ಸ್ಯಾನ್‌ಫ್ರಾನ್ಸಿಸ್ಕೊ: ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ ಒಡೆತನ ಹೊಂದಿರುವ ಮೆಟಾ ಕಂಪನಿಯು ಮತ್ತೊಂದು ಸುತ್ತಿನ ಬಹುದೊಡ್ಡ ಉದ್ಯೋಗ ಕಡಿತಕ್ಕೆ ಮುಂದಾಗಿದೆ.

ಶೀಘ್ರದಲ್ಲೇ ಮೆಟಾದ 10 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಾಗಿ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಮೆಟಾದ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ. 10 ಸಾವಿರ ಉದ್ಯೋಗಿಗಳೆಂದರೆ ಕಂಪನಿಯ ಶೇ 13 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕಲಾಗುತ್ತದೆ.

ಕಳೆದ ಆರು ತಿಂಗಳ ಅವಧಿಯಲ್ಲಿ ಇದು ಎರಡನೇ ಸುತ್ತಿನ ದೊಡ್ಡ ಉದ್ಯೋಗ ಕಡಿತವಾಗಿದೆ. ನವೆಂಬರ್‌ನಲ್ಲಿ 5000 ಉದ್ಯೋಗಿಗಳನ್ನು ಮೆಟಾ ಕೆಲಸದಿಂದ ತೆಗೆದಿತ್ತು.

ಇದು ಕಠಿಣವಾದ ನಿರ್ಧಾರ. ಆದರೆ, ಬೇರೆ ದಾರಿಯಿಲ್ಲ ಎಂದು ಜುಕರ್‌ಬರ್ಗ್ ಹೇಳಿದ್ದಾರೆ. ಮೆಟಾ 87 ಸಾವಿರ ಪೂರ್ಣಾವಧಿಯ ಉದ್ಯೋಗಿಗಳನ್ನು ಹೊಂದಿದೆ.

ಇತ್ತೀಚಿನ ದಿನಗಳಲ್ಲಿ ಮೆಟಾ ಆದಾಯ ಸೃಜನೆಯಲ್ಲಿ ಸವಾಲುಗಳನ್ನು ಎದುರಿಸುತ್ತಿದೆ. ಡಿಜಿಟಲ್ ಜಾಹೀರಾತುಗಳಲ್ಲಿ ಬದಲಾವಣೆ ಮತ್ತು ಆ್ಯಪಲ್ ಕಂಪನಿ ತನ್ನ ಪ್ರೈವೆಸಿ ನೀತಿಯಲ್ಲಿ ಬದಲಾವಣೆ ಮಾಡಿದ್ದು ಮೆಟಾ ಕಂಪನಿಗೆ ಹೊಡೆತ ಕೊಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಟಿಕ್‌ಟಾಕ್ ಕಡೆಯಿಂದ ಎದುರಾಗಿರುವ ಸ್ಪರ್ಧೆಯು ಮೆಟಾ ಕಂಪನಿಗೆ ಸವಾಲಾಗಿದೆ. ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಂ ಕಡೆಯಿಂದ ಯುವಕರು ಟಿಕ್‌ಟಾಕ್ ಕಡೆ ವಾಲುತ್ತಿದ್ದಾರೆ.

Photo Gallery: ದುಬೈ ಪ್ರವಾಸದಲ್ಲಿ ಕೆಂಪುಡುಗೆಯಲ್ಲಿ ಮಿಂಚಿದ ನಟಿ ನೇಹಾ ಮಲಿಕ್...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.