ಬೆಂಗಳೂರು: ಮೈಕ್ರೋಸಾಫ್ಟ್‌ನ ಅಝ್ಯುರ್ ಬಗ್ ಬೌಂಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ದೆಹಲಿ ಮೂಲದ ಯುವತಿ ₹22 ಲಕ್ಷ ಬಹುಮಾನ ಪಡೆದಿದ್ದಾರೆ.

ಅದಿತಿ ಸಿಂಗ್ (20) ಸೈಬರ್ ಭದ್ರತೆ ಮತ್ತು ರಕ್ಷಣೆ ಕುರಿತು ಆಸಕ್ತಿ ಹೊಂದಿದ್ದು, ವಿವಿಧ ಟೆಕ್ ಕಂಪನಿಗಳ ಅಪ್ಲಿಕೇಶನ್‌ಗಳಲ್ಲಿ, ಸಾಫ್ಟ್‌ವೇರ್‌ಗಳಲ್ಲಿ ಇರುವ ತೊಂದರೆಯನ್ನು ಕಂಡುಹಿಡಿಯಲು ಯತ್ನಿಸುತ್ತಿರುತ್ತಾರೆ.

ಅದರಂತೆ, ಮೈಕ್ರೋಸಾಫ್ಟ್‌ನ ಅಝ್ಯುರ್ ಕ್ಲೌಡ್ ವ್ಯವಸ್ಥೆಯಲ್ಲಿ ‘ರಿಮೋಟ್ ಕೋಡ್ ಎಕ್ಸೆಕ್ಯುಶನ್’ ಎಂಬ ದೋಷವನ್ನು ಅದಿತಿ ಸಿಂಗ್ ಪತ್ತೆ ಮಾಡಿದ್ದಾರೆ. ನಂತರ ಅದನ್ನು ಮೈಕ್ರೋಸಾಫ್ಟ್ ಗಮನಕ್ಕೆ ತಂದಿದ್ದಾರೆ.

ಮೈಕ್ರೋಸಾಫ್ಟ್ ಆ ತೊಂದರೆಯನ್ನು ಪರಿಶೀಲಿಸಿ ಸರಿಪಡಿಸಿದೆ. ಅಲ್ಲದೆ, ಬಗ್ ಬೌಂಟಿ ಕಾರ್ಯಕ್ರಮದಡಿಯಲ್ಲಿ ಅದಿತಿಗೆ $30,000 (ಅಂದಾಜು ₹22 ಲಕ್ಷ) ಬಹುಮಾನ ನೀಡಿದೆ.

ಹಲವು ಮಂದಿ ಟೆಕ್ಕಿಗಳು ವಿವಿಧ ಬಗ್ ಬೌಂಟಿಯಲ್ಲಿ ಭಾಗವಹಿಸಿ, ಕಂಪನಿಗಳಿಂದ ದೊಡ್ಡ ಮೊತ್ತದ ಬಹುಮಾನ ಪಡೆಯುತ್ತಾರೆ.

ಮೈಕ್ರೋಸಾಫ್ಟ್ ವಿಂಡೋಸ್ 11 ಬಿಡುಗಡೆ: 6 ವರ್ಷಗಳ ಬಳಿಕ ಉನ್ನತೀಕರಣಗೊಂಡ ಓಎಸ್

ವಿವಿಧ ಸಾಫ್ಟ್‌ವೇರ್, ಆನ್‌ಲೈನ್ ಅಪ್ಲಿಕೇಶನ್‌ಗಳಲ್ಲಿ ಇರುವ ದೋಷವನ್ನು ಪತ್ತೆಹಚ್ಚಿ ಕಂಪನಿಗಳಿಗೆ ತಿಳಿಸುವ ಕೆಲಸವನ್ನು ಎಥಿಕಲ್ ಹ್ಯಾಕರ್ಸ್ ಮಾಡುತ್ತಾರೆ.

‘ಮೈಕ್ರೊಸಾಫ್ಟ್ ಟೀಮ್ಸ್’ ಈಗ ಕನ್ನಡದಲ್ಲಿಯೂ ಲಭ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.