ನವದೆಹಲಿ: ಒಡಿಶಾದ ಸಿಮಿಲಿಪಾಲ್ನಲ್ಲಿ ಕಾಣಿಸಿಕೊಂಡಿದ್ದ ‘ಕಪ್ಪು ಹುಲಿ’ಯ ಹಿಂದಿನ ರಹಸ್ಯವನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.

ಜೀನ್ನಲ್ಲಿ ಉಂಟಾದ ಒಂದು ರೂಪಾಂತರದಿಂದ ಹುಲಿಯ ಮೈ ಮೇಲಿನ ಪಟ್ಟೆಯಲ್ಲಿ ವ್ಯತ್ಯಾಸವಾಗಿ, ಅದು ಪೂರ್ತಿಯಾಗಿ ಹರಡಿದ್ದರಿಂದ ಸಹಜ ಬಣ್ಣ ಮರೆಯಾಗಿ, ಹುಲಿ ಪೂರ್ತಿಯಾಗಿ ಕಪ್ಪು ಬಣ್ಣಕ್ಕೆ ತಿರುಗಿದೆ.

ಕಪ್ಪು ಬಣ್ಣದ ಹುಲಿ ಕಾಣಿಸಿಕೊಂಡಿದ್ದ ಬಳಿಕ ಅದರ ಮೈಬಣ್ಣದ ಬಗ್ಗೆ ವಿಜ್ಞಾನಿಗಳು ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರು.

ಬೆಂಗಳೂರಿನ ‘ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸನ್’ನ ಪರಿಸರ ತಜ್ಞೆ ಉಮಾ ರಾಮಕೃಷ್ಣನ್ ಮತ್ತು ಅವರ ವಿದ್ಯಾರ್ಥಿ ವಿನಯ್ ಸಾಗರ್ ಅವರ ತಂಡ, ಹುಲಿ ಮೈಮೇಲಿನ ಪಟ್ಟೆಯ ಬಣ್ಣದಲ್ಲಿ ವ್ಯತ್ಯಾಸವಾಗಿ, ಅದು ಏಕರೂಪಕ್ಕೆ ತಿರುಗಿದ್ದು, ನಂತರದಲ್ಲಿ ಮೈಗೆ ಪೂರ್ತಿಯಾಗಿ ವ್ಯಾಪಿಸಿದೆ. ಇದರಿಂದ ಹುಲಿ ಮೈಬಣ್ಣ ಕಪ್ಪಾಗಿ ಕಾಣಿಸಿಕೊಂಡಿದೆ ಎಂದು ಕಂಡುಕೊಂಡಿದ್ದಾರೆ. ಈ ಪ್ರಕ್ರಿಯೆಯನ್ನು ‘ಟ್ರಾನ್ಸ್ಮೆಂಬ್ರೇನ್ ಅಮಿನೊಪೆಪ್ಟಿಡೇಸ್ ಕ್ಯೂ’ ಎಂದು ಕರೆದಿದ್ದಾರೆ.

ಇದು ಜೀನ್ಗಳಲ್ಲಿನ ವ್ಯತ್ಯಾಸದ ಬಗ್ಗೆ ಮಾಡಲಾದ ಮೊದಲ ಮತ್ತು ಏಕೈಕ ಸಂಶೋಧನೆ ಎಂದು ಪ್ರೊ. ಉಮಾ ಅವರು ಹೇಳಿದ್ದಾರೆ.

ಸಂಶೋಧಕರು, ದೇಶದಲ್ಲಿನ ಹುಲಿಗಳ ಸಂಖ್ಯೆ ಮತ್ತು ಅವುಗಳ ಜೀನ್ನಲ್ಲಿ ಉಂಟಾಗಿರಬಹುದಾದ ಬದಲಾವಣೆಗಳ ಕುರಿತು ಅಧ್ಯಯನ ಮಾಡಿದ್ದಾರೆ. ಈ ರೀತಿ ರೂಪಾಂತರಗೊಂಡು ಕಪ್ಪು ಬಣ್ಣ ಪಡೆದ ಹುಲಿಗಳ ಸಂಖ್ಯೆ ಅತ್ಯಂತ ಕಡಿಮೆ ಎಂದು ಸಂಶೋಧನೆ ಹೇಳಿದೆ.

ಏಲಿಯನ್ಗಳು ಅಸ್ತಿತ್ವದಲ್ಲಿವೆಯೇ? ನಾಸಾ ವಿಜ್ಞಾನಿಗಳು ಹೇಳುವುದೇನು?

‘ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸನ್’ ಜರ್ನಲ್ನಲ್ಲಿ ಈ ಸಂಶೋಧನೆಯ ಕುರಿತು ವರದಿ ಪ್ರಕಟವಾಗಿದೆ.

‘ಮಂಗಳ‘ನ ಅಂಗಳದಲ್ಲಿ ಜೀವಿಗಳಿದ್ದವು ಎಂಬುದಕ್ಕೆ ಸಾಕ್ಷ್ಯಾಧಾರ ಕೊಟ್ಟ ನಾಸಾ ರೋವರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.