ಕೋಲ್ಕತ್ತ: ಐಐಟಿ– ಖರಗ್ಪುರ ಸಂಶೋಧಕರು ವೀಳ್ಯದ ಎಲೆಯಿಂದ ತೈಲ ತೆಗೆಯುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರೆ.

‘ಈ ತಂತ್ರಜ್ಞಾನವು ತೈಲ ತೆಗೆಯುವ ಪ್ರಕ್ರಿಯೆಯ ಕ್ಷಮತೆಯನ್ನು ಹೆಚ್ಚಿಸುತ್ತದೆ ಮತ್ತು ಪೋಲು ಪ್ರಮಾಣವನ್ನು ಕಡಿಮೆ ಮಾಡುತ್ತದೆ’ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.

ತೈಲ ತೆಗೆಯಲು ಈಗ ಲಭ್ಯವಿರುವ ಉಪಕರಣಗಳಿಗೆ ಹೋಲಿಸಿದರೆ ಈ ತಂತ್ರಜ್ಞಾನವು ಶೇಕಡ 30ರಷ್ಟು ವಿದ್ಯುತ್ಅನ್ನು ಉಳಿತಾಯ ಮಾಡುತ್ತದೆ. ಶೇ 16ರಷ್ಟು ಹೆಚ್ಚು ತೈಲ ತೆಗೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.

ಈ ಉಪಕರಣವು ವೀಳ್ಯದೆಲೆ ಬೆಳೆಗಾರರಿಗೆ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುವುದು. 10 ಲೀ.ನಷ್ಟು ವೀಳ್ಯದೆಲೆ ಸಾರ ತೆಗೆಯುವ ಯಂತ್ರ ಸಿದ್ಧವಾಗಲು ₹ 10,000, 20 ಲೀ. ಸಾಮರ್ಥ್ಯದ ಯಂತ್ರಕ್ಕೆ ₹ 20,000 ವೆಚ್ಚವಾಗಬಹುದು ಎಂದು ಅವರು ಹೇಳಿದರು. ವೀಳ್ಯದೆಲೆಯ ತೈಲವನ್ನು ಔಷಧಿ ಮತ್ತು ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.