ಬೆಂಗಳೂರು: ಮೈಕ್ರೋಸಾಫ್ಟ್ ಕಂಪ್ಯೂಟರ್ ಕಾರ್ಯಾಚರಣ ವ್ಯವಸ್ಥೆ ವಿಂಡೋಸ್ ಸರಣಿಯಲ್ಲಿ ಇತ್ತೀಚೆಗೆ ಪರಿಚಯಿಸಿದ ವಿಂಡೋಸ್ 11 ಓಎಸ್ ಅಕ್ಟೋಬರ್‌ನಲ್ಲಿ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆಯಿದೆ.

ಹೊಸ ಓಎಸ್ ವಿಂಡೋಸ್ 11 ಹತ್ತು ಹಲವು ಆಕರ್ಷಕ ಆಯ್ಕೆಗಳನ್ನು ಬಳಕೆದಾರರಿಗೆ ಒದಗಿಸುತ್ತಿದೆ.

ವಿಂಡೋಸ್ 11 ಪ್ರಸ್ತುತ ಇನ್‌ಸೈಡರ್ ಡೆವಲಪರ್ ಆವೃತ್ತಿ ಬೀಟಾ ಬಳಕೆದಾರರಿಗೆ ಲಭ್ಯವಾಗುತ್ತಿದೆ. ಆದರೆ ಜನಸಾಮಾನ್ಯರಿಗೆ ಪೂರ್ಣ ಪ್ರಮಾಣದ ಬಳಕೆಗೆ ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಮೈಕ್ರೋಸಾಫ್ಟ್ ಹೇಳಿತ್ತು.

ಪ್ರಸ್ತುತ ಮೈಕ್ರೋಸಾಫ್ಟ್ ಬಿಡುಗಡೆ ಮಾಡಿರುವ ಎರಡು ಪೋಸ್ಟರ್‌ಗಳ ಪ್ರಕಾರ, ಹೊಸ ಓಎಸ್ ವಿಂಡೋಸ್ 11, ಅಕ್ಟೋಬರ್ 20ರಂದು ಬಳಕೆಗೆ ದೊರೆಯುವ ನಿರೀಕ್ಷೆಯಿದೆ.

ಮೈಕ್ರೋಸಾಫ್ಟ್ ವಿಂಡೋಸ್ 11 ಬಿಡುಗಡೆ: 6 ವರ್ಷಗಳ ಬಳಿಕ ಉನ್ನತೀಕರಣಗೊಂಡ ಓಎಸ್

ಮೈಕ್ರೋಸಾಫ್ಟ್ ಟೀಮ್ಸ್ ಕುರಿತಾದ ಪೋಸ್ಟರ್ ಒಂದರಲ್ಲಿ, ಅಕ್ಟೋಬರ್ ಕುರಿತು ಪ್ರಸ್ತಾಪಿಸಲಾಗಿದೆ. ಅಲ್ಲದೆ, ಮೈಕ್ರೋಸಾಫ್ಟ್ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದ ವಿವರಗಳ ಪ್ರಕಾರ ಅಕ್ಟೋಬರ್‌ನಲ್ಲಿ ಹೊಸ ಓಎಸ್ ಅಪ್‌ಡೇಟ್ ದೊರೆಯುವ ಸುಳಿವು ಲಭಿಸಿದೆ.

ಮೈಕ್ರೋಸಾಫ್ಟ್ನಲ್ಲಿ ಬಗ್ ಹುಡುಕಿ ₹22 ಲಕ್ಷ ಬಹುಮಾನ ಪಡೆದ ಯುವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.