ದಿನನಿತ್ಯದ ಜೀವನಶೈಲಿ, ನಿದ್ರೆಯ ಅವಧಿ ಇವುಗಳ ಮೇಲೆ ನಿಗಾ ಇರಿಸಿ ಆರೋಗ್ಯದ ಕಾಳಜಿ ಮಾಡುವ ಸ್ಮಾರ್ಟ್‌ವಾಚ್‌ಗಳಸಾಲಿಗೆ ಆ್ಯಪಲ್‌ನ ನಾಲ್ಕನೆ ತಲೆಮಾರಿನ ಧರಿಸಬಹುದಾದ ‘ವಾಚ್ ಸೀರಿಸ್ 4’ ಹೊಸ ಸೇರ್ಪಡೆಯಾಗಿದೆ.

ದೈಹಿಕ ಕಸರತ್ತಿನ ಮೇಲೆ ನಿಗಾ ಇರಿಸಿ ಮಾಹಿತಿ ನೀಡುವ ವಾಚ್‌ಗಳು ಆರೋಗ್ಯದ ಮೇಲೆ ನಿಗಾ ಇರಿಸುವ ಜಾಣ ಸಾಧನಗಳಾಗಿರುವುದು ಇವುಗಳ ವೈಶಿಷ್ಟ್ಯವಾಗಿದೆ. ಇದರ ಹೊರತಾಗಿ ಹಿಂದಿನ ಸೀರಿಸ್ ಸ್ಮಾರ್ಟ್‌ವಾಚ್‌ಗಳಿಗೆ ಹೋಲಿಸಿದರೆ ಇದರ ಸ್ಕ್ರೀನ್ ದೊಡ್ಡದಾಗಿದೆ. ವೇಗವಾಗಿ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇವುಗಳ ಕಾರ್ಯವೈಖರಿಯೂ ಉತ್ತಮವಾಗಿದೆ. ಬೆಲೆಯೂ ಹೆಚ್ಚಿಗೆ ಇದೆ. ಹಿಂದಿನ ವಾಚ್‌ಗಳಿಗೆ ₹ 25,125 ಇದ್ದರೆ ಹೊಸ ವಾಚ್‌ಗಳಿಗೆ ₹ 28,728 ಇದೆ.

ಆದರೆ, ಇದೇ ಮೊದಲ ಬಾರಿಗೆ ಎಲೆಕ್ಟ್ರಿಕಲ್ ಹಾರ್ಟ್ ಸೆನ್ಸರ್ ಅನ್ನು ಈ ಸ್ಮಾರ್ಟ್‌ವಾಚ್‌ನಲ್ಲಿ ಅಳವಡಿಸಲಾಗಿದೆ. ಈ ಸೆನ್ಸರ್ ಎಲೆಕ್ಟ್ರೊಕಾರ್ಡಿಯೊಗ್ರಾಂ (ಇಕೆಜಿ) ಆ್ಯಪ್ ಜತೆಗೆ ಕಾರ್ಯನಿರ್ವಹಿಸುತ್ತದೆ. ಅಮೆರಿಕದ ‘ಆಹಾರ ಮತ್ತು ಔಷಧ’ ಇಲಾಖೆಯು ಈ ಆ್ಯಪ್‌ಗೆಮಾನ್ಯತೆ ನೀಡಿದೆ. ಈ ಸ್ಮಾರ್ಟ್‌ವಾಚ್‌ನ ಮೇಲ್ಭಾಗದಲ್ಲಿ ಬೆರಳಿರಿಸಿದರೆ ಸಾಕು ಹೃದಯದ ಚಟುವಟಿಕೆ ತಿಳಿಯಬಹುದು.

ಎಲೆಕ್ಟ್ರೊಕಾರ್ಡಿಯೊಗ್ರಾಂ ಪರೀಕ್ಷೆಯಲ್ಲಿಎದೆ ಮತ್ತು ಪಾದಕ್ಕೆ ಸಣ್ಣ ಸ್ಟಿಕ್ಕರ್ ರೀತಿಯ ಎಲೆಕ್ಟ್ರೋಡ್‌ಗಳನ್ನು ಅಂಟಿಸಲಾಗುತ್ತದೆ. ಅದರ ಮತ್ತೊಂದು ತುದಿಯ ವೈರ್‌ಗಳನ್ನು ಉಪಕರಣವೊಂದಕ್ಕೆ ಅಳವಡಿಸಲಾಗುತ್ತದೆ. ಹೃದಯದ ಸಂಕೇತಗಳ ದಾಖಲಿಸುವ ಈ ಸಾಧನ ಅದರ ಮಾಹಿತಿ ತೋರಿಸುವ ಗ್ರಾಫ್ ಉಳ್ಳ ಕಾಗದವನ್ನು ಪ್ರಿಂಟರ್ ಮೂಲಕ ನೀಡುತ್ತದೆ. ಈ ಪ್ರಕ್ರಿಯೆಗೆ (ಇಕೆಜಿ) ಎನ್ನಲಾಗುತ್ತದೆ.

ಸಾಂಪ್ರದಾಯಿಕವಾಗಿ ಎಲೆಕ್ಟ್ರೊಕಾರ್ಡಿಯೊಗ್ರಾಂ ಪರೀಕ್ಷೆ ನೀಡುವಷ್ಟು ಸಮಗ್ರ ಫಲಿತಾಂಶವನ್ನು ಆ್ಯಪಲ್ ವಾಚ್‌ನಲ್ಲಿನಿರೀಕ್ಷಿಸಲಾಗದು. ಸಾಂಪ್ರದಾಯಿಕ ಪರೀಕ್ಷೆಯಲ್ಲಿ ದೇಹದ ವಿವಿಧ ಭಾಗಗಳಿಂದ ಮಾಹಿತಿ ಸಂಗ್ರಹಿಸಲಾಗಿರುತ್ತದೆ. ಆದರೆ, ಈ ವಾಚ್‌ನಲ್ಲಿ ಹೃದಯದ ಎಲೆಕ್ಟ್ರಿಕಲ್ ಸಂಕೇತಗಳ ಒಂದು ಆಯಾಮವಷ್ಟೆ ದಾಖಲಾಗಿರುತ್ತದೆ. ಇದರಿಂದ ಎರಿಥ್ಮಿಯ (ಹೃದಯ ಬಡಿತ ಏರಿಳಿತ ಅಸಹಜವಾಗಿರುವ ಸ್ಥಿತಿ) ಕುರಿತು ಮಾಹಿತಿ ಸಂಗ್ರಹಿಸಬಹುದು ಅಷ್ಟೆ. ಆದರೆ ಹೃದಯಾಘಾತ ಪತ್ತೆ ಮಾಡಲಾಗುವುದಿಲ್ಲ.

ಆದರೂ ಈಚಿನ ದಿನಗಳಲ್ಲಿ ಧರಿಸಬಹುದಾದ ಗ್ಯಾಜೆಟ್‌ಗಳ ಸಾಲಿನಲ್ಲಿ ಆಗಿರುವ ಮಹತ್ವದ ಬೆಳವಣಿಗೆಗಳಲ್ಲಿ ಈ ಆ್ಯಪಲ್ ವಾಚ್ ಸಹ ಒಂದೆಂದು ಪರಿಗಣಿಸಬಹುದು. ಹೃದಯ ಸಂಬಂಧಿ ಸಮಸ್ಯೆಗಳು ಇರುವವರಿಗೆ ತಮ್ಮ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಿದೆ ಎನಿಸಿದರೆ ತಕ್ಷಣವೇ ಇಕೆಜಿ ಆ್ಯಪ್ ಬಳಸಿ ಎಲೆಕ್ಟ್ರೊಕಾರ್ಡಿಯೊಗ್ರಾಂ ಪರೀಕ್ಷೆ ಮಾಡಿಕೊಳ್ಳಬಹುದು. ಇದರ ಫಲಿತಾಂಶವನ್ನು ವೈದ್ಯರ ಜತೆ ಹಂಚಿಕೊಂಡು ಮುಂದೇನು ಮಾಡಬೇಕು ಎಂದು ನಿರ್ಧರಿಸಬಹುದು. ಅಷ್ಟರ ಮಟ್ಟಿಗೆ ಇದು ವಿಶ್ವಾಸಾರ್ಹ ಎನ್ನುವುದು ಇದನ್ನು ಪ್ರಯೋಗಾರ್ಥ ಬಳಸಿದವರ ಅನುಭವವಾಗಿದೆ.

ಆದರೆ, ತಮ್ಮ ಹೃದಯದ ಸ್ಥಿತಿ ಹೇಗಿದೆ ಎಂದು ಖಾತ್ರಿಯಾಗಿ ತಿಳಿಯದೆ ಇದ್ದವರಿಗೆ ಆ್ಯಪಲ್ ವಾಚ್‌ನ ಈ ಸೌಲಭ್ಯ ಅಷ್ಟೇನು ಆಕರ್ಷಣೀಯ ಎನಿಸದೆಯೂ ಇರಬಹುದು.
–ನ್ಯೂಯಾರ್ಕ್ ಟೈಮ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.