ಬೆಂಗಳೂರು: ಜನಪ್ರಿಯ ಮೆಸೆಂಜರ್ ಆ್ಯಪ್ ‘ವಾಟ್ಸ್ಆ್ಯಪ್‘ ಕೆಲವು ಸಂದರ್ಭಗಳಲ್ಲಿ ಕಠಿಣ ನಿಯಮಗಳನ್ನು ತನ್ನ ಬಳಕೆದಾರರ ಮೇಲೆ ತೆಗೆದುಕೊಳ್ಳುವುದುಂಟು.

ಅದರ ಷರತ್ತು ಮತ್ತು ಕಾನೂನುಗಳನ್ನು ಉಲ್ಲಂಘಿಸುವವರ ಅಕೌಂಟ್ಗಳನ್ನು ನಿಷೇಧಿಸುವ ಮಟ್ಟಿಗೆ ಕ್ರಮವನ್ನು ವಾಟ್ಸ್ಆ್ಯಪ್ ತೆಗೆದುಕೊಳ್ಳುತ್ತದೆ. ಇದರಿಂದ ಅನಿವಾರ್ಯವಾಗಿ ಬಳಕೆದಾರರು ಆ ಅಕೌಂಟ್ ಬಳಕೆ ಕೈಬಿಟ್ಟು ಹೊಸ ನಂಬರ್ ಮೂಲಕ ವಾಟ್ಸಆ್ಯಪ್ ಪ್ರವೇಶಿಸಬೇಕಾಗಿತ್ತು.

ಇದೀಗ ವಾಟ್ಸ್ಆ್ಯಪ್ ಹೊಸ ಫೀಚರ್ ಪರಿಚಯಿಸುತ್ತಿದ್ದು, ಅದಕ್ಕೆWhatsApp Ban Review ಎನ್ನಲಾಗಿದೆ. ಅಂದರೆ ನಿಷೇಧಕ್ಕೊಳಗಾದ ಅಕೌಂಟ್ ಬಳಕೆದಾರರು ಈ ಫೀಚರ್ ಮೂಲಕ ತಮ್ಮ ಖಾತೆಯನ್ನು ಪುನಃ ಸ್ಥಾಪಿಸಿಕೊಳ್ಳಬಹುದಾಗಿದೆ.

ಸದ್ಯ ಇದು ಐಓಎಸ್ ಆವೃತ್ತಿಯಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಮುಂದೆ ಆಂಡ್ರಾಯ್ಡ್ಗೂ ಬಿಡುಗಡೆಯಾಗಲಿದೆ ಎಂದು ವಾಟ್ಸ್ಆ್ಯಪ್ ಒಡೆತನದ ಫೇಸ್ಬುಕ್ ಕಂಪನಿ ಹೇಳಿದೆ. ಇದುವಾಟ್ಸ್ಆ್ಯಪ್ನ2.21.18.5 ವರ್ಸನ್ನಲ್ಲಿ ಇರಲಿದೆ.

ಒಂದು ವೇಳೆ ಅಕೌಂಟ್ ನಿಷೇಧಕ್ಕೆ ಒಳಗಾಗಿದ್ದರೆ ‘This account is not allowed to use WhatsApp due to spam, chats are still on this device‘ ಎಂಬ ಸಂದೇಶ ಬರುತಿತ್ತು. ಇದೀಗ ಬ್ಯಾನ್ ರಿವ್ಯೂವ್ ಫಿಚರ್ ಪರಿಚಯಿಸುತ್ತಿರುವುದರಿಂದ ಬಳಕೆದಾರರು ಈ ಅವಕಾಶವನ್ನು ಬಳಸಿಕೊಂಡು ಅಕೌಂಟ್ ಪುನರ್ ಸ್ಥಾಪಿಸುವಂತೆ ಕೇಳಿಕೊಳ್ಳಬಹುದು.

24 ಗಂಟೆಯಲ್ಲಿ ವಾಟ್ಸ್ಆ್ಯಪ್ ಕಡೆಯಿಂದ ನಿಮಗೆ ಪ್ರತಿಕ್ರಿಯೆ ಬಂದು ನಿಷೇಧ ಕ್ರಮದಲ್ಲಿ ಏನಾದರೂ ದೋಷವಿದ್ದರೆ ನಿಮ್ಮ ಮನವಿಯನ್ನು ಪರಿಗಣಿಸಿ ಅಕೌಂಟ್ನ್ನು ಪುನರ್ ಸ್ಥಾಪಿಸಲಾಗುತ್ತದೆ. ಒಂದು ವೇಳೆ ನಿಷೇಧ ಕ್ರಮ ಈ ಮುಂಚೆಯೇ ಸರಿಯಾಗಿದ್ದರೆ ಅಕೌಂಟ್ ಖಾಯಂ ಆಗಿ ನಿಷೇಧಕ್ಕೆ ಒಳಗಾಗುತ್ತದೆ.

ಈ ಫೀಚರ್ ಯಾವಾಗ ಬಿಡುಗಡೆಯಾಗುತ್ತದೆ ಎಂಬುದರ ಬಗ್ಗೆ ವಾಟ್ಸ್ಆ್ಯಪ್ ತಿಳಿಸಿಲ್ಲ.

ಇದನ್ನೂ ಓದಿ:ಇನ್ನೆರಡು ವಾರದಲ್ಲಿ ಮಂಗಳನ ಅಂಗಳದಿಂದ ಭೂಮಿಗೆ ಬರಲಿದೆ ಮಣ್ಣು, ಕಲ್ಲು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.