ನಟ ದಿವಂಗತ ಪುನೀತ್ ರಾಜ್ಕುಮಾರ್ ಅವರ ಟ್ವಿಟರ್ ಖಾತೆಯನ್ನು ಟ್ವಿಟರ್ ಸಂಸ್ಥೆ ಮರುಪರಿಶೀಲಿಸಿ, ಮತ್ತೆ ಬ್ಲೂಟಿಕ್ ನೀಡಿದೆ.

ಇತ್ತೀಚೆಗೆ ಪುನೀತ್ ಟ್ವಿಟರ್ ಖಾತೆಯಿಂದ ಬ್ಲೂಟಿಕ್ ತೆಗೆದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಟ್ವಿಟರ್ ಸಂಸ್ಥೆಯ ವಿರುದ್ಧ ಅಸಮಾಧಾನ ಹೊರಹಾಕಿದ್ದ ಅಭಿಮಾನಿಗಳು, ನೆಟ್ಟಿಗರು ಟ್ವಿಟರ್ನಲ್ಲಿ #ReverifyPuneethRajkumarTwitter ಎಂಬ ಅಭಿಯಾನವನ್ನು ಆರಂಭಿಸಿದ್ದರು.ನಿರ್ದೇಶಕಸಂತೋಷ್ಆನಂದರಾಮ್ ಸೇರಿದಂತೆ ಚಂದನವನದ ಹಲವು ಕಲಾವಿದರೂ ಈ ಕುರಿತು ಟ್ವೀಟ್ ಮಾಡಿದ್ದರು.

ಇವೆಲ್ಲದರ ಪರಿಣಾಮವಾಗಿ ಅಪ್ಪು ಟ್ವಿಟರ್ ಖಾತೆಗೆ ಮತ್ತೆ ಬ್ಲೂಟಿಕ್ ನೀಡಲಾಗಿದೆ. ‘ಅಪ್ಪು ಅಣ್ಣ ಇನ್ನೂ ನಮ್ಮೆಲ್ಲರ ಹೃದಯದಲ್ಲಿ ಜೀವಂತವಾಗಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷ್ಯ. ಪವರ್ಫುಲ್ ಮ್ಯಾನ್ನ ಪವರ್ಫುಲ್ ಫ್ಯಾನ್ಸ್ಗೆ ಧನ್ಯವಾದ’ ಎಂದು ಸಂತೋಷ್ ಆನಂದರಾಮ್ ಸೋಮವಾರ ಟ್ವೀಟ್ ಮಾಡಿದ್ದಾರೆ.

ಸೆಲೆಬ್ರಿಟಿಗಳ ಅಧಿಕೃತ ಟ್ವಿಟರ್ ಖಾತೆಗೆ, ಟ್ವಿಟರ್ ಸಂಸ್ಥೆಯು ಬ್ಲೂಟಿಕ್ ನೀಡುತ್ತದೆ. ಇದರಿಂದ ನಕಲಿ ಮತ್ತು ಅಸಲಿ ಖಾತೆಗಳನ್ನು ಗುರುತಿಸಲು ಸಹಾಯವಾಗುತ್ತದೆ. 2021ರ ಅಕ್ಟೋಬರ್ 29ರಂದು ಪುನೀತ್ ತಮ್ಮ ಖಾತೆಯಿಂದ ಕೊನೆಯ ಟ್ವೀಟ್ ಮಾಡಿದ್ದರು. ಅದೇ ದಿನ ಮಧ್ಯಾಹ್ನ ಹೃದಯಸ್ತಂಭನದಿಂದ ಅವರು ಮೃತಪಟ್ಟಿದ್ದರು. ನಂತರದಲ್ಲಿ ಅವರ ಟ್ವಿಟರ್ ಖಾತೆ ನಿಷ್ಕ್ರಿಯವಾಗಿದ್ದ ಕಾರಣ ಟ್ವಿಟರ್ ಸಂಸ್ಥೆಯು ಬ್ಲೂಟಿಕ್ ಹಿಂಪಡೆದಿತ್ತು ಎನ್ನಲಾಗಿದೆ. ಬ್ಲೂಟಿಕ್ ಮರಳಿ ನೀಡಲು ಅಭಿಯಾನ ಹಾಗೂ ಅಕ್ಟೋಬರ್ 28ರಂದು ‘ಗಂಧದಗುಡಿ’ ಬಿಡುಗಡೆ ಘೋಷಣೆ ಹಿನ್ನೆಲೆಯಲ್ಲಿ ಪುನೀತ್ ಅವರ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿ ಲಕ್ಷಾಂತರ ಜನರು ಟ್ವೀಟ್ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.