ಮನೆಯಲ್ಲಿ ಆರಾಮಾಗಿ ಒಬ್ಬರೇಕುಳಿತು ನಮ್ಮ ಇಷ್ಟದ ಕಾರ್ಯಕ್ರಮವೊಂದನ್ನು ಟಿವಿಯಲ್ಲಿನೋಡುತ್ತಿರುತ್ತೇವೆ. ಆ ಇಷ್ಟದ ಕಾರ್ಯಕ್ರಮ ಏನೆಂದು ಅದಾಗಲೇ ಮೂರನೇ ವ್ಯಕ್ತಿಗೆ ತಿಳಿದುಹೋಗಿರುತ್ತದೆ. ಅರೆ, ಇದು ಹೇಗಪ್ಪಾ ಎಂದು ಆಶ್ಚರ್ಯವೇ. ಅದೇ ಸ್ಮಾರ್ಟ್ ಟಿವಿ ಕರಾಮತ್ತು.

ಮನೆಗಳಲ್ಲಿರುವ ಸ್ಮಾರ್ಟ್ ಟಿವಿ ನಮ್ಮ ಇಷ್ಟ, ಆಸಕ್ತಿಯ ಕಾರ್ಯಕ್ರಮಗಳು ಏನೆಂದು ಸದ್ದಿಲ್ಲದೆಮಾಹಿತಿ ಸಂಗ್ರಹಮಾಡುತ್ತಿರುತ್ತವೆ.ಸ್ಮಾರ್ಟ್ ಟಿವಿ ಪರದೆಯಲ್ಲಿ ಮೂಡುವಎಲ್ಲಾ ಕಾರ್ಯಕ್ರಮಗಳ ಮೇಲೂ ಬಹುತೇಕ, ಬಿಲ್ಟ್ ಇನ್ ಆ್ಯಪ್ ಕಣ್ಣಿಟ್ಟೇ ಇರುತ್ತದೆ. ನಾವು ವೀಕ್ಷಿಸುವ ಕಾರ್ಯಕ್ರಮಗಳ ಮೇಲೆ ಈಆ್ಯಪ್‌ಗಳಮೂಲಕ ಮಾತ್ರ ಕಣ್ಣಿಡುವುದಲ್ಲದೆ, ಸ್ಮಾರ್ಟ್ ಟಿವಿಗಳಿಗೆ ಸಂಪರ್ಕ ಕಲ್ಪಿಸಿದ ಯಾವುದೇ ಸ್ಮಾರ್ಟ್ ಗ್ಯಾಜೆಟ್‌ಗಳ ಮೂಲಕವೂ ನಾವು ನೋಡುತ್ತಿರುವ ಕಾರ್ಯಕ್ರಮಗಳು, ಜಾಹೀರಾತುಗಳು ಅಥವಾ ಆಡುತ್ತಿರುವ ಆಟಗಳ ಮಾಹಿತಿ ಸಂಗ್ರಹವಾಗಬಹುದು.

ಇದೇ ಆಟೊಮೆಟಿಕ್ ಕಂಟೆಂಟ್ ರೆಕಗ್ನಿಷನ್ ತಂತ್ರಜ್ಞಾನ. ಸಾಮಾನ್ಯವಾಗಿ ‘ಸಾಂಬಾ ಟಿವಿ’ ಕಂಪನಿ, ಸ್ಮಾರ್ಟ್ ಟಿವಿಗಳಲ್ಲಿ ಈ ತಂತ್ರಜ್ಞಾನ ಒದಗಿಸುತ್ತದೆ. ದಿನನಿತ್ಯ ಸಾವಿರಾರು ಕಾರ್ಯಕ್ರಮಗಳು ಪ್ರಸಾರವಾಗುವಾಗ ಯಾವುದನ್ನು ನೋಡಬೇಕು ಎಂದು ಆಯ್ಕೆ ಮಾಡಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗುತ್ತದೆ. ನಮ್ಮ ಆಯ್ಕೆಗಳನ್ನು ಸುಲಭಗೊಳಿಸಲು ಸಲಹೆ ನೀಡುವಂತೆ ಹಾಗೂ ವೀಕ್ಷಕರು ಯಾವೆಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದಾರೆ ಎಂದು ಕಣ್ಣಿಡಲು ಕಂಪೆನಿ ಈ ‘ಸಾಂಬಾ ಟಿವಿ’ ಆ್ಯಪ್ ವಿನ್ಯಾಸಗೊಳಿಸಿದೆ.

ಟಿವಿ, ಸೆಟ್ ಟಾಪ್ ಬಾಕ್ಸ್, ಸ್ಮಾರ್ಟ್ ಫೋನ್ ಹಾಗೂ ಟ್ಯಾಬ್‌ಗಳಿಗೆಬಳಕೆ ಆಗುವಂತೆ ಸಾಂಬಾ ಟಿವಿ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ವೀಕ್ಷಕರ ಆಸಕ್ತಿ ಗಮನಿಸಿ ಅದಕ್ಕೆ ಅನುಗುಣವಾದ ಜಾಹೀರಾತು, ಕಾರ್ಯಕ್ರಮಗಳನ್ನು ಇದು ಶಿಫಾರಸು ಮಾಡುತ್ತದೆ. ತಮ್ಮ ಆಸಕ್ತಿ ಬಹಿರಂಗವಾಗುವುದುಎಲ್ಲರಿಗೂ ಇಷ್ಟವಾಗದೆ ಇರಬಹುದು. ಹಾಗಿದ್ದಲ್ಲಿ, ನಾವು ಏನೆಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದೇವೆ ಎಂದು ಟಿವಿ ತಯಾರಕರಿಗೆ ತಿಳಿಸದೆ ಇರಲು ಈ ಟ್ರ್ಯಾಕಿಂಗ್ ಆ್ಯಪ್ ಅನ್ನು ಬ್ಲಾಕ್ ಮಾಡಬಹುದು.

ಮೊದಲಿಗೆ ಟಿವಿ.ಯಲ್ಲಿ ಸ್ಮಾರ್ಟ್ ಟಿವಿ ಸೌಲಭ್ಯಗಳನ್ನು ಬಳಸದೆ ಇದ್ದಲ್ಲಿ, ಅಂತರ್ಜಾಲದಿಂದ ಟಿವಿ ಸಂಪರ್ಕ ಕಡಿತಗೊಳಿಸಲು ಎಥರ್ನೆಟ್ ಕೇಬಲ್ ಸಂಪರ್ಕ ತೆಗೆಯಬೇಕು ಅಥವಾ ಟಿವಿ ಸೆಟ್ಟಿಂಗ್ಸ್‌ನಲ್ಲಿನವೈ-ಫೈ ಸಂಪರ್ಕ ಆಫ್ ಮಾಡಿದರಾಯ್ತು. ಅಂತರ್ಜಾಲ ಸಂಪರ್ಕ ಇಲ್ಲದೆ ಟಿವಿ ಯಾವುದೇ ಮಾಹಿತಿಗಳನ್ನು ರವಾನೆ ಮಾಡಲು ಸಾಧ್ಯವಿಲ್ಲ. ಅಂದರೆ ನಮ್ಮ ಆಸಕ್ತಿಯ ಕಾರ್ಯಕ್ರಮಗಳು, ನೆಚ್ಚಿನ ಜಾಹೀರಾತುಗಳು ಯಾವುವು ಎನ್ನುವುದು ಇನ್ಯಾರೋ ಮೂರನೇ ವ್ಯಕ್ತಿಗೆ ತಿಳಿಯುವ ಸಂಭವ ಇಲ್ಲ. ಆದರೆ ಹಾಗೆ ಅಂತರ್ಜಾಲ ಸಂಪರ್ಕ ಇಲ್ಲದಿದ್ದಾಗ ಟಿವಿಗಳಲ್ಲಿನ ಬಿಲ್ಟ್ ಇನ್ ಆಪ್‌ಗಳು ಯಾವುದೇ ಚಲನಚಿತ್ರ ಅಥವಾ ಕಾರ್ಯಕ್ರಮಗಳನ್ನು ‘ಸ್ಟ್ರೀಮ್’ ಮಾಡಲು ಸಾಧ್ಯವಿಲ್ಲ. ಹಾಗಾಗಿ ಈ ಅಂತರ್ಜಾಲ ಸಂಪರ್ಕ ತಪ್ಪಿಸಿ ಟಿವಿ ವೀಕ್ಷಿಸುವ ಆಯ್ಕೆ, ಸೆಟ್ ಟಾಪ್ ಬಾಕ್ಸ್‌ಗಳಿಂದ ಮಾತ್ರ ವಿಡಿಯೊಗಳು ಸ್ಟ್ರೀಮ್ ಆಗುವಂತಿದ್ದರೆ ಮಾತ್ರ ಉಪಯುಕ್ತವಾಗುತ್ತದೆ.

ಸ್ಟ್ರೀಮಿಂಗ್ ಕಾರ್ಯಕ್ರಮಗಳು ಅಥವಾ ವಿಡಿಯೊ ಎಂದರೆ ಅಂತರ್ಜಾಲದ ಮೂಲಕ ರವಾನೆಯಾದ ವಿಡಿಯೊಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಕಾಯದೇ ರಿಯಲ್ ಟೈಮ್‌ನಲ್ಲಿ ವೀಕ್ಷಿಸುವ ಸೌಲಭ್ಯ.ಇನ್ನೂ ಒಂದು ಮಾರ್ಗವೂ ಇದೆ. ಆಟೊಮೆಟಿಕ್ ಕಂಟೆಂಟ್ ರೆಕಗ್ನಿಷನ್ ಆಯ್ಕೆ ಬಂದ್ ಮಾಡಿದರೆ, ಸ್ಟ್ರೀಮಿಂಗ್ ಲಭ್ಯವಿರುತ್ತದೆ. ಆದರೆ ನಮ್ಮ ಆಸಕ್ತಿಯ ಕಾರ್ಯಕ್ರಮಗಳ ಮಾಹಿತಿ ಸೋರಿಕೆಯಾಗುವುದಿಲ್ಲ. ಆಯಾ ಸ್ಮಾರ್ಟ್ಟಿವಿ ಮಾದರಿಗಳ ಅನುಸಾರವಾಗಿ ಈ ರೆಕಗ್ನಿಷನ್ ಆಯ್ಕೆ ಸೆಟ್ ಮಾಡುವಲ್ಲಿ ಕೆಲವು ವ್ಯತ್ಯಾಸಗಳಿರುತ್ತವೆ. ಕೆಲವು ಜನಪ್ರಿಯ ಮಾದರಿ ಟಿವಿಗಳ ಸೆಟ್ಟಿಂಗ್ ಸೂಚನೆ ಹೀಗಿವೆ:

ಸ್ಯಾಮ್ಸಂಗ್ ಟಿವಿ: Home menu > Settings > Support > Terms & Policies. ಇದರಲ್ಲಿViewing Information Services ಹಾಗೂInterest-Based Advertising ಆಯ್ಕೆ ಆಫ್ ಮಾಡಿ. (ಕೆಲವು ಹಳೆಯ ಮಾದರಿ ಸ್ಮಾರ್ಟ್ ಟಿವಿಗಳಲ್ಲಿ ಈ ಆಯ್ಕೆInterest-Based Advertising ಎಂದಿರುತ್ತದೆ).

ಎಲ್‌ಜಿ ಟಿವಿ:Settings>All Settings > General > LivePlus – ಇದನ್ನು ಆಫ್ ಮಾಡಿ.

ಸೋನಿ ಟಿವಿ: Initial Setup ಅನ್ನು Re-Run ಮಾಡಿ. ಆಧುನಿಕ ಸೋನಿ ಸ್ಮಾರ್ಟ್ ಟಿವಿಯಲ್ಲಿ ಗೂಗಲ್ ಆ್ಯಂಡ್ರಾಯ್ಡ್ ಸಿಸ್ಟಂ ಇರುತ್ತದೆ. ಈ ಸೆಟ್ಟಿಂಗ್ ಬಳಸುವುದು ಅಷ್ಟು ಸುಲಭವಲ್ಲ. ಅದಕ್ಕಾಗಿಯೇ ಟಿವಿಯ ಸೆಟ್ ಅಪ್Re-Run ಮಾಡಬೇಕಾಗುತ್ತದೆ. ಇದಕ್ಕಾಗಿSettings > Initial Setupಗೆ ಹೋಗಿSamba “Interactive TV” ಆಯ್ಕೆಯಲ್ಲಿUser agreements ಆಫ್ ಮಾಡಬೇಕು.

ಸ್ಮಾರ್ಟ್ ಟಿವಿಗಳಷ್ಟೆ ಅಲ್ಲಸೆಟ್ ಟಾಪ್ ಬಾಕ್ಸ್‌ಗಳು ಸಹ ಮಾಹಿತಿ ಸಂಗ್ರಹ ಮಾಡುತ್ತಿರುತ್ತವೆ. ಸೆಟ್ ಟಾಪ್ ಬಾಕ್ಸ್‌ಗಳ ಮೂಲಕ ಜಾಹೀರಾತುಗಳು ಟ್ರ್ಯಾಕ್ ಆಗುವುದನ್ನು ತಡೆಯಲು ಬೇರೆ ವಿಧಾನಗಳಿವೆ.

ರೋಕು ಹಾಗೂ ಆ್ಯಪಲ್ ಟಿವಿ ಸೆಟ್ ಟಾಪ್ ಬಾಕ್ಸ್‌ಗಳು ‘ಆಟೊಮೆಟಿಕ್ ಕಂಟೆಂಟ್ ರೆಕಗ್ನಿಷನ್’ ಬಳಕೆ ಮಾಡುತ್ತವೆ. ಇದರಿಂದಾಗಿ ಟಿವಿ ಪರದೆಯಲ್ಲಿನ ಪ್ರತಿ ಮಾಹಿತಿಯೂ ಟ್ರ್ಯಾಕ್ ಆಗುತ್ತದೆ. ಯಾವ ಆ್ಯಪ್ ಯಾವಾಗ ಬಳಕೆ ಮಾಡುತ್ತೇವೆ ಎನ್ನುವುದನ್ನು ಟ್ರ್ಯಾಕ್ ಮಾಡುತ್ತದೆ. ಅದನ್ನು ತಡೆಯಲು ಈ ವಿಧಾನ ಅನುಸರಿಸಬಹುದು.

ರೋಕು:Settings > Privacy > Advertising ಗೆ ಹೋಗಿLimit Ad Tracking ಆನ್ ಮಾಡಬೇಕು.

ಆ್ಯಪಲ್ ಟಿವಿ:Settings > Privacyಗೆ ಹೋಗಿ Limit Ad Tracking ಆನ್ ಮಾಡಬೇಕು. ಹಳೆಯ ಮಾದರಿಯ ಆ್ಯಪಲ್ ಟಿವಿ ಆಗಿದ್ದರೆ,Settings > General >Send Data to Appleಗೆ ಹೋಗಿ ಆಫ್ ಮಾಡಬೇಕು.

ಇಷ್ಟೆಲ್ಲಾ ಜಾಗರೂಕತೆ ವಹಿಸಿದರೂ ಸಹಸ್ಟ್ರೀಮಿಂಗ್ ಮೂಲಕ ವಿಡಿಯೊಗಳನ್ನು ವೀಕ್ಷಿಸುತ್ತಿದ್ದರೆ, ಎಲ್ಲಾ ರೀತಿಯ ಟ್ರ್ಯಾಕಿಂಗ್ ತಡೆಯಲು ಸಾಧ್ಯವಿಲ್ಲ. ಆದರೆ ಈ ರೀತಿಯ ಸೆಟ್ಟಿಂಗ್‌ಗಳಿಂದ ಮಾಹಿತಿ ಸಂಗ್ರಹವಾಗುವುದಕ್ಕೆ ಒಂದು ಮಟ್ಟಿಗೆ ಕಡಿವಾಣ ಹಾಕಬಹುದು. ಹಾಗಾಗಿ ಸ್ಮಾರ್ಟ್ ಟಿ.ವಿಗಳಬಿಲ್ಟ್ ಇನ್ ಆ್ಯಪ್‌ಗಳು ಮಾಹಿತಿ ಸಂಗ್ರಹಿಸುವುದನ್ನು ಸಂಪೂರ್ಣವಾಗಿ ತಡೆಯಬೇಕೆಂದರೆ ಸ್ಟ್ರೀಮಿಂಗ್ ಸೌಲಭ್ಯ ಬಳಸುವುದನ್ನು ಪೂರ್ತಿಯಾಗಿ ನಿಲ್ಲಿಸಬೇಕು. ಆಯ್ಕೆ ಅವರಿವರಿಗೇ ಬಿಟ್ಟಿದ್ದು.

ನ್ಯೂಯಾರ್ಕ್ ಟೈಮ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.