ನ್ಯೂಯಾರ್ಕ್: ಇಂಟೆರ್‌ನೆಟ್‌ನಲ್ಲಿ ಟ್ವಿಟರ್ ಅತ್ಯಂತ ಆಸಕ್ತಿದಾಯಕ ತಾಣವಾಗಿದೆ ಎಂದು ಹೊಸ ಮಾಲೀಕ ಎಲಾನ್ ಮಸ್ಕ್ ಹೇಳಿದ್ದಾರೆ. ಈ ನಡುವೆ ಟ್ವಿಟರ್ ಉದ್ಯೋಗ ಕಡಿತದ ಭೀತಿ ಎದುರಿಸುತ್ತಿದೆ.

ಟ್ವಿಟರ್ ವೆರಿಫೈಡ್ ಖಾತೆಗಳಿಗೆ (ಬ್ಲೂ ಟಿಕ್) ಮಾಸಿಕ ಶುಲ್ಕ ವಿಧಿಸುವ ಎಲಾನ್ ಮಸ್ಕ್ ಯೋಜನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ನಡುವೆ ಟ್ವೀಟ್ ಮಾಡಿರುವ ಮಸ್ಕ್, 'ಮೈಕ್ರೋಬ್ಲಾಗಿಂಗ್ ತಾಣವು ಇಂಟೆರ್‌ನೆಟ್‌ನ ಅತ್ಯಂತ ಆಸಕ್ತಿದಾಯಕ ತಾಣವಾಗಿದ್ದು, ಅದಕ್ಕಾಗಿಯೇ ನೀವೀಗ ನನ್ನ ಟ್ವೀಟ್ ಅನ್ನು ಒದುತ್ತಿದ್ದೀರಿ' ಎಂದು ಹೇಳಿದ್ದಾರೆ.

ಇದನ್ನೂ ಓದಿ:ಟ್ವಿಟರ್ ಬಳಕೆದಾರರು ಬ್ಲೂ ಟಿಕ್ಗಾಗಿಶೀಘ್ರದಲ್ಲೇ ಹಣ ಪಾವತಿಸಬೇಕು!

ಟೆಸ್ಲಾ ಖ್ಯಾತಿಯ ಉದ್ಯಮಿ ಎಲಾನ್ ಮಸ್ಕ್, 44 ಬಿಲಿಯನ್ ಡಾಲರ್‌ಗೆ (ಸುಮಾರು 3.36 ಲಕ್ಷ ಕೋಟಿಗೆ) ಟ್ವಿಟರ್ ಕಂಪನಿಯ ಪೂರ್ತಿ ಷೇರು ತಮ್ಮದಾಗಿಸಿಕೊಂಡಿದ್ದರು.

ಟ್ವಿಟರ್‌ನಲ್ಲಿ ಬ್ಲೂ ಟಿಕ್ ಖಾತೆ ಹೊಂದಿರುವವರಿಗೆ ಮಾಸಿಕ ಎಂಟು ಡಾಲರ್ ಶುಲ್ಕ ವಿಧಿಸಲಾಗುವುದು ಎಂದು ಮಸ್ಕ್, ಬುಧವಾರ ಹೇಳಿದ್ದರು. ಇದು ದೀರ್ಘಕಾಲದ ವಿಶ್ವಾಸಾರ್ಹ ಬಳಕೆದಾರರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಉದ್ಯೋಗ ಕಡಿತ ಭೀತಿ...
ಏತ್ಮನ್ಮಧ್ಯೆ ವೆಚ್ಚವನ್ನು ಕಡಿತಗೊಳಿಸಲು ಟ್ವಿಟರ್‌ನ ಅರ್ಧದಷ್ಟು ಉದ್ಯೋಗಿಗಳನ್ನು ತೆಗೆದು ಹಾಕುವ ಸಾಧ್ಯತೆಯಿದೆ ಎಂದು ಅಮೆರಿಕದ ತಂತ್ರಜ್ಞಾನ ವೆಬ್‌ಸೈಟ್ 'ದಿ ವರ್ಜ್' ವರದಿ ಮಾಡಿದೆ.

3,700ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಕಂಪನಿ ಮುಂದಾಗಿದೆ ಎಂದು ಅದು ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.