ನವದೆಹಲಿ: ಉಚಿತ ಕರೆ ಮತ್ತು ಅಗ್ಗದ ದರದಲ್ಲಿ ಡಾಟಾ ಪೂರೈಸುತ್ತಿರುವ ರಿಲಯನ್ಸ್ ಜಿಯೊ, ಪೋರ್ನ್ ವೆಬ್‍ಸೈಟ್‍ಗಳನ್ನು ನಿಷೇಧಿಸಿದೆ ಎಂದು ಜಿಯೊ ಗ್ರಾಹಕರು ರೆಡಿಟ್ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಭಾರತದಲ್ಲಿ ಜನಪ್ರಿಯವಾಗಿರುವ ಪೋರ್ನ್ ವೆಬ್‍ಸೈಟ್‍ಗಳಿಗೆ ಜಿಯೊ ನಿಷೇಧ ಹೇರಿದೆ ಎಂಬ ಸುದ್ದಿ ಹರಿದಾಡುತ್ತಿದ್ದರೂ ನಿಜ ಸಂಗತಿ ಏನು ಎಂಬುದು ಸ್ಪಷ್ಟವಾಗಿಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಜಿಯೊ ನೆಟ್‍ವರ್ಕ್ ನಲ್ಲಿ ಪೋರ್ನ್ ವೆಬ್‌ಸೈಟ್ ಓಪನ್ ಮಾಡಲು ನೋಡಿದಾಗ ಅದು ಸಾಧ್ಯವಾಗಿಲ್ಲ ಎಂದು ರೆಡಿಟ್ ಗ್ರಾಹಕರೊಬ್ಬರು ಪೋಸ್ಟ್ ಮಾಡಿದ್ದರು.ಇದಕ್ಕೆ ಉತ್ತರವಾಗಿ ಹಲವಾರು ಗ್ರಾಹಕರು ತಮಗೂ ಇದೇ ರೀತಿಯ ಅನುಭವ ಆಗಿದೆ ಎಂದಿದ್ದಾರೆ.

ಜಿಯೊ ಜನಪ್ರಿಯ ಪೋರ್ನ್ ವೆಬ್‍ಸೈಟ್‍ಗಳನ್ನು ನಿಷೇಧಿಸಿರುವ ಸಾಧ್ಯತೆ ಇದೆ.ಜಿಯೊ ನೆಟ್‍ವರ್ಕ್ ಬಳಸುವ ಗ್ರಾಹಕರು ಅಧಿಕ ಸಂಖ್ಯೆಯಲ್ಲಿರುವ ಕಾರಣ ಈ ರೀತಿಯ ಕ್ರಮ ಕೈಗೊಂಡಿರುವ ಸಾಧ್ಯತೆಗಳಿವೆ ಎಂದು ಟೆಲಿಕಾಂಇಲಾಖೆ ಪ್ರತಿಕ್ರಿಯಿಸಿದೆ.
ಉತ್ತರಾಖಂಡ ಹೈಕೋರ್ಟ್ ಆದೇಶದ ಮೇರೆಗೆ ಇಂಟರ್ನೆಟ್ ಸೇವಾ ಸಂಸ್ಥೆಗಳು'ಪೋರ್ನ್ ವಿಷಯ' ಇರುವ827 ವೆಬ್‍ಸೈಟ್‍ಗಳನ್ನು ನಿಷೇಧಿಸಲು ಸರ್ಕಾರ ಆದೇಶಿಸಿತ್ತು ಎಂದು ಪಿಟಿಐ ವರದಿಯಲ್ಲಿ ಹೇಳಿದೆ.
ಮಕ್ಕಳ ಮನಸ್ಸಿನ ಮೇಲೆ ಪರಿಣಾಮಬೀರುವ ಪೋರ್ನೊಗ್ರಫಿಕ್ ಸೈಟ್‍ಗಳನ್ನು ನಿಷೇಧಿಸಬೇಕು ಎಂದು ಸೆಪ್ಟೆಂಬರ್ 28ರಂದು ಹೈಕೋರ್ಟ್ ಆದೇಶಿಸಿತ್ತು.
ಪೋರ್ನ್ ಸೈಟ್ ನಿಷೇಧಕ್ಕೊಳಪಟ್ಟಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ, ನಿಷೇಧಿತ ವೆಬ್‍ಸೈಟ್‍ಗಳನ್ನು ಓಪನ್ ಮಾಡುವುದು ಹೇಗೆ ಎಂಬುದರ ಬಗ್ಗೆ ಯೂಟ್ಯೂಬ್ ವಿಡಿಯೊಗಳು, ಸಲಹೆ ಸೂಚನೆ ಬರಹಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ

ಪೋರ್ನ್ ನಿಷೇಧ: ಟ್ವಿಟರ್‌ನಲ್ಲಿ ಮೀಮ್ ಗೋಳು!

Jio users right now..😔😢😭#JioBannedPorn #pornban pic.twitter.com/fd0xiAwL3N

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.