ಚೆನ್ನೈ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಚೆನ್ನೈ ಮೂಲದ ‘ಸ್ಪೇಸ್ ಕಿಡ್ಸ್’ ಸಂಘಟನೆ ಭೂಮಿಯಿಂದ ಸುಮಾರು 30 ಕಿಲೋ ಮೀಟರ್ ಎತ್ತರದಲ್ಲಿ, ಬಾಹ್ಯಾಕಾಶದ ಅಂಚಿನಲ್ಲಿ ತ್ರಿವರ್ಣ ಧ್ವಜ ಹಾರಿಸಿದೆ.

ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ದೇಶ ಮಾಡಿರುವ ಸಾಧನೆಗಳ ಸಂಕೇತವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಘಟನೆ ತಿಳಿಸಿದೆ.

ಟೆಲಿಪ್ರಾಂಪ್ಟರ್ ಬಿಟ್ಟು ಪೇಪರ್ ನೋಟ್ಸ್ ಬಳಸಿ ಭಾಷಣ ಮಾಡಿದ ಮೋದಿ

ಹೀಲಿಯಂ ಬಲೂನ್ಗೆ ಸಿಲುಕಿಸಿರುವ ರಾಷ್ಟ್ರ ಧ್ವಜ ಬಾಹ್ಯಾಕಾಶದ ಅಂಚಿನಲ್ಲಿ ಹಾರಾಡುತ್ತಿರುವ ವಿಡಿಯೊವನ್ನು ಸ್ಪೇಸ್ ಕಿಡ್ಸ್ ಸಂಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ.

‘ಈ ವರ್ಷ ಜನವರಿ 27ರಂದು ನಾವು ಚೆನ್ನೈಯಿಂದ ಬಲೂನ್ಸ್ಯಾಟ್ ಅನ್ನು ಹಾರಿಬಿಟ್ಟಿದ್ದೆವು. ಅದು ಸುಮಾರು 30 ಕಿಲೋಮೀಟರ್ ಎತ್ತರದಲ್ಲಿ ತ್ರಿವರ್ಣ ಧ್ವಜವನ್ನು ಹಾರಾಡುವಂತೆ ಮಾಡಿದೆ’ ಎಂದು ಸಂಘಟನೆಯ ಸ್ಥಾಪಕಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಕೇಸನ್ ‘ಪಿಟಿಐ’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಸೋಮವಾರ ವಿಡಿಯೊ ಬಿಡುಗಡೆ ಮಾಡಲಾಗಿದೆ. ಬಲೂನ್ನಲ್ಲಿ ಜೋಡಿಸಿದ್ದ ಕ್ಯಾಮೆರಾ ತ್ರಿವರ್ಣಧ್ವಜ ಹಾರಾಡುತ್ತಿರುವ ದೃಶ್ಯವನ್ನು ಸೆರೆಹಿಡಿದಿದೆ ಎಂದು ಅವರು ತಿಳಿಸಿದ್ದಾರೆ.

ಎಸ್ಎಸ್ಎಲ್ವಿ–ಡಿ1ರ ಮೂಲಕ ಉಡಾವಣೆ ಮಾಡಿದ ಉಪಗ್ರಹಗಳ ಬಳಕೆ ಸಾಧ್ಯವಿಲ್ಲ: ಇಸ್ರೊ

ಸರ್ಕಾರಿ ಶಾಲೆಗಳ 750 ವಿದ್ಯಾರ್ಥಿನಿಯರು ‘ಆಜಾದಿಸ್ಯಾಟ್’ ಉಪಗ್ರಹ ಅಭಿವೃದ್ಧಿಪಡಿಸಲು ‘ಸ್ಪೇಸ್ ಕಿಡ್ಸ್’ ಪ್ರೋತ್ಸಾಹ ನೀಡಿತ್ತು. ‘ಆಜಾದಿಸ್ಯಾಟ್’ ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೊದ ಚೊಚ್ಚಲ ಬಾಹ್ಯಾಕಾಶ ನೌಕೆ ಎಸ್ಎಸ್ಎಲ್ವಿ–ಡಿ1 ಮೂಲಕ ಆಗಸ್ಟ್ 7ರಂದು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿತ್ತು.

‘ಎಸ್ಎಸ್ಎಲ್ವಿ–ಡಿ1’ ಮೂಲಕ ಉಡಾವಣೆ ಮಾಡಿದ ಉಪಗ್ರಹಗಳು ತಪ್ಪು ಕಕ್ಷೆಗೆ ಸೇರಿರುವುದರಿಂದ ಅವುಗಳ ಬಳಕೆ ಸಾಧ್ಯವಿಲ್ಲ ಎಂದು ಬಳಿಕ ಇಸ್ರೊ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.