ಬೆಂಗಳೂರು: ಆ್ಯಪಲ್ ‘ಆ್ಯಪ್ ಸ್ಟೋರ್ ಪಾಲಿಸಿ‘ಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದರಿಂದ ಕಳೆದ ವರ್ಷ ಒಟ್ಟಾರೆ 1.5 ಬಿಲಿಯನ್ ಡಾಲರ್ (ಅಂದಾಜು ₹11,642 ಕೋಟಿ) ಅಕ್ರಮ ವಹಿವಾಟನ್ನು ತಡೆದಿದೆ.

ಆ್ಯಪಲ್ ಐಫೋನ್, ಐಮ್ಯಾಕ್ ಮತ್ತು ಐಪ್ಯಾಡ್ಗಳಿಗೆ ಅಪ್ಲಿಕೇಶನ್ಗಳನ್ನು ಒದಗಿಸುವ ಆ್ಯಪ್ ಸ್ಟೋರ್, ಗ್ರಾಹಕರ ಮಾಹಿತಿಗೆ ಕನ್ನ ಹಾಕುತ್ತಿದ್ದ ಕಳೆದ ವರ್ಷ 34,500ಕ್ಕೂ ಅಧಿಕ ಅಪ್ಲಿಕೇಶನ್ಗಳನ್ನು ತಿರಸ್ಕರಿಸಿದೆ.

ಜತೆಗೆ, ಗ್ರಾಹಕರನ್ನು ಹಾದಿ ತಪ್ಪಿಸುವ ಮಾಹಿತಿ ಇರುವ, ನಕಲು ಮಾಡಲಾದ ಮತ್ತು ಸ್ಪಾಮ್ ಹರಡಬಲ್ಲ 1,57,000 ಅಪ್ಲಿಕೇಶನ್ಗಳನ್ನು ತೆಗೆದುಹಾಕಿದೆ.

ಖಾಸಗಿತನ ಮತ್ತು ಭದ್ರತೆಯ ಮಾಹಿತಿ ಉಲ್ಲಂಘಿಸಿದ 3,43,000 ಅಪ್ಲಿಕೇಶನ್ಗಳನ್ನು ಆ್ಯಪಲ್, ಆ್ಯಪ್ ಸ್ಟೋರ್ನಿಂದ ತೆಗೆದುಹಾಕಿದೆ.

ಈ ಅಪ್ಲಿಕೇಶನ್ಗಳನ್ನು ತೆಗೆದುಹಾಕಿದ್ದರಿಂದ ಆ್ಯಪ್ ಸ್ಟೋರ್ ಮೂಲಕ ನಡೆಯಬಹುದಾಗಿದ್ದ 1.5 ಬಿಲಿಯನ್ ಡಾಲರ್ ಮೌಲ್ಯದ ವಹಿವಾಟನ್ನು ಆ್ಯಪಲ್ ತಡೆದಿದ್ದು, ಗ್ರಾಹಕರಿಗೆ ಅನುಕೂಲವಾಗಿದೆ.

33 ಲಕ್ಷಕ್ಕೂ ಅಧಿಕ ಕಳವು ಮಾಡಲಾದ ಕ್ರೆಡಿಟ್ ಕಾರ್ಡ್ಗಳ ಬಳಕೆಗೆ ಆ್ಯಪಲ್ ತಡೆ ಒಡ್ಡಿದ್ದು, ಗ್ರಾಹಕರ ಹಣ ದುರ್ಬಳಕೆಯಾಗುವುದಕ್ಕೆ ಕಡಿವಾಣ ಬಿದ್ದಿದೆ.

ಕಾಲ್ ರೆಕಾರ್ಡಿಂಗ್ಗೆ ಗೂಗಲ್ ನಿರ್ಬಂಧ

ಜತೆಗೆ ಅಕ್ರಮ ಎಸಗಿದ ಖಾತೆಗಳನ್ನು ಆ್ಯಪಲ್ ರದ್ದುಪಡಿಸಿ, ವಹಿವಾಟುಗಳನ್ನು ಶಾಶ್ವತವಾಗಿ ನಿರ್ಬಂಧಿಸಿರುವುದರಿಂದ ಗ್ರಾಹಕರ ಹಣ ದುರುಪಯೋಗವಾಗುವುದು ತಪ್ಪಿದೆ ಎಂದು ಆ್ಯಪಲ್ ಹೇಳಿದೆ.

9 ಲಕ್ಷ ಆ್ಯಪ್ಗಳನ್ನು ಪ್ಲೇಸ್ಟೋರ್ನಿಂದ ತೆಗೆದುಹಾಕಲಿದೆ ಗೂಗಲ್: ಕಾರಣ ಇಲ್ಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.