ಬೆಂಗಳೂರು: ವಾಟ್ಸ್ಆ್ಯಪ್ ಮೂಲಕ ಕಳುಹಿಸಲಾಗುವ ಫೋಟೊ ಮತ್ತು ವಿಡಿಯೋಗಳನ್ನು ನೋಡಿದ ಬಳಿಕ ಸ್ವಯಂ ಆಗಿ ಡಿಲೀಟ್ ಆಗುವ ವಿಶೇಷ ಫೀಚರ್ ಅನ್ನು ಪರಿಶೀಲಿಸಲಾಗುತ್ತಿದೆ.

ವಾಟ್ಸ್ಆ್ಯಪ್ ಆಂಡ್ರಾಯ್ಡ್ ಬೀಟಾ ಆವೃತ್ತಿಯಲ್ಲಿ ‘ವ್ಯೂ ಒನ್ಸ್’ ಎನ್ನುವ ಆಯ್ಕೆ ಪರಿಚಯಿಸಲಾಗಿದ್ದು, ಬಳಕೆದಾರರು ಕಳುಹಿಸುವ ಫೋಟೊ ಮತ್ತು ವಿಡಿಯೊಗಳನ್ನು ಸ್ವೀಕರಿಸಿದವರು ಅದನ್ನು ವೀಕ್ಷಿಸಿದ ಬಳಿಕ, ತಾನಾಗಿಯೇ ಅಳಿಸಿ ಹೋಗಲಿದೆ.

ಈಗಾಗಲೇ ವ್ಯೂ ಒನ್ಸ್ ಆಯ್ಕೆ ಇನ್‌ಸ್ಟಾಗ್ರಾಂ ಮತ್ತು ಸ್ನ್ಯಾಪ್‌ಚಾಟ್‌ನಲ್ಲಿ ಬಳಕೆಯಲ್ಲಿದೆ. ಅದೇ ಮಾದರಿಯಲ್ಲಿ ವಾಟ್ಸ್ಆ್ಯಪ್ ಕೂಡ ಹೊಸ ಫೀಚರ್ ಬಿಡುಗಡೆ ಮಾಡಲು ಮುಂದಾಗಿದೆ.

ವಾಟ್ಸ್ಆ್ಯಪ್ ಹೊಸ ಫೀಚರ್ ಮತ್ತು ಅಪ್‌ಡೇಟ್‌ಗಳ ಕುರಿತು ಮಾಹಿತಿ ನೀಡುವ ‘ವಾಬೀಟಾಇನ್ಫೋ’ ಹೊಸ ಆಯ್ಕೆ ಕುರಿತು ಮಾಹಿತಿ ನೀಡಿದ್ದು, ಆಂಡ್ರಾಯ್ಡ್ ಬೀಟಾ ಆವೃತ್ತಿ 2.21.14.3 ಯಲ್ಲಿ ಹೊಸ ಫೀಚರ್ ಒದಗಿಸಲಾಗಿದೆ.

ಬ್ಯುಸಿನೆಸ್ ಖಾತೆಗಳ ಆನ್ಲೈನ್ ಸ್ಟೇಟಸ್ ತೆಗೆದು ಹಾಕಿದ ವಾಟ್ಸ್ಆ್ಯಪ್

ಹೊಸ ಫೀಚರ್ ಎಲ್ಲ ಬಳಕೆದಾರರಿಗೆ ಯಾವಾಗ ದೊರೆಯಲಿದೆ ಎನ್ನುವ ಕುರಿತು ವಾಟ್ಸ್ಆ್ಯಪ್ ವಿವರ ನೀಡಿಲ್ಲ.

PV Web Exclusive | ಕ್ಲಬ್ ಹೌಸ್ ತರಹದ ಹರಟೆಕಟ್ಟೆ ಫೇಸ್‌ಬುಕ್, ಟ್ವಿಟರಲ್ಲೂ ಇದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.