ಜೂನ್ ಮೊದಲ ವಾರ ಪೂರ್ವ ಆಕಾಶದಲ್ಲಿ ಬೆಳಗಿನ ಸೂರ್ಯೋದಯಕ್ಕೆ ಮುನ್ನ ಆರು ಗ್ರಹಗಳನ್ನು ನೋಡಬಹುದು.

ಬರಿಗಣ್ಣಿಗೆ ಕಾಣುವ ಶನಿ, ಮಂಗಳ, ಗುರು ಹಾಗೂ ಬುಧನ ಜತೆ ಬೈನಾಕುಲರ್ನಲ್ಲಿ ನೋಡಬಹುದಾದ ನೆಪ್ಚೂನ್ ಹಾಗೂ ಯರೇನಸ್ಗಳ ಮೆರವಣಿಗೆಯೋ ಎನ್ನುವ ರೀತಿಯಲ್ಲಿ ಕಾಣಿಸಲಿವೆ.

ಕೆಲ ವಾರಗಳಿಂದ ಸೂರ್ಯನ ನೇರ ಬಂದು ಅಸ್ತವಾಗಿದ್ದ ಗುರುಗ್ರಹ, ಜೂನ್ ಒಂದರಿಂದ ಪೂರ್ವ ಆಕಾಶದಲ್ಲಿ ಕಾಣಿಸಲಿದೆ. ಗುರುಗ್ರಹದ ಜತೆ ಜತೆಯಾಗಿ ಅಪರೂಪದ ಬುಧಗ್ರಹವೂ ಗೋಚರಿಸಲಿದೆ.

ಬುಧ ಯಾವಾಗಲೂ ಬರಿಗಣ್ಣಿಗೆ ಕಾಣಿಸುವುದಿಲ್ಲ. ವರ್ಷದಲ್ಲಿ ಬರೇ ಆರು ಬಾರಿ ಕೆಲ ದಿನಗಳು ಕೆಲ ನಿಮಿಷಗಳು ಮಾತ್ರ.

ಸುಮಾರು ಸೂರ್ಯೋದಯಕ್ಕೆ 20 ನಿಮಿಷ ಮುಂಚಿತವಾಗಿ ಪೂರ್ವ ಆಕಾಶದಲ್ಲಿ ದಿಗಂತದಿಂದ ಗುರು, ಬುಧ, ಯರೇನಸ್, ಮಂಗಳ, ನೆಪ್ಚೂನ್ ನಂತರ ಶನಿಗ್ರಹಗಳು ಗೋಚರಿಸಲಿವೆ. ಇವನ್ನೆಲ್ಲ ಪರಿಚಯಿಸಲೋ ಎನ್ನುವಂತೆ ಅಮಾವಾಸ್ಯೆಗೆ ಸೂರ್ಯನನ್ನ ಸಮೀಪಿಸುವ ಚಂದ್ರ ಈ ಎಲ್ಲಾ ಗ್ರಹಗಳ ಸಮೀಪ ಹಾದು ದಿಗಂತದೆಡೆಗೆ ಸರಿಯುತ್ತಿರುತ್ತದೆ

ಜೂನ್ ಒಂದರಂದು ಶನಿಗ್ರಹದ ಸಮೀಪ, ಜೂನ್ 2ರಂದು ನೆಪ್ಚೂನ ಮಂಗಳಗಳ ಸಮೀಪ , ಜೂನ್ 3ರಂದು ಯರೇನಸ್ ಸಮೀಪ ಸರಿದು ಜೂನ್ 4ರಂದು ಗುರು ಬುಧರ ಸಮೀಪ ಕಾಣಲಿದೆ. ಈ ಆಕಾಶದ ಭವ್ಯತೆಗೆ ಹಣತೆಯಂತೆ ( crescent moon ) ಕಾಣುವ ಬೆಳಗಿನ ಚಂದ್ರ ಎಲ್ಲರನ್ನೂ ಆಕರ್ಷಿಸಲಿದೆ.

ಆಶ್ಚರ್ಯವೆಂದರೆ ಈಗ ಸುಮಾರು 3ಲಕ್ಷದ 70 ಸಾವಿರ ಕಿಮೀ ದೂರದ ಚಂದ್ರ ಕೋಟಿ ಕೋಟಿ ಕಿ.ಮೀ ದೂರದ ಗ್ರಹಗಳ ಜತೆ
ಬುಧ ಗ್ರಹ 17.5 ಕೋಟಿ ಕಿ.ಮೀ , ಮಂಗಳ 27.8 ಕೋಟಿ ಕಿ.ಮೀ , ಗುರು ಗ್ರಹ 90 ಕೋಟಿ ಕಿ.ಮೀ , ಶನಿಗ್ರಹ. 146.5 ಕೋಟಿ ಕಿ.ಮೀ , ಒಂದೇ ದೂರದಲ್ಲಿರುವಂತೆ ಕಾಣುವುದು. ನೋಡಿ ಆನಂದಿಸಿ.

ಲೇಖಕರು ನಿವೃತ್ತ ಭೌತಶಾಸ್ತ್ರ ಉಪನ್ಯಾಸಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.