ಬೆಂಗಳೂರು: ಹಿಂದೂವಲ್ಲದ ಡೆಲಿವರಿ ಬಾಯ್‌ನಿಂದ ಆಹಾರ ಸ್ವೀಕರಿಸುವುದಿಲ್ಲ ಎಂದು ಹೇಳಿ ಜೊಮ್ಯಾಟೊ ಗ್ರಾಹಕರೊಬ್ಬರು ಫುಡ್ ಆರ್ಡರ್ ರದ್ದು ಮಾಡಿದ್ದರು. ಈ ವಿಷಯವನ್ನು ಅವರು ಟ್ವೀಟ್ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಜೊಮ್ಯಾಟೊ ಆಹಾರಕ್ಕೆ ಧರ್ಮವಿಲ್ಲ, ಆಹಾರವೇ ಧರ್ಮ ಎಂದಿತ್ತು.ಜೊಮ್ಯಾಟೊದ ಈ ಟ್ವೀಟ್‌ಗೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿತ್ತು.

ಇದನ್ನೂ ಓದಿ:‘ಆಹಾರ ಧರ್ಮ’ ಮೆರೆದ ಜೊಮ್ಯಾಟೊ ಕಂಪನಿ

ಇದೀಗ ಗ್ರಾಹಕರಿಗೆ ಧರ್ಮದ ಬಗ್ಗೆ ಪ್ರಶ್ನಿಸುವ ಹಕ್ಕು ಇದೆ ಎಂದು ಹೇಳಿ ಫುಡ್ ಆರ್ಡರ್ ರದ್ದು ಮಾಡಿದ್ದ ಜೊಮ್ಯಾಟೊ ಗ್ರಾಹಕರಿಗೆ ಬೆಂಬಲ ಸೂಚಿಸಿ ಟ್ವೀಟಿಗರು ಜೊಮ್ಯಾಟೊ ಆ್ಯಪ್ ಅನ್‌ಇನ್‌ಸ್ಟಾಲ್ ಮಾಡಿ ಪ್ರತಿಭಟಿಸಿದ್ದಾರೆ. ಗುರುವಾರ ಟ್ವಿಟರ್‌ನಲ್ಲಿ #ZomatoUninstalled,#boycottzomatoಟಾಪ್ ಟ್ರೆಂಡ್ ಆಗಿದೆ.

ಅದೇ ವೇಳೆ ಹಿಂದೂ ಅಲ್ಲದ ಡೆಲಿವರಿ ಬಾಯ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಜಬಲ್ಪುರ್‌ನ ಟ್ವೀಟಿಗರ ವಿರುದ್ಧನೊಟೀಸ್ ಕಳುಹಿಸಲು ಮಧ್ಯಪ್ರದೇಶ ಪೊಲೀಸರು ನಿರ್ಧರಿಸಿದ್ದಾರೆ.

ಇದನ್ನೂ ಓದಿ:‘ಮನಸಿಗೆ ನೋವಾಯಿತು... ಆದರೆ, ಏನು ಮಾಡುವುದು?’

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಜಬಲ್ಪುರ್ ಎಸ್‌ಪಿ ಅಮಿತ್ ಸಿಂಗ್, ನಾವು ಟ್ವೀಟ್ ಮಾಡಿದ ವ್ಯಕ್ತಿಗೆ ನೋಟಿಸ್ ಕಳಿಸಲಿದ್ದೇವೆ. ಅದು ನಿಜವೇ ಆಗಿದ್ದರೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ವಿಷಯ ಇದಾಗಿದೆ. ಇದೊಂದು ಅಪರಾಧ ಎಂದಿದ್ದಾರೆ.
ಟ್ವೀಟ್ ಬಗ್ಗೆ ಯಾರೊಬ್ಬರೂ ದೂರು ನೀಡಿಲ್ಲ ಆದರೆ ಮಧ್ಯ ಪ್ರದೇಶದ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ನೋಟಿಸ್ ಕಳಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.