ಬೆಂಗಳೂರು: ಬ್ಯಾಂಕಿಂಗ್, ಫೈನಾನ್ಸ್ ಮತ್ತು ವ್ಯಾಲೆಟ್ ಅಪ್ಲಿಕೇಶನ್‌ಗಳನ್ನು ಗುರಿಯಾಗಿಸಿಕೊಂಡು ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಗಾಡ್‌ಫಾದರ್ ಟ್ರೊಜನ್ ವೈರಸ್ ದಾಳಿ ಇಟ್ಟಿದೆ.

ಗ್ರೂಪ್–ಐಬಿಯ ಭದ್ರತಾ ವಿಶ್ಲೇಷಕರ ತಂಡ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಗಾಡ್‌ಫಾದರ್ ಟ್ರೊಜನ್ ವೈರಸ್ ಸೇರಿಕೊಂಡಿರುವುದನ್ನು ಪತ್ತೆ ಹಚ್ಚಿದೆ.

ಅಮೆರಿಕ, ಟರ್ಕಿ, ಸ್ಪೇನ್ ಮತ್ತು ಇತರ ಹಲವು ರಾಷ್ಟ್ರಗಳ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರ ಫೋನ್‌ನಲ್ಲಿ ಗಾಡ್‌ಫಾದರ್ ಟ್ರೊಜನ್ ವೈರಸ್ ಪತ್ತೆಯಾಗಿದೆ.

ಅಲ್ಲದೆ, ಅವು ಮುಖ್ಯವಾಗಿ ಬ್ಯಾಂಕಿಂಗ್ ಮತ್ತು ಕ್ರಿಪ್ಟೊ, ವ್ಯಾಲೆಟ್ ಅಪ್ಲಿಕೇಶನ್‌ಗಳನ್ನು ಗುರಿಯಾಗಿಸಿಕೊಂಡಿವೆ. ಜತೆಗೆ ಸ್ಮಾರ್ಟ್‌ಫೋನ್ ಒಳಗೆ ಸೇರಿಕೊಂಡಿರುವ ಅಪ್ಲಿಕೇಶನ್‌ಗಳು, ಬಳಕೆದಾರರ ವೈಯಕ್ತಿಕ ಮತ್ತು ಪ್ರಮುಖ ಮಾಹಿತಿ, ಖಾತೆ ವಹಿವಾಟು ವಿವರವನ್ನು ಕದಿಯುವ ಸಂಭವವಿದೆ.

ಏಮ್ಸ್ ಸರ್ವರ್ ಮೇಲೆ ಸೈಬರ್ ದಾಳಿ ಹಿಂದೆ ಚೀನಾ ಕೈವಾಡ: ಕೇಂದ್ರ ಸರ್ಕಾರ

ಫೋನ್‌ನಲ್ಲಿ ಇನ್‌ಸ್ಟಾಲ್ ಆದ ಬಳಿಕ ಅವು ಮರೆಯಲ್ಲಿಯೇ ಕಾರ್ಯನಿರ್ವಹಿಸುವುದರಿಂದ, ಬಳಕೆದಾರರಿಗೆ ಕಾಣಿಸುವುದಿಲ್ಲ. ಹೀಗಾಗಿ, ನಕಲಿ ಲಿಂಕ್, ಉಡುಗೊರೆಯ ಅಮಿಷ ಒಡ್ಡುವ ಆಫರ್, ಇತ್ಯಾದಿ ಉಚಿತದ ಆಸೆಗೆ ಒಳಗಾಗದೇ, ಅಧಿಕೃತ ಅಪ್ಲಿಕೇಶನ್‌ಗಳನ್ನು ಮಾತ್ರ ಬಳಸಬೇಕು, ಫೋನ್ ಸಾಫ್ಟ್‌ವೇರ್ ಅಪ್‌ಡೇಟ್, ಗೂಗಲ್ ಪ್ಲೇ ಸ್ಟೋರ್ ಅಪ್ಲಿಕೇಶನ್ ಅಪ್‌ಡೇಟ್ ಅನ್ನು ಕಾಲಕಾಲಕ್ಕೆ ಮಾಡುತ್ತಿರಬೇಕು ಎಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ.

ಸೈಬರ್ ದಾಳಿಗಾಗಿ ಪ್ರತಿನಿತ್ಯ 4 ಲಕ್ಷ ವಂಚಕ ಫೈಲ್ಗಳ ರವಾನೆ: ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.