ಬೆಂಗಳೂರು: ಸಾಮಾಜಿಕ ಜಾಲತಾಣಗಳ ಅಬ್ಬರ ಶುರುವಾದ ಮೇಲೆ ಸೆಲೆಬ್ರಿಟಿಗಳಷ್ಟೇ ಅಲ್ಲದೇ ರಾಜಕಾರಣಿಗಳು, ದೊಡ್ಡ ದೊಡ್ಡ ಕಂಪನಿಗಳು ಸೇರಿದಂತೆ ಸರ್ಕಾರದ ಹಲವಾರು ಇಲಾಖೆಗಳೂ ಸಹ ಸೋಶಿಯಲ್ ಮೀಡಿಯಾಗಳನ್ನು ಸಕ್ರಿಯವಾಗಿ ಬಳಸುತ್ತಿವೆ.

ಈ ಮೂಲಕ ಇಲಾಖೆ ಹಾಗೂ ಸಾರ್ವಜನಿಕರ ನಡುವೆ ನೇರ ಕೊಂಡಿಯಾಗಿ ಸಾಮಾಜಿಕ ಜಾಲತಾಣಗಳು ಬಳಕೆಯಾಗುತ್ತಿವೆ. ಅದರಲ್ಲೂ ದೇಶದ ಎಲ್ಲ ರಾಜ್ಯಗಳ ಪೊಲೀಸ್ ಇಲಾಖೆಗಳು ಸಹ ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ಪ್ರತಿನಿತ್ಯದ ಅಪ್ಡೇಟ್ಗಳನ್ನು ಕೊಡುತ್ತಿರುತ್ತವೆ.

ಹೀಗೆ ಪೋಸ್ಟ್ಗಳನ್ನು ಹಂಚಿಕೊಳ್ಳುವಾಗ ಕೆಲ ಪೊಲೀಸರು ತಮ್ಮ ಪೋಸ್ಟ್ಗಳು ಹೆಚ್ಚು ಜನರಿಗೆ ತಲುಪಲಿ ಎಂದು ಸೃಜನಶೀಲವಾಗಿ ಪೋಸ್ಟ್ಗಳನ್ನು ರಚಿಸಿ ಹಂಚುತ್ತಾರೆ. ಇದೇ ರೀತಿ ಒಡಿಶಾದ ಬಹರಾಂಪುರ್ ಜಿಲ್ಲಾ ಪೊಲೀಸರು ಹಂಚಿಕೊಂಡಿರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.

ಸಾಮಾನ್ಯವಾಗಿ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದಾಗ ಅವರ ಮುಖಗಳನ್ನು ಮರೆಮಾಚಲಾಗುತ್ತದೆ. ಇದು ಪೊಲೀಸ್ ನಿಯಮಾವಳಿಗಳಲ್ಲೂ ಇದೆ. ಇದಕ್ಕೆ ಕೆಲ ಪೊಲೀಸರು ಮುಖಗವಸು ಬಳಸಿದರೆ ಇನ್ನೂ ಅನೇಕ ಪೊಲೀಸರು ನಿಯಮಾವಳಿಗಳನ್ನು ಉಲ್ಲಂಘಿಸುತ್ತಾರೆ. ಆರೋಪಿಗಳ ಮುಖ ಮರೆಮಾಚುವುದಕ್ಕೆ ಹೋಗುವುದಿಲ್ಲ.

ಆದರೆ, ಬಹರಾಂಪುರ್ ಜಿಲ್ಲಾ ಪೊಲೀಸರು ವ್ಯಕ್ತಿ ಮತ್ತು ಆತನ ಮಗನಿಗೆ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಈ ಪ್ರಕರಣದ ಬಗ್ಗೆ ಮಾಹಿತಿ ನೀಡಲು ಪೊಲೀಸರು ಪೋಸ್ಟ್ ಹಂಚಿಕೊಂಡಿದ್ದು ಮಾತ್ರ ನಗು ತರಿಸಿದೆ.

ಆರೋಪಿಗಳ ಮುಖ ಮರೆಮಾಚಲು ಪೊಲೀಸರು ಆರೋಪಿಗಳ ಮುಖಸ್ಥಿತಿ ಬಿಂಬಿಸುವ ಎಮೋಜಿಗಳನ್ನು ಬಳಸಿದ್ದು ಹಲವರ ಮೆಚ್ಚುಗೆ ಗಳಿಸಿದೆ. ಪೊಲೀಸರ ಈ ರೀತಿಯ ಸೃಜನಶೀಲ ಕೆಲಸಗಳು ಹೆಚ್ಚಾಗಲಿ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.