ಯಾವುದೇ ಕೆರೆ, ಕಟ್ಟೆ ಅಥವಾ ಜಲಾಶಯಕ್ಕೆ ಹಳ್ಳ, ತೊರೆ ಅಥವಾ ನದಿಗಳಿಂದ ಸಂಗ್ರಹವಾದ ನೀರು, ತನ್ನ ಜೊತೆ ಮಣ್ಣನ್ನೂ ಕೊಚ್ಚಿಕೊಂಡು ಬರುವುದು ಸಹಜ. ಈ ರೀತಿ ಜಲಾಶಯ–ಕೆರೆ–ಕಟ್ಟೆಗಳಲ್ಲಿ ಸೇರಿರುವ ಮಣ್ಣನ್ನು ಹೂಳು ಎಂದು ಕರೆಯುತ್ತೇವೆ. ಹೂಳು ಶೇಖರಣೆಯಾಗುವ ಪ್ರಕ್ರಿಯೆಗೆ ‘ಸೆಡಿಮೆಂಟೇಶನ್’ ಅನ್ನುತ್ತಾರೆ.

ಗ್ರಾಮೀಣ ಭಾಗದಲ್ಲಿ ಕೆರೆಕಟ್ಟೆಗಳ್ಳಲ್ಲಿ ಕೆಲವು ವರ್ಷಗಳಿಗೊಮ್ಮೆ ಹೂಳೆತ್ತುವುದುಂಟು. ನಗರಗಳ ಕೆರೆಗಳಲ್ಲೂ ಇದಕ್ಕೆ ಯೋಜನೆಗಳನ್ನೇ ರೂಪಿಸಿ ಹೂಳೆತ್ತುವ ಕಾರ್ಯಕ್ರಮ ನಡೆಸುತ್ತಾರೆ. ಆದರೆ ಜಲಾಶಯಗಳಲ್ಲಿ ಹೀಗೆ ತುಂಬಿಕೊಂಡ ಹೂಳಿನಿಂದ ಹೆಚ್ಚು ತಾಪತ್ರಯ. ಈ ಹೂಳನ್ನು ಸಣ್ಣ ಪ್ರಮಾಣದ ಕೆರೆಕಟ್ಟೆಗಳಂತೆ ಜಲಾಶಯಗಳಿಂದ ಹೊರತೆಗೆಯುವುದು ಅಷ್ಟು ಸುಲಭವಾಗಿ ಆಗುವ ಕೆಲಸವಲ್ಲ.

ಜಲಾಶಯಗಳಲ್ಲಿ ಸೆಡಿಮೆಂಟೇಶನ್ ತಪ್ಪಿಸಲು ಆಗುವುದಿಲ್ಲ. ಏಕೆಂದರೆ ಜಲಾಶಯಗಳಿಗೆ ಹಲವು ಮೂಲಗಳಿಂದ ನೀರು ಹರಿದುಬಂದಿರುತ್ತದೆ. ಮಣ್ಣಿನ ಮೇಲೆ ಪರಿಣಾಮ ಬೀರುವ ಅವೈಜ್ಞಾನಿಕ ಭೂ-ಬಳಕೆಯ ಬದಲಾವಣೆಗಳು ಮತ್ತು ಅಂತಹ ಭೂ-ಬಳಕೆಯ ಪರಿವರ್ತನೆಗಳು ನೀರಿನ ಹರಿವಿನ ಮೇಲೆ ಪರಿಣಾಮ ಬೀರುತ್ತವೆ, ಜೊತೆಗೆ ಅದು ಹೂಳನ್ನೂ ಹೆಚ್ಚಿಸುತ್ತದೆ. ಕೊನೆಗೆ ಈ ಹೂಳು ಜಲಾಶಯಗಳಲ್ಲಿ ಸಂಗ್ರಹವಾಗುತ್ತದೆ. ಜಲಾಶಯಗಳಲ್ಲಿ ಹೂಳಿನ ನಿರಂತರ ಸಂಗ್ರಹಣೆಯು ಅದರ (ಜಲ) ಶೇಖರಣಾ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಆಗ ಸಹಜವಾಗಿಯೇ ಆ ಜಲಾಶಯದ ಉಪಯುಕ್ತತೆಯೂ ಕಡಿಮೆ ಆಗುತ್ತದೆ. ಜೊತೆಗೆ ಇದರಿಂದ ವಿವಿಧ ರೀತಿಯ ನಕಾರಾತ್ಮಕ ಪರಿಣಾಮಗಳೂ ಎದುರಾಗಬಹುದು.

ಒಟ್ಟಿನಲ್ಲಿ, ಜಲಾಶಯಗಳಲ್ಲಿ ಹೂಳು ತುಂಬುವಿಕೆಯು ಒಂದು ದೊಡ್ಡ ಸಮಸ್ಯೆ. ಒಂದೆಡೆ, ಜಲಾಶಯಗಳು ಅವುಗಳ ಆಯುಸ್ಸನ್ನು ಆರೋಗ್ಯಪೂರ್ಣವಾಗಿ ಪೂರೈಸುವಂತೆಯೂ ಅವುಗಳನ್ನು ಕಾಪಾಡಿಕೊಳ್ಳಬೇಕಾಗಿದೆ. ಇನ್ನೊಂದೆಡೆ, ನಗರೀಕರಣ, ಕೃಷಿ ಮತ್ತು ಕೈಗಾರಿಕಾ ಸೇರಿದಂತೆ ಇತರೆ ಆರ್ಥಿಕ ಚಟುವಟಿಕೆಗಳಿಂದ ಉಂಟಾಗುವ ಭೂ-ಬಳಕೆಯ ಬದಲಾವಣೆಗಳು ಮಣ್ಣಿನ ಸವಕಳಿ ಹೆಚ್ಚಾಗಿಸಿ ಕೊನೆಗೆ ಜಲಾಶಯಗಳಲ್ಲಿ ಸೇರುವ ಹೂಳಿನ ಅಂಶ ಹೆಚ್ಚಾಗುತ್ತಿದೆ. ಇದರಿಂದ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯದಲ್ಲಿ ಕಡಿತ ಉಂಟಾಗುತ್ತಿದೆ. ಹೀಗಾಗಿ ಜಲಾಶಯದ ಮೇಲಿನ ಅವಲಂಬನೆ ಅನಿಶ್ಚಿತವಾಗಬಹುದು. ಇದರಿಂದ ಜಲವಿದ್ಯುತ್ ಉತ್ಪಾದನೆ ಮತ್ತು ಕೃಷಿ ಮುಂತಾದ ಚಟುವಟಿಕೆಗಳ ಮೇಲೂ ಪರಿಣಾಮ ಬೀರಬಹುದು.

ಆದರೆ ಜಲಾಶಯಗಳಲ್ಲಿಯ ಹೂಳಿನ ಪ್ರಮಾಣವನ್ನು ನಿರ್ಧರಿಸುವುದು ಸವಾಲಿನ ಕೆಲಸ. ಸಾಂಪ್ರದಾಯಿಕವಾಗಿ ಈ ಪ್ರಮಾಣವನ್ನು ನಿರ್ಣಯಿಸಲು ‘ಹೈಡ್ರೋಗ್ರಾಫಿಕ್’ ಸಮೀಕ್ಷೆಗಳನ್ನು ಕೈಗೊಳ್ಳಲಾಗುತ್ತದೆ. ಆದರೆ ಇದು ದುಬಾರಿ ಮತ್ತು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಇತ್ತೀಚಿನ ವರ್ಷಗಳಲ್ಲಿ, ಉಪಗ್ರಹಗಳನ್ನು ಆಧರಿಸಿ ರಿಮೋಟ್ ಸೆನ್ಸಿಂಗ್‌ನಿಂದ ಜಲಾಶಯಗಳ ಹೂಳಿನ ಪ್ರಮಾಣವನ್ನು ಕಂಡುಹಿಡಿಯುವಂತಾಗುತ್ತಿದೆ. ಇದು ವೇಗವಾದ ಮತ್ತು ಅಗ್ಗದ ದಾರಿ. ಪ್ರಾರಂಭಿಕವಾಗಿ ನಾಸಾ ಸಂಸ್ಥೆಯ ಲ್ಯಾಂಡ್‌ಸ್ಯಾಟ್ ಸರಣಿಯ ಆಪ್ಟಿಕಲ್ ರಿಮೋಟ್ ಸೆನ್ಸಿಂಗ್ ಡೇಟಾವನ್ನು ಬಳಸಲಾಗುತ್ತಿತ್ತು. ಇದರಿಂದ NDVI ಮತ್ತು NDWI ಎಂಬ ಸೂಚ್ಯಂಕವನ್ನು ಆಧರಿಸಿ ನೀರಿನ ಪಿಕ್ಸೆಲ್‌ಗಳನ್ನು ಗುರುತಿಸಿ, ವಿಶ್ಲೇಷಿಸಲಾಗುತ್ತದೆ. ಭಾರತ ಸರ್ಕಾರದ ಕೇಂದ್ರ ಜಲ ಆಯೋಗವು ಈಗಾಗಲೇ ಹಲವಾರು ಜಲಾಶಯಗಳಲ್ಲಿನ ಹೂಳಿನ ಶೇಖರಣೆ ಮತ್ತು ಜಲಾಶಯದಲ್ಲಿನ ನೀರಿನ ಪ್ರಮಾಣದ ಮೌಲ್ಯಮಾಪನ ಮಾಡಲು ಲ್ಯಾಂಡ್‌ಸ್ಯಾಟ್‌ನಿಂದ ಆಪ್ಟಿಕಲ್ ರಿಮೋಟ್ ಸೆನ್ಸಿಂಗ್ ಡೇಟಾವನ್ನು ಬಳಸಿದೆ.

ರಿಮೋಟ್ ಸೆನ್ಸಿಂಗ್ ಡೇಟಾವನ್ನು ಬಳಸಿಕೊಂಡು, ಜಲಾಶಯದ ನೀರು ಹರಡುವ ಪ್ರದೇಶ ಮತ್ತು ನೀರಿನ ಮಟ್ಟವನ್ನು ಕಂಡುಕೊಂಡ ನಂತರ, ಟ್ರೆಪೆಜೋಡಲ್ ಸೂತ್ರದ ಸಹಾಯದಿಂದ ಜಲಾಶಯದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಪ್ರಮಾಣವನ್ನು ನಿರ್ಣಯಿಸಲಾಗುತ್ತದೆ. ಜಲಾಶಯ ಯೋಜನೆ ರೂಪಿಸಿದ ಹಂತದಲ್ಲಿಯೇ ಸಾಧಾರಣವಾಗಿ ಪ್ರತಿ ನೀರಿನ ಮಟ್ಟ - ವಿಸ್ತೀರ್ಣ - ನೀರಿನ ಪ್ರಮಾಣದ ಒಂದು ಕೋಷ್ಟಕ(elevation-area-capacity table)ವಿರುತ್ತದೆ. ಇದನ್ನು ರಿಮೋಟ್ ಸೆನ್ಸಿಂಗ್‌ನಿಂದ ಪಡೆದ ಮಾಹಿತಿಯ ಜೊತೆ ಹೋಲಿಸಲಾಗುತ್ತದೆ. ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಎಂದು ಕಂಡುಬಂದರೆ, ಹೂಳಿರುವುದು ಸ್ಪಷ್ಟವಾಗುತ್ತದೆ.

ಆದರೆ ಹೀಗೆ ಆಪ್ಟಿಕಲ್ ರಿಮೋಟ್ ಸೆನ್ಸಿಂಗ್ ಅನ್ನು ಬಳಸಲು ಒಂದು ಪ್ರಮುಖ ಸಮಸ್ಯೆ ಎಂದರೆ, ನಮ್ಮಲ್ಲಿ ಹೆಚ್ಚಾಗಿ ಜಲಾಶಯಗಳು ತುಂಬುವುದು ಮಳೆಗಾಲದಲ್ಲಿ ಮಾತ್ರ. ಆ ಸಮಯದಲ್ಲಿ ಹೆಚ್ಚಾಗಿ ಮೋಡಗಳು ಕವಿದಿರುತ್ತದೆ. ಹೀಗೆ ಮೋಡ ಕವಿದ ವಾತಾವರಣದಲ್ಲಿ ಆಪ್ಟಿಕಲ್ ರಿಮೋಟ್ ಸೆನ್ಸಿಂಗ್‌ನಿಂದ ಪಡೆಯಬಹುದಾದ ಮಾಹಿತಿ ಅಷ್ಟಾಗಿ ಪ್ರಯೋಜನಕಾರಿಯಾಗಿರದು. ಇದಕ್ಕೆ ಪರಿಹಾರವಾಗಿ, ‘ಮೈಕ್ರೋವೇವ್ ರಿಮೋಟ್ ಸೆನ್ಸಿಂಗ್ ಡೇಟಾ’ ತುಂಬಾ ಸಹಾಯಕವಾಗಿದೆ. ಅದರಲ್ಲೂ ಯುರೋಪಿಯನ್ ಸ್ಪೇಸ್ ಏಜೆನ್ಸಿಯಿಂದ (ESA) ಸೆಂಟಿನೆಲ್-10 ಎಂಬ ಉಪಗ್ರಹದ ಡೇಟಾ ಯಾವುದೇ ಶುಲ್ಕವಿಲ್ಲದೆ ಲಭ್ಯವಾಗಿರುವುದು ಒಂದು ವರವಾಗಿದೆ. ಮೋಡ ಕವಿದ ವಾತಾವರಣದಲ್ಲೂ ಮೈಕ್ರೋವೇವ್ ರಿಮೋಟ್ ಸೆನ್ಸಿಂಗ್ ಡೇಟಾವನ್ನು ಪಡೆಯಬಹುದಾಗಿದೆ. ಈ ವಿಧಾನದಲ್ಲಿ ನೀರಿನ ಪಿಕ್ಸೆಲ್‌ಗಳನ್ನು ಚೆನ್ನಾಗಿ ಗುರುತಿಸಬಹುದು.

ಸೆಂಟಿನೆಲ್-10 ಸಿಂಥೆಟಿಕ್ ಅಪರ್ಚರ್ ರೇಡಾರ್(SAR)ನ ಸಿ-ಬ್ಯಾಂಡ್ ಡೇಟಾವನ್ನು ಬಳಸಲಾಗುತ್ತದೆ. ಇದು ಪ್ರತಿ 12 ದಿನಗಳ ಪುನರಾವರ್ತಿತ ಅವಧಿಯನ್ನು ಹೊಂದಿದೆ. ಸೆಂಟಿನೆಲ್-10 ‘ಗ್ರೌಂಡ್ ರೇಂಜ್ ಡಿಟೆಕ್ಟೆಡ್’ (GRD) ಡೇಟಾವನ್ನು ಕೋಪರ್ನಿಕಸ್-ಸೆಂಟಿನೆಲ್ ಹಬ್ (https://scihub.copernicus.eu/dhus/)ನಿಂದ ಪಡೆಯಬಹುದು. ಇದು ಸೆಂಟಿನೆಲ್ ಡೇಟಾವನ್ನು ಪಡೆಯಲು ಮುಕ್ತ ತಾಣವಾಗಿದೆ.

SAR ಚಿತ್ರದ ಮೂಲಕ ಭೂಭಾಗವನ್ನೂ ಜಲಾಶಯದ ಜಲಭಾಗವನ್ನೂ ಗುರುತಿಸಲು ಸಾಧ್ಯ. ಜಲಾಶಯದಲ್ಲಿ ನಿಂತಿರುವ ಜಲಭಾಗವು ಹಿಮ್ಮಖ ಚಲನಶೀಲವನ್ನು (back-scattering) ಹೊಂದಿರುವಂತೆ ಚಿತ್ರದಲ್ಲಿ ಗೋಚರಿಸುತ್ತದೆ. ಜೊತೆಗೆ ನೀರಿನ ಪಿಕ್ಸೆಲ್‌ಗಳು ಗಾಢವಾದ ಬಣ್ಣದಲ್ಲಿಯೂ ಕಾಣುತ್ತಿರುತ್ತವೆ. ಆದ ಕಾರಣ ಜಲಶಯದ ನೀರಿನ ವಿಸ್ತೀರ್ಣವನ್ನು ಸುಲಭವಾಗಿ ಗುರುತಿಸಬಹುದು. ಹೀಗಾಗಿ, ಸೆಂಟಿನೆಲ್-1A SAR ಡೇಟಾವನ್ನು ಜಲಾಶಯಗಳ ಹೂಳಿನ ಪ್ರಮಾಣವನ್ನು ನಿರ್ಣಯಿಸಲು ಬಳಸಬಹುದಾಗಿದೆ. ಗೂಗಲ್ ಅರ್ಥ್ ಇಂಜಿನ್ ಸಹಾಯದಿಂದ ನೇರವಾಗಿ ಸೆಂಟಿನಲ್-10 SAR ಡೇಟಾವನ್ನು ಪಡೆದು, ಅಲ್ಲಿಯೇ ಅದನ್ನು ವಿಶ್ಲೇಷಿಸಲೂ ಸಾಧ್ಯ. ಎಂದರೆ ಯಾವ ಕೆಲಸವನ್ನು ಈ ಮೊದಲು ವಾರಗಟ್ಟಲೇ ಮಾಡಬೇಕಾಗುತ್ತಿತ್ತೋ ಅದನ್ನು ಇಂದು ಕೆಲವೇ ಗಂಟೆಗಳಲ್ಲಿ ಮಾಡುವಂತಾಗಿದೆ.

ಒಟ್ಟಾರೆ, ಸೆಂಟಿನೆಲ್-1A SAR ಡೇಟಾ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಸಂಪನ್ಮೂಲಗಳನ್ನು ಬಳಸಿಕೊಂಡು ಕಡಿಮೆ ಸಮಯದಲ್ಲಿ ಜಲಾಶಯಗಳ ಹೂಳನ್ನು ಅಂದಾಜು ಮಾಡಲು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.