ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರೆಜಿಲ್‌ನಲ್ಲಿ ‘ಎಕ್ಸ್’ ಸ್ಥಗಿತ

Published : 1 ಸೆಪ್ಟೆಂಬರ್ 2024, 16:12 IST
Last Updated : 1 ಸೆಪ್ಟೆಂಬರ್ 2024, 16:12 IST
ಫಾಲೋ ಮಾಡಿ
Comments

ಸಾವೊಪೌಲೊ: ಬ್ರೆಜಿಲ್‌ನಲ್ಲಿ ಸಾಮಾಜಿಕ ಜಾಲತಾಣ ‘ಎಕ್ಸ್‌’ ಕಾರ್ಯಾಚರಣೆಯನ್ನು ಸುಪ್ರಿಂ ಕೋರ್ಟ್ ಆದೇಶದಂತೆ ಶನಿವಾರದಿಂದ ಸ್ಥಗಿತಗೊಳಿಸಲಾಗಿದೆ. 

ಹೀಗಾಗಿ, ‘ಎಕ್ಸ್‌’ ಇಲ್ಲದೆ ಜಗತ್ತಿನಿಂದ ಬೇರ್ಪಟ್ಟಂತೆ ಅನಿಸುತ್ತಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಎಲಾನ್‌ ಮಸ್ಕ್‌ ಮಾಲೀಕತ್ವದ ‘ಎಕ್ಸ್‌’ ಬ್ರೆಜಿಲ್‌ನಲ್ಲಿ ಕಾನೂನು ಪ್ರತಿನಿಧಿಯನ್ನು ನೇಮಿಸಲು ನಿರಾಕರಿಸಿತ್ತು. ಇದಕ್ಕಾಗಿ ಸುಪ್ರೀಂ ಕೋರ್ಟ್‌ ವಿಧಿಸಿದ ಗಡುವನ್ನೂ ಮೀರಿತ್ತು. ಹೀಗಾಗಿ ಆದೇಶ ಪಾಲನೆವರೆಗೂ ನಿಷೇಧ ಮುಂದುವರಿಯಲಿದೆ‌ ಎಂದು  ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅಲೆಕ್ಸಾಂಡರ್‌ ಡೆ ಮೊರಾಸ್‌ ತಿಳಿಸಿದ್ದಾರೆ.

ಬ್ರೆಜಿಲ್‌ನಲ್ಲಿ 1 ಕೋಟಿ ಎಕ್ಸ್‌ ಬಳಕೆದಾರರಿದ್ದರು.

ಎಕ್ಸ್ ಬಳಕೆದಾರರಾದ ಚಿಕೊ ಬರ್ನೆ ಅವರು ‘ಜಗತ್ತಿನಲ್ಲಿ ಏನಾಗುತ್ತಿದೆ ಎಂದು ತಿಳಿಯುತ್ತಿಲ್ಲ’ ಎಂದು ಮತ್ತೊಂದು ಜಾಲತಾಣ ‘ಥ್ರೆಡ್‌’ನಲ್ಲಿ ಬರೆದುಕೊಂಡಿದ್ದಾರೆ.

ಬ್ರೆಜಿಲ್‌ನಲ್ಲಿ ‘ಎಕ್ಸ್‌’ಗೆ ಪರ್ಯಾಯವಾಗಿ ‘ಬ್ಲ್ಯೂ ಸ್ಕೈ’ ಎಂಬ ಸಾಮಾಜಿಕ ಮಾಧ್ಯಮವನ್ನು ಕಳೆದ ವರ್ಷ ಅಭಿವೃದ್ಧಿಪಡಿಸಲಾಗಿದೆ. ಕೆಲವು ದಿನಗಳಿಂದೀಚೆಗೆ ‘ಬ್ಲ್ಯೂ ಸ್ಕೈ’ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಬ್ರೆಜಿಲ್‌ನಲ್ಲಿ ‘ಎಕ್ಸ್‌’ ಜಾಲತಾಣವು ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಯುಟ್ಯೂಬ್‌ನಷ್ಟು ಜನಪ್ರಿಯ ಅಲ್ಲ. ಆದರೆ ರಾಜಕೀಯ ಚರ್ಚೆಗಳಿಗೆ ಅದು ಮುಖ್ಯ ವೇದಿಕೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT