ಶೆನ್ಝೆನ್ (ಚೀನಾ): ಏಷ್ಯಾ ಮತ್ತು ಯುರೋಪ್ ಮಾರುಕಟ್ಟೆಗಳಲ್ಲಿ ವ್ಯಾಪಿಸಿರುವ ಚೀನಾದ ಶಿಯೋಮಿ, ಹುವೈ ಟೆಕ್ನಾಲಜೀಸ್, ಒಪ್ಪೊ ಹಾಗೂ ವಿವೊ ಸ್ಮಾರ್ಟ್ಫೋನ್ ಕಂಪನಿಗಳು; ಇದೀಗ ಗೂಗಲ್ ಪ್ರಭುತ್ವಕ್ಕೆ ಸವಾಲು ಹಾಕಲು ಸಜ್ಜಾಗಿವೆ. ಆ್ಯಪ್ಗಳ ಸಂಗ್ರಹಕ್ಕೆ ಹೊಸ ವೇದಿಕೆಯನ್ನು ಸೃಷ್ಟಿಸಲು ಮುಂದಾಗಿವೆ.

ಜಗತ್ತಿನಲ್ಲಿ ಗೂಗಲ್ ಅಪ್ಲಿಕೇಷನ್ಗಳು ಇಲ್ಲದ ಸ್ಮಾರ್ಟ್ಫೋನ್ಗಳು ಚೀನಾದಲ್ಲಿ ಹೊರತು ಪಡಿಸಿದರೆ ಬೇರೆಡೆ ಕಾಣಸಿಗುವುದು ಅಪರೂಪ. ಆ್ಯಂಡ್ರಾಯ್ಡ್ ಫೋನ್ಗಳಿಗೆ ಬೇಕಾದ ಆ್ಯಪ್ಸ್ಗಳಿಗೆ ವೇದಿಕೆಯಾಗಿರುವ 'ಪ್ಲೇ ಸ್ಟೋರ್'ಗೆ ಸಡ್ಡು ಹೊಡೆಯಲು ಚೀನಾದ ಸ್ಮಾರ್ಟ್ಫೋನ್ ತಯಾರಿಕಾ ಸಂಸ್ಥೆಗಳು ಜತೆಯಾಗುತ್ತಿವೆ. ನಿರ್ಮಿಸಲಾಗುವ ಹೊಸ ವೇದಿಕೆಗೆ ಚೀನಾದ ಹೊರಗಿನ ಆ್ಯಪ್ ಡೆವಲಪರ್ಗಳು ತಮ್ಮ ಎಲ್ಲ ಆ್ಯಪ್ಗಳನ್ನು ಒಂದೇ ಬಾರಿಗೆ ಅಪ್ಲೋಡ್ ಮಾಡುವ ಅವಕಾಶ ನೀಡಲಾಗುತ್ತಿದೆ.

ನಾಲ್ಕು ಕಂಪನಿಗಳ ಸಮಾಗಮವು ಗ್ಲೋಬಲ್ ಡೆವಲಪರ್ ಸರ್ವಿಸ್ ಅಲಿಯನ್ಸ್ (ಜಿಡಿಎಸ್ಎ) ವೇದಿಕೆ ರೂಪಿಸಲಿದೆ. ಗೇಮ್ಗಳು, ಮ್ಯೂಸಿಕ್, ಸಿನಿಮಾ ಸೇರಿದಂತೆ ಹಲವು ಆ್ಯಪ್ಗಳನ್ನು ಅಭಿವೃದ್ಧಿ ಪಡಿಸುವವರಿಗೆ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಒದಗಿಸುವುದು ಈ ವೇದಿಕೆಯ ಉದ್ದೇಶವಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಮಾರ್ಚ್ನಲ್ಲಿ 'ಜಿಡಿಎಸ್ಎ'ಗೆ ಚಾಲನೆ ನೀಡುವ ಯೋಜನೆ ಹೊಂದಿದೆ. ಆದರೆ, ಕೊರೊನಾ ವೈರಸ್ ಹರಡುವಿಕೆಯ ಪರಿಣಾಮದಿಂದ ಆಗಬಹುದಾದ ಬದಲಾವಣೆಗಳ ಕುರಿತು ತಿಳಿದು ಬಂದಿಲ್ಲ. ಆರಂಭದಲ್ಲಿ ಜಿಡಿಎಸ್ಎ ಭಾರತ, ಇಂಡೊನೇಷ್ಯಾ ಹಾಗೂ ರಷ್ಯಾ ಸೇರಿದಂತೆ ಒಂಬತ್ತು ಭಾಗಗಳಲ್ಲಿ ಕಾರ್ಯಾರಂಭಿಸಲಿದೆ.

ಪ್ಲೇ ಸ್ಟೋರ್ ಆದಾಯ ₹ 62,707 ಕೋಟಿ

'ಪ್ಲೇ ಸ್ಟೋರ್' ಮೂಲಕ ಜಗತ್ತಿನಾದ್ಯಂತ ಕೋಟ್ಯಂತರ ಡಾಲರ್ ಆದಾಯ ಗಳಿಸುತ್ತಿರುವ ಗೂಗಲ್ಗೆ ಚೀನಾದಲ್ಲಿ ನಿರ್ಬಂಧವಿದೆ. 2019ರಲ್ಲಿ ಪ್ಲೇ ಸ್ಟೋರ್ನಿಂದ ಗೂಗಲ್ ಗಳಿಕೆ ಸುಮಾರು ₹ 62,707 ಕೋಟಿ (8.8 ಬಿಲಿಯನ್ ಡಾಲರ್) ಎಂದು ಸೆನ್ಸರ್ ಟವರ್ನ ಅನಲಿಸ್ಟ್ ಕೇಟ್ ವಿಲಿಯಮ್ಸ್ ಹೇಳಿದ್ದಾರೆ. ಪ್ಲೇ ಸ್ಟೋರ್ನಲ್ಲಿ ಆ್ಯಪ್ಗಳ ಜತೆಗೆ ಸಿನಿಮಾಗಳು, ಪುಸ್ತಕಗಳ ಮಾರಾಟ ಮಾಡುವ ಮೂಲಕ ಶೇ 30ರಷ್ಟು ಕಮಿಷನ್ ಸಂಗ್ರಹಿಸುತ್ತಿದೆ.

ಹುವೈಗಿಲ್ಲ ಗೂಗಲ್ ಸೇವೆ

ಐಡಿಸಿ ಕನ್ಸಲ್ಟೆನ್ಸಿ ಪ್ರಕಾರ, 2019ರ ನಾಲ್ಕನೇ ತ್ರೈಮಾಸಿಕದಲ್ಲಿ ಚೀನಾದ ನಾಲ್ಕು ಕಂಪನಿಗಳು ಜಾಗತಿಕವಾಗಿ ಶೇ 40.1ರಷ್ಟು ಮೊಬೈಲ್ ಫೋನ್ಗಳ ಪೂರೈಕೆ ಮಾಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಪ್ಪೊ, ವಿವೊ ಮತ್ತು ಶಿಯೋಮಿ ಸ್ಮಾರ್ಟ್ಫೋನ್ಗಳು ಗೂಗಲ್ ಸರ್ವಿಸ್ಗಳಿಗೆ ತೆರೆದುಕೊಂಡಿವೆ.

ರಾಷ್ಟ್ರೀಯ ಭದ್ರತೆ ಕಾರಣಗಳಿಂದಾಗಿ ಹುವೈ ಕಂಪನಿಗೆ ಅಮೆರಿಕದಿಂದ ಸರಕು ಮತ್ತು ಸೇವೆಗಳ ಪೂರೈಕೆ ಸ್ಥಗಿತಗೊಳಿಸಿ ಅಮೆರಿಕ ಸರ್ಕಾರ ಆದೇಶಿಸಿದೆ. ಅದರ ಪರಿಣಾಮ, ಹುವೈಗೆ ಕಳೆದ ವರ್ಷದಿಂದ ಗೂಗಲ್ ಸೇವೆಗಳು ಲಭ್ಯವಾಗುತ್ತಿಲ್ಲ. ಗೂಗಲ್ ಅವಲಂಬನೆಯಿಂದ ಹೊರ ಬಂದಿರುವ ಹುವೈ ತನ್ನದೇ 'ಹಾರ್ಮೊನಿ ಒಎಸ್' ಅಭಿವೃದ್ಧಿ ಪಡಿಸಿದೆ.

ಸಾಫ್ಟ್ವೇರ್–ಸೇವೆಗಳತ್ತ ಚಿತ್ತ

ಭಾರತದಲ್ಲಿ ಶಿಯೋಮಿ ಗಟ್ಟಿಯಾಗಿ ಬೇರೂರಿದ್ದರೆ, ವಿವೊ ಮತ್ತು ಒಪ್ಪೊ ದಕ್ಷಿಣ ಏಷ್ಯಾ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿವೆ ಹಾಗೂ ಹುವೈ ಯುರೋಪ್ನಲ್ಲಿ ನೆಲೆ ಕಂಡುಕೊಂಡಿದೆ. ಹೊಸ ವೇದಿಕೆ ರೂಪಿಸಿಕೊಂಡಿರುವುದರಿಂದ ಈ ಎಲ್ಲ ಕಂಪನಿಗಳು ಇತರೆ ವಲಯಗಳಲ್ಲಿ ವಿಸ್ತರಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ಕೆನಲಿಸ್ ಮೊಬಿಲಿಟಿ ಉಪಾಧ್ಯಕ್ಷ ನಿಕೋಲ್ ಪೆಂಗ್ ಅಭಿಪ್ರಾಯ ಪಟ್ಟಿದ್ದಾರೆ.

ಹಾರ್ಡ್ವೇರ್ ಮಾರಾಟ ನಿಧಾನ ಗತಿಯಲ್ಲಿರುವುದರಿಂದ ಚೀನಾ ಕಂಪನಿಗಳು ಸಾಫ್ಟ್ವೇರ್ ಮತ್ತು ಸೇವೆಗಳ ಕಡೆಗೆ ಮುಖಮಾಡಿವೆ ಎಂದು ಐಡಿಸಿ ಸ್ಮಾರ್ಟ್ಫೋನ್ ಅನಲಿಸ್ಟ್ ವಿಲ್ ವಾಂಗ್ ತಿಳಿಸಿದ್ದಾರೆ.

ಆ್ಯಪ್ ಸ್ಟೋರ್, ಜಾಹೀರಾತು ಮತ್ತು ಗೇಮಿಂಗ್ ಹಾಗೂ ಪ್ರೀ–ಲೋಡಿಂಗ್ ಆ್ಯಪ್ಗಳು ಆದಾಯ ಗಳಿಕೆಯ ಹೊಸ ಮಾರ್ಗಗಳಾಗಿವೆ ಎಂದಿದ್ದಾರೆ.

ಗಿಜಿಬಿಜಿ ಗೂಡು ಪ್ಲೇ ಸ್ಟೋರ್

ಪ್ಲೇ ಸ್ಟೋರ್ನಲ್ಲಿ ಈಗಾಗಲೇ ಆ್ಯಪ್ಗಳ ಸಂಗ್ರಹದಿಂದ ದಟ್ಟಣೆ ಉಂಟಾಗಿದ್ದು, ಇದರ ಲಾಭವನ್ನು ಜಿಡಿಎಸ್ಎ ಪಡೆದುಕೊಳ್ಳಲು ಮುಂದಾಗಿದೆ. ಪ್ಲೇ ಸ್ಟೋರ್ಗಿಂತಲೂ ಹೆಚ್ಚು ಪ್ರಾಮುಖ್ಯತೆ ನೀಡುವ ಮೂಲಕ ಡೆವಲಪರ್ಗಳನ್ನು ಸೆಳೆದುಕೊಳ್ಳುವ ಪ್ರಯತ್ನ ನಡೆಯಲಿದೆ. ಆ್ಯಪ್ ಅಭಿವೃದ್ಧಿ ಪಡಿಸಿದವರು ಹೆಚ್ಚು ಆದಾಯ ಗಳಿಕೆಗೂ ಒತ್ತು ನೀಡಲಾಗುತ್ತದೆ. ಇದರಿಂದ ಹೊಸ ಆ್ಯಪ್ಗಳು ಬಹುಬೇಗ ಜಿಡಿಎಸ್ಎ ಸಂಗ್ರಹ ಸೇರಲು ದಾರಿಯಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಬಿಬಿಕೆ ಎಲೆಕ್ಟ್ರಾನಿಕ್ಸ್ ಸ್ವಾಮ್ಯದ ಒಪ್ಪೊ ಮತ್ತು ವಿವೊ ಬ್ರ್ಯಾಂಡ್ ಹಾಗೂ ಭಾರತದಲ್ಲಿ ಅತಿ ದೊಡ್ಡ ಮಾರುಕಟ್ಟೆ ಹೊಂದಿರುವ ಶಿಯೋಮಿ ಜತೆಗೂಡಿ ಜಿಡಿಎಸ್ಎ ರೂಪಿಸುತ್ತಿರುವುದನ್ನು ಖಚಿತ ಪಡಿಸಿವೆ.

'ಗೂಗಲ್ಗೆ ಸವಾಲೊಡ್ಡಲೆಂದೇ ಈ ಮೈತ್ರಿ ನಡೆಸುತ್ತಿಲ್ಲ, ಹಾಗೇ ಹುವೈ ಇದರಲ್ಲಿ ಸೇರಿಲ್ಲ' ಎಂದು ಶಿಯೋಮಿ ವಕ್ತಾರ ತಿಳಿಸಿದ್ದಾರೆ. ಆದರೆ, ಒಪ್ಪೊ ಮತ್ತು ವಿವೊ ತಮ್ಮ ಪ್ರಕಟಣೆಗಳಲ್ಲಿ ಹುವೈ ಕುರಿತು ಪ್ರಸ್ತಾಪಿಸಿಲ್ಲ. ಹುವೈ ಈ ಸಂಬಂಧ ಪ್ರತಿಕ್ರಿಯಿಸಲು ನಿರಾಕರಿಸಿದೆ.

ಚೀನಾ ಕಂಪನಿಗಳ ಹೊಸ ವೇದಿಕೆಗೆ ಸಂಬಂಧಿಸಿದಂತೆ ಗೂಗಲ್ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.