799.

ಹೊರಗಿನ ಶಬ್ದವು ಕೇಳಿಸದಂತೆ ತಡೆಯಲು ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ (ಎಎನ್ ಸಿ) ಇದರಲ್ಲಿ ಇಲ್ಲ. ಆದರೆ, ಎಐ ನಾಯ್ಸ್ ಕ್ಯಾನ್ಸಲೇಷನ್ ಅದರ ಕೊರತೆಯನ್ನು ಬಹಳಷ್ಟರ ಮಟ್ಟಿಗೆ ನಿಭಾಯಿಸುತ್ತದೆ. ಬ್ಯಾಟರಿ ಬಾಳಿಕೆ ಹಾಗೂ ಸಾಧನದ ಗುಣಮಟ್ಟ ಉತ್ತಮವಾಗಿದೆ. ಕೆಲವು ಬಡ್ಸ್‌ಗಳನ್ನು ಒಂದು ಗಂಟೆಯವರೆಗೆ ಕಿವಿಯಲ್ಲಿ ಇಟ್ಟುಕೊಂಡರೆ ಆಗ ಕಿವಿ ನೋಯುತ್ತದೆ. ಆದರೆ ಇದು ಹಾಗಿಲ್ಲ. ಎಷ್ಟು ಹೊತ್ತು ಇಟ್ಟುಕೊಂಡರೂ ಯಾವುದೇ ಸಮಸ್ಯೆ ಆಗುವುದಿಲ್ಲ.

ಆಂಡ್ರಾಯ್ಡ್ ಮತ್ತು ಐಒಎಸ್‌ಗೆ ಬೆಂಬಲಿಸುತ್ತದೆ. ಹೇ ಮೆಲೊಡಿ ಆ್ಯಪ್ ಮೂಲಕ ಇದರ ಬ್ಯಾಟರಿ ಮಟ್ಟವನ್ನು ಪರಿಶೀಲಿಸಬಹುದು. ಟಚ್ ಆಯ್ಕೆಯನ್ನು ನಿಯಂತ್ರಿಸಬಹುದು. ಒನ್‌ಪ್ಲಸ್ ಫೋನ್ ಅನ್ನೇ ಬಳಸಿದರೆ ಆ್ಯಪ್ ನೆರವಿಲ್ಲದೆಯೇ ಬ್ಲುಟೂತ್ ಸೆಟ್ಟಿಂಗ್ಸ್‌ನಲ್ಲಿಯೇ ಎಲ್ಲವನ್ನೂ ನಿರ್ವಹಿಸಬಹುದು. ಧ್ವನಿಯು ಬಹಳ ಸ್ಪಷ್ಟವಾಗಿ ಕೇಳಿಸುತ್ತದೆ. ಬ್ಲುಟೂತ್ 5.2 ಆವೃತ್ತಿ ಹೊಂದಿದೆ.

ಆಕರ್ಷಕ ವಿನ್ಯಾಸ ಹೊಂದಿದೆ. ಪ್ಲಾಸ್ಟಿಕ್‌ನಿಂದ ಬಡ್ಸ್ ತಯಾರಿಸಲಾಗಿದೆ. ಹೀಗಿದ್ದರೂ ಗಟ್ಟಿಮುಟ್ಟಾಗಿವೆ. ಧೂಳು ಮತ್ತು ನೀರಿನಿಂದ ರಕ್ಷಿಸಲು ಐಪಿ55 ರೇಟಿಂಗ್ಸ್ ಹೊಂದಿದೆ. ಕಿವಿಯ ಗಾತ್ರಕ್ಕೆ ಅನುಗುಣವಾಗಿ ಮೂರು ರೀತಿಯ ಇಯರ್ ಟಿಪ್‌ಗಳನ್ನು ನೀಡಲಾಗಿದೆ. ಯುಎಸ್‌ಬಿ ಟೈಪ್–ಸಿ ಚಾರ್ಜಿಂಗ್ ಕೇಬಲ್ ಹೊಂದಿದೆ.

ಇಯರ್ ಕೇಸ್‌ನಿಂದ ಬಡ್ಸ್‌ಗಳನ್ನು ಹೊರತೆಗೆದಾಗ ಅವು ಆನ್ ಆಗಿ ಸಂಪರ್ಕಕ್ಕೆ ಬರುತ್ತವೆ. ಫೋನ್‌ನ ಬ್ಲೂಟೂತ್ ಆನ್ ಮಾಡಿ ಬಡ್ಸ್ ಎಂದು ಹುಡುಕಿ ಪರಸ್ಪರ ಸಂಪರ್ಕಿಸಬಹುದು. ಏಕಕಾಲಕ್ಕೆ ಎರಡು ಸಾಧನಗಳೊಂದಿಗೆ ಸಂಪರ್ಕಿಸಬಹುದಾಗಿದೆ.

ಚಾರ್ಜಿಂಗ್ ಕೇಸ್ 480 ಎಂಎಎಚ್ ಬ್ಯಾಟರಿ ಹೊಂದಿದ್ದರೆ, ಇಯರ್ ಬಡ್ ತಲಾ 41 ಎಂಎಎಚ್ ಬ್ಯಾಟರಿ ಹೊಂದಿವೆ. ಒಮ್ಮೆ ಚಾರ್ಜಿಂಗ್ ಕೇಸ್ ಪೂರ್ತಿ ಚಾರ್ಜ್ ಆದರೆ, ಅದರಿಂದ ಬಡ್ಸ್ ಅನ್ನು ಮೂರು ಬಾರಿ ಚಾರ್ಜ್ ಮಾಡಬಹುದು. ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇದ್ದು, 10 ನಿಮಿಷ ಚಾರ್ಜ್ ಮಾಡಿದರೆ 5 ಗಂಟೆ ಬಳಸಬಹುದು. 7 ಗಂಟೆಗಳವರೆಗೆ ನಿರಂತರವಾಗಿ ಸಂಗೀತ ಆಲಿಸಬಹುದು. ಚಾರ್ಜಿಂಗ್ ಕೇಸ್‌ನಲ್ಲಿ ಇದ್ದಾಗ 30 ಗಂಟೆ ಬ್ಯಾಟರಿ ಬಾಳಿಕೆ ಬರುತ್ತದೆ.

ಬಡ್ಸ್ ಅನ್ನು ಕಿವಿಯಲ್ಲಿ ಇಟ್ಟುಕೊಂಡಿದ್ದಾಗ ಹೊರಗಿನ ಶಬ್ಧ ಕೇಳದಂತೆ ತಡೆಯುವ (ಎಐ ಎನ್‌ಸಿ) ವ್ಯವಸ್ಥೆಯು ಉತ್ತಮವಾಗಿದೆ. ಮನೆಯಿಂದ ಹೊರಗಡೆ ಓಡಾಡುವಾಗಲೂ ಫೋನಿನಲ್ಲಿ ನಮ್ಮೊಂದಿಗೆ ಮಾತನಾಡುತ್ತಿರುವವರಿಗೆ ನಮ್ಮ ಧ್ವನಿ ಸ್ವಷ್ಟವಾಗಿ ಕೇಳುವುದಷ್ಟೇ ಅಲ್ಲದೆ, ಅವರ ಧ್ವನಿಯೂ ನಮಗೆ ಸ್ಪಷ್ಟವಾಗಿ ಕೇಳುತ್ತದೆ. ಹಾಡು ಕೇಳುವಾಗ, ವಿಡಿಯೊ ನೋಡುವಾಗಲೂ ಹೊರಗಿನ ಶಬ್ಧವು ನಮಗೆ ಕೇಳಿಸದಷ್ಟು ಸ್ಪಷ್ಟವಾಗಿತ್ತು.

ಹೇ-ಮೆಲೋಡಿ (HeyMelody) ಆ್ಯಪ್ ಮೂಲಕ ಆಂಡ್ರಾಯ್ಡ್ ಮತ್ತು ಐಒಎಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಸೆಟ್ಟಿಂಗ್ಸ್ ಮಾಡಬಹುದು. ಒನ್‌ಪ್ಲಸ್ ಬಡ್ಸ್ ಪ್ರೊಗೆ ಹೋಲಿಸಿದರೆ ಇದರ ಬಳಕೆ ಸುಲಭವಾಗಿದೆ. ಬಡ್ಸ್ ಅನ್ನು ಒಂದು ಬಾರಿ ಟ್ಯಾಪ್ ಮಾಡಿದರೆ ಮ್ಯೂಸಿಕ್ ಪ್ಲೇ/ಪಾಸ್ ಆಗುತ್ತದೆ. ಎರಡು ಬಾರಿ ಟ್ಯಾಪ್ ಮಾಡಿದರೆ ಮುಂದಿನ ಹಾಡಿಗೆ ಹಾಗೆಯೇ ಮೂರು ಬಾರಿ ಟ್ಯಾಪ್ ಮಾಡಿದರೆ ಹಿಂದಿನ ಹಾಡಿಗೆ ಹೋಗುತ್ತದೆ.

ಕರೆ ಸ್ವೀಕರಿಸಲು ಅಥವಾ ಕರೆಯನ್ನು ಮುಗಿಸಲು ಎರಡು ಬಾರಿ ಟ್ಯಾಪ್ ಮಾಡಬೇಕು. ಫೋನ್ ನಮ್ಮ ಬಳಿ ಇಲ್ಲದೇ ಇದ್ದರೂ 10ಮೀಟರ್ ವ್ಯಾಪ್ತಿಯಲ್ಲಿ ಹಾಡು ಕೇಳಲು, ಮಾತನಾಡಲು ಇದನ್ನು ಬಳಸಬಹುದು. ಹೆಚ್ಚಿನ ಬೆಲೆಯ ಒನ್‌ಪ್ಲಸ್ ಬಡ್ಸ್ ಜೆಡ್2, ಒನ್‌ಪ್ಲಸ್ ಬಡ್ಸ್ ಪ್ರೊಗೆ ಹೋಲಿಸಿದರೆ ₹3 ಸಾವಿರದೊಳಗಿನ ಬೆಲೆಯಲ್ಲಿ ಖರೀದಿಸಲು ಉತ್ತಮ ಆಯ್ಕೆ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.