ಇನ್ನು ಮುಂದೆ ಶೀತ, ನೆಗಡಿ, ಜ್ವರ ಎಂದು ಸುಳ್ಳು ಹೇಳಿ ‘ಸಿಕ್ ಲೀವ್‘ ತೆಗೆದುಕೊಳ್ಳುವಂತಿಲ್ಲ. ಹೌದು. ಇದೀಗ ಹೊಸ ಎಐ ತಂತ್ರಜ್ಞಾನವೊಂದನ್ನು ಅಭಿವೃದ್ದಿ ಪಡಿಸುತ್ತಿದ್ದು, ಈ ತಂತ್ರಜ್ಞಾನ ನಮ್ಮ ಧ್ವನಿ ತರಂಗಗಳನ್ನು(ಸಿಗ್ನಲ್) ಬಳಸಿಕೊಂಡು ಶೀತ, ನೆಗಡಿ, ಜ್ವರದಂತಹ ಕಾಯಿಲೆಗಳನ್ನು ಸುಲಭವಾಗಿ ಪತ್ತೆ ಹಚ್ಚಲಿದೆ.

ಸೂರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ಸಂಶೋಧಕರು ಹಾಗೂ ಜರ್ಮನಿಯ ರೆನಿಶ್ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯದ ಸಂಶೋಧಕರು ಕೃತಕ ಬುದ್ಧಿಮತ್ತೆ(ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಬಳಸಿ ವ್ಯಕ್ತಿಗಳ ಧ್ವನಿ ಮೂಲಕ ಜ್ವರ, ಶೀತದಂತಹ ರೋಗಗಳನ್ನು ಪತ್ತೆಹಚ್ಚುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರೆ. ತಮ್ಮ ಹೊಸ ಸಂಶೋಧನೆಯ ಕುರಿತ ಮಾಹಿತಿಗಳನ್ನು ‘ಸೈನ್ಸ್ ಡೈರೆಕ್ಟ್‘ ಎಂಬ ವಿಜ್ಞಾನ ಮಾಸ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ.

635 ಜನರ ಧ್ವನಿ ಮಾದರಿಯನ್ನು ಸಂಶೋಧಕರು ವಿಶ್ಲೇಷಿಸಿದ್ದು, ಅವರಲ್ಲಿ 111 ಜನರು ಶೀತದಿಂದ ಬಳಲುತ್ತಿದ್ದರು. ಶೀತದಿಂದ ಕೂಡಿದ ಹಾಗೂ ಆರೋಗ್ಯ ಸರಿ ಇರುವ ಧ್ವನಿ ಮಾದರಿಗಳ ವ್ಯತ್ಯಾಸವನ್ನು ವಿಶ್ಲೇಷಣೆ ಮಾಡಲಾಗಿತ್ತು. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಲ್ಲಿ ಇದನ್ನು ಸಾಧ್ಯವಾಗಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ.

‘ಪರೀಕ್ಷೆ ವೇಳೆ ಸಂಶೋಧನೆಯಲ್ಲಿ ಪಾಲ್ಗೊಂಡವರಿಗೆ ಕೆಲವೊಂದು ಸೂಚನೆಗಳನ್ನು ಅನುಸರಿಸಲು ಹೇಳಲಾಯಿತು. ಮೊದಲಿಗೆ 1ರಿಂದ 40ರವರೆಗೆ ಎಣಿಸಲು ಹೇಳಲಾಯಿತು, ಅದಾದ ಬಳಿಕ ಒಂದು ವಾರದಲ್ಲಿ ಅವರು ಮಾಡಿದ ಕೆಲಸದ ಬಗ್ಗೆ ವಿವರಿಸಲು ಸೂಚಿಸಲಾಯಿತು. ನಂತರ ಈಸೋಪನ ‘ದಿ ನಾರ್ಥ್ ವಿಂಡ್ ಆಂಡ್ ಸನ್‘ ಎಂಬ ನೀತಿ ಕಥೆಯನ್ನು ಓದಲು ಹೇಳಲಾಯಿತು’ ಎಂದು ಸಂಶೋಧಕರು ವಿವರಿಸಿದ್ದಾರೆ.

‘ಹೊಸ ಎಐ ತಂತ್ರಜ್ಞಾನವು ಶೀತವಿರುವ ಮತ್ತು ಶೀತವಿಲ್ಲದ ಮಾತಿನ ನಡುವಿನ ತರಂಗದ ವ್ಯತ್ಯಾಸವನ್ನು ಪರಿಣಾಮಕಾರಿಯಾಗಿ ಗುರುತಿಸಿದೆ.ಹೊಸ ತಂತ್ರಜ್ಞಾನ ಶೇಕಡ 70ರಷ್ಟು ನಿಖರವಾಗಿ ರೋಗ ಲಕ್ಷಣವನ್ನು ಗುರುತಿಸಿರುವುದು ಪರೀಕ್ಷೆ ವೇಳೆ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನವನ್ನು ಇನ್ನಷ್ಟು ಅಭಿವೃದ್ದಿ ಪಡಿಸಲಾಗುವುದು‘ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.