ಬೆಂಗಳೂರು: ನ್ಯಾನೋ ತಂತ್ರಜ್ಞಾನ ಬಳಸಿ ಅಡಕೆಯಿಂದ ಯೋಧರು, ಸಶಸ್ತ್ರ ಪಡೆಗಳ ಸಿಬ್ಬಂದಿ ಬಳಸಬಹುದಾದಷ್ಟು ಸಾಮರ್ಥ್ಯ ಇರುವ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ತಯಾರಿಸುವ ಸಂಶೋಧನೆ ಫಲ ಕೊಡುವತ್ತ ಸಾಗಿದೆ.

ಇಲ್ಲಿನ ಬಸವನಗುಡಿಯ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ನ್ಯಾನೋ ಮೆಟಿರಿಯಲ್ಸ್ ಆ್ಯಂಡ್ ಡಿಸ್‌ಪ್ಲೇಸ್ ಕೇಂದ್ರದಲ್ಲಿ ಅಡಕೆ ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳ ಮೇಲೆ ಪ್ರಯೋಗಗಳು ನಡೆಯುತ್ತಿವೆ.

ಕೇಂದ್ರದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ. ಗುರುಮೂರ್ತಿ ಹೆಗಡೆ ಅವರು ವಿದ್ಯಾರ್ಥಿಗಳ ನೆರವಿನಿಂದ ಈಗಾಗಲೇ ಅಡಿಕೆಯ ನ್ಯಾನೋ ಪಾರ್ಟಿಕಲ್‌ನಿಂದ ಎಪಾಕ್ಸಿ ಫೈಬರ್ ಗಾಜು, ನೀರಿನ ಪೈಪ್, ಬ್ಯಾಟರಿ, ನೀರು ಶುದ್ಧಿಕಾರಕ ಪರಿಕರ, ನೆಲ ಸ್ವಚ್ಛತಾ ದ್ರಾವಣ ಸೇರಿದಂತೆ ವಿವಿಧ ವಸ್ತುಗಳನ್ನು ಸಿದ್ಧಗೊಳಿಸಿದ್ದಾರೆ. ಅವರು ಈ ಸಂಶೋಧನೆಗಳ ಹಕ್ಕುಸ್ವಾಮ್ಯ (ಪೇಟೆಂಟ್) ಪಡೆದುಕೊಂಡಿದ್ದು, ಅಂತರರಾಷ್ಟ್ರೀಯ ಜರ್ನಲ್‌ಗಳಲ್ಲಿ ಕೂಡ ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡಿವೆ.

ಅಡಕೆಯಿಂದ ಸಂಶೋಧಿಸಿರುವ ಉತ್ಪನ್ನಗಳನ್ನು ರಾಜ್ಯ ಸರ್ಕಾರದ ನೆರವಿನಿಂದ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದ್ದಾರೆ. ಈ ಬಗ್ಗೆ ಅಡಕೆ ಕಾರ್ಯಪಡೆಗೆ ಮಾದರಿ ಪ್ರದರ್ಶಿಸಿ, ಪೂರಕ ದಾಖಲಾತಿಗಳನ್ನು ಒದಗಿಸಿದ್ದಾರೆ. ಅಡಕೆಯ ನ್ಯಾನೋ ಪಾರ್ಟಿಕಲ್ ನೆರವಿನಿಂದ ಮುಂದಿನ ದಿನಗಳಲ್ಲಿ ಮದ್ದು ಗುಂಡುಗಳು, ಮೊಬೈಲ್ ಪರದೆ, ನೀರಿನ ಬಾಟಲಿ ಸೇರಿದಂತೆ ವಿವಿಧ ವಸ್ತುಗಳನ್ನು ಸಂಶೋಧಿಸಲು ಮುಂದಾಗಿದ್ದಾರೆ. ಬುಲೆಟ್ ಫ್ರೂಪ್ ಜಾಕೆಟ್‌ಗಳನ್ನು ಡಿಆರ್‌ಡಿಒ ಪ್ರಯೋಗಾಲಯದ ಸಹಯೋಗದಲ್ಲಿ ಸಿದ್ಧಪಡಿಸಲು ಸಿದ್ಧತೆ ನಡೆಸುತ್ತಿದ್ದಾರೆ. 10 ವರ್ಷಗಳು ವಿದೇಶದಲ್ಲಿದ್ದ ಅವರು, ಕಳೆದ 5 ವರ್ಷಗಳಿಂದ ಇಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.

ಅಧಿಕ ಬಾಳಿಕೆ: ‘ಮೊದಲು ಅಡಕೆ ಸಿಪ್ಪೆಯನ್ನು ಪ್ರಯೋಗಕ್ಕೆ ಒಳಪಡಿಸಲಾಯಿತು. ಆದರೆ, ಅದರಲ್ಲಿ ನಮಗೆ ಫಲಿತಾಂಶ ದೊರೆಯಲಿಲ್ಲ. ಅಡಕೆಯನ್ನು ಪುಡಿಮಾಡಿ, ಸಾವಿರ ಡಿಗ್ರಿಯಲ್ಲಿ ನ್ಯಾನೋ ಪಾರ್ಟಿಕಲ್ ಆಗಿ ಪರಿವರ್ತಿಸಲಾಯಿತು. ಅದರಿಂದ ಬ್ಯಾಟರಿಯನ್ನು ತಯಾರಿಸಲಾಯಿತು. ಬಳಿಕ ವಿವಿಧ ವಸ್ತುಗಳನ್ನು ಸಂಶೋಧಿಸಿದೆವು’ ಎಂದು ಗುರುಮೂರ್ತಿ ಹೆಗಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬುಲೆಟ್ ಫ್ರೂಪ್ ಜಾಕೇಟ್ ತಯಾರಿಕೆಗೆ ಸಿದ್ಧತೆಗಳು ನಡೆಯುತ್ತಿವೆ. ಲೋಹದ ಗುಂಡುಗಳ ಬದಲು ಅಡಕೆಯ ಗುಂಡುಗಳನ್ನು ಕೂಡ ತಯಾರಿಸಲು ನಿರ್ಧರಿಸಿದ್ದೇವೆ. ಅದರ ಪರಿಣಾಮದ ಬಗ್ಗೆ ಅಧ್ಯಯನಗಳನ್ನು ನಡೆಸಲಾಗಿದೆ. ಅದೇ ರೀತಿ, ಡಾಂಬರುಗಳ ಜತೆಗೆ ಅಡಕೆಯ ನ್ಯಾನೋ ಪಾರ್ಟಿಕಲ್ ಮಿಶ್ರಣ ಮಾಡಿ, ರಸ್ತೆಗಳಿಗೆ ಬಳಸಲಾಗಿದೆ. ಸಿಮೆಂಟ್‌ಗೆ ಜತೆಗೆ ಕೂಡ ಸೇರಿಸಿ, ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಬಹುದು. ಈಗ ಸಿದ್ಧಪಡಿಸಿರುವ ಎಲ್ಲ ವಸ್ತುಗಳು ಮಾರುಕಟ್ಟೆಯಲ್ಲಿ ಇರುವ ವಸ್ತುಗಳಿಗಿಂತ ಶೇ 30 ರಷ್ಟು ಹೆಚ್ಚು ಬಲಿಷ್ಠ ಎನ್ನುವುದು ಸಾಬೀತಾಗಿದೆ’ ಎಂದು ವಿವರಿಸಿದರು.

ಅಡಕೆಯಿಂದ ಫೈಬರ್ ಗಾಜು ಸಿದ್ಧ

‘ಎಪಾಕ್ಸಿ ಫೈಬರ್ ಗಾಜನ್ನು ಕೂಡ ಅಡಕೆಯಿಂದ ತಯಾರಿಸಲಾಗಿದೆ. ಇದು 200 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ತಡೆದುಕೊಳ್ಳಲಿದೆ. ಯಾವುದೇ ಗೀರುಗಳು ಕೂಡ ಇದರ ಮೇಲೆ ಬೀಳುವುದಿಲ್ಲ. ಹೆಚ್ಚಿನ ಅವಧಿ ಬಾಳಿಕೆ ಬರಲಿದೆ. ಬಾಗಿಲುಗಳ ರೂಪದಲ್ಲಿ, ಮನೆಗಳ ಮುಂದೆ ಹಾಕುವ ಪಾರದರ್ಶಕ ಮೇಲು ಹಾಸು, ಶಾಲಾ–ಕಾಲೇಜಗಳಲ್ಲಿ ಬಳಸುವ ಬೋರ್ಡ್ ಸೇರಿದಂತೆ ವಿವಿಧ ಮಾದರಿಗಳಲ್ಲಿ ಬಳಸಬಹುದು. ಔಷಧ ಉದ್ಯಮಗಳಲ್ಲಿ ಪೆಲಾಡಿಯಂ ಕಾರ್ಬನ್ ಕೆಟಲಿಸ್ಟ್‌ಗೆ ಬದಲಾಗಿ ಅಡಕೆಯ ನ್ಯಾನೋ ಪಾರ್ಟಿಕಲ್ ಅನ್ನು ಬಳಸಬಹುದು ಎಂಬುದನ್ನು ದೃಢಪಡಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.