ಚೀನಾದಲ್ಲಿ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಿಗೆ ಆ್ಯಪ್ಗಳನ್ನು ಒದಗಿಸುವ ಆಂಡ್ರಾಯ್ಡ್ ಆ್ಯಪ್ ಸ್ಟೋರ್ನಿಂದ ಅಲಿಬಾಬಾ ಸಂಸ್ಥೆಯ ಒಡೆತನದ ಯುಸಿ ಬ್ರೌಸರ್ ಅನ್ನು ಮಂಗಳವಾರ ತೆಗೆದುಹಾಕಲಾಗಿದೆ.

ಚೀನಾದ ರಾಷ್ಟ್ರೀಯ ಟಿವಿ ವಾಹಿನಿಯಲ್ಲಿ ಪ್ರಸಾರವಾದ ವಾರ್ಷಿಕ ಗ್ರಾಹಕ ಹಕ್ಕುಗಳ ಕಾರ್ಯಕ್ರಮವನ್ನು ಯುಸಿ ಬ್ರೌಸರ್ ಟೀಕಿಸಿದ ಮರುದಿನವೇ ಈ ಕ್ರಮ ಕೈಗೊಳ್ಳಲಾಗಿದೆ.

ಆ್ಯಪ್ ಅನ್ನು ಚೀನಾದಲ್ಲಿ ಆಂಡ್ರಾಯ್ಡ್ ಆ್ಯಪ್ ಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಆ್ಯಪಲ್ ಆ್ಯಪ್ ಸ್ಟೋರ್ನಲ್ಲಿ ಯುಸಿ ಬ್ರೌಸರ್ ದೊರೆಯುತ್ತಿತ್ತು.

ಚೀನಾದ ಸೆಂಟ್ರಲ್ ಟೆಲಿವಿಶನ್ನ ಜನಪ್ರಿಯ 2 ಗಂಟೆಗಳ ‘315’ ಕಾರ್ಯಕ್ರಮ ಸೋಮವಾರ ರಾತ್ರಿ ಪ್ರಸಾರವಾಗಿತ್ತು. ಆ ಕಾರ್ಯಕ್ರಮವನ್ನು ಟೀಕಿಸಿದ ಯುಸಿ ಬ್ರೌಸರ್ ಮತ್ತು ಇತರ ವಿದೇಶಿ ಕಂಪನಿಗಳನ್ನು ಚೀನಾ ಗುರಿಯಾಗಿಸಿಕೊಂಡು ಕ್ರಮ ಕೈಗೊಳ್ಳುತ್ತಿದೆ.

ಈ ಬಗ್ಗೆ ಯುಸಿ ಬ್ರೌಸರ್ ಕ್ಷಮೆ ಕೋರಿದ್ದು, ತಪ್ಪನ್ನು ಸರಿಪಡಿಸಿಕೊಳ್ಳುವುದಾಗಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.