ಬೆಂಗಳೂರು: ವೃತ್ತಿಪರ ಸಂವಹನ ನಡೆಸಲು ಹೆಚ್ಚು ಬಳಕೆಯಲ್ಲಿರುವ ಮೈಕ್ರೊಸಾಫ್ಟ್ ಟೀಮ್ಸ್ ಇದೀಗ ಕನ್ನಡ ಭಾಷೆಯನ್ನೂ ಬೆಂಬಲಿಸುತ್ತದೆ. ಈ ಕುರಿತು ಕಂಪನಿಯು ಅಧಿಕೃತ ಪ್ರಕಟಣೆ ಹೊರಡಿಸಿದೆ.

ಟೀಮ್ಸ್ನ ಎಲ್ಲಾ ವೈಶಿಷ್ಟ್ಯಗಳನ್ನೂ ಕನ್ನಡದಲ್ಲಿಯೇ ಪಡೆಯಬಹುದಾಗಿದೆ. ಯಾವುದೇ ಸಂದರ್ಭದಲ್ಲಿ ಬೇಕಿದ್ದರೂ ಭಾಷೆಯನ್ನು ಇಂಗ್ಲೀಷ್ಗೆ ಬದಲಿಸಬಹುದು. ಸ್ವೀಕರಿಸುವ ಸಂದೇಶಗಳನ್ನು ಕನ್ನಡದಲ್ಲಿಯೇ ಕೇಳಲು ಕಿರುತಂತ್ರಾಂಶ (ಆ್ಯಪ್) ಅವಕಾಶ ಕಲ್ಪಿಸುತ್ತದೆ ಎಂದು ಕಂಪನಿ ತಿಳಿಸಿದೆ.

ಓದಿ:ಕೋವಿಡ್-19 ಪರೀಕ್ಷೆಯ ಕಿಟ್ ಯಾರಿಗೆ? ಹೇಗೆ? ಏನು?

ಇದಲ್ಲದೆ ಇನ್ನೂ ಕೆಲವು ವೈಶಿಷ್ಟ್ಯಗಳನ್ನೂ ಕಂಪನಿ ಕಲ್ಪಿಸಿದೆ.

24 ಗಂಟೆ ಉಚಿತ ಕರೆ: ಟೀಮ್ಸ್ ಮೂಲಕ ಇನ್ನು ಮುಂದೆ 300 ಕ್ಕೂ ಹೆಚ್ಚು ಜನರೊಂದಿಗೆ ದಿನದ 24 ಗಂಟೆಯೂ ಮಾತನಾಡಬಹುದು. ಈ ಸಾಂಕ್ರಾಮಿಕದ ಅವಧಿಯಲ್ಲಿ ನೀವು ನಿರಂತರವಾಗಿ ದೀರ್ಘ ಕರೆಗಳನ್ನು ಮಾಡಬಹುದು.

ಟೀಮ್ಸ್ನಲ್ಲಿನ ವಿಡಿಯೊ ಕರೆ ಲಿಂಕ್ಗಳನ್ನು ಯಾರೊಂದಿಗೆ ಬೇಕಾದರೂ ಹಂಚಿಕೊಳ್ಳಬಹುದು. ನೀವು ಆ್ಯಪ್ ಅನ್ನು ಉಪಯೋಗಿಸದಿದ್ದರೂ ಇದು ಸಾಧ್ಯವಾಗುತ್ತದೆ. ನಿಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರು ಯಾವುದೇ ಸಾಧನಅಥವಾ ವೆಬ್ ಬ್ರೌಸರ್ ಬಳಸಿ ಮೀಟಿಂಗ್ಗೆ ಸೇರಿಕೊಳ್ಳಲು ಸಾಧ್ಯವಿದೆ.

ಓದಿ:ಮೈಕ್ರೊಸಾಫ್ಟ್ ಎಡ್ಜ್ ಬದಲಾವಣೆಗಳೊಂದಿಗೆ

ಅಪ್ಲಿಕೇಷನ್ ಆರಂಭಿಸುವಾಗ ನಿಮ್ಮ ಸಂಪರ್ಕಗಳೊಂದಿಗೆ ಸಂದೇಶ ವಿನಿಯಮ ಆರಂಭ ಮಾಡಬಹುದು. ನೀವು ನಿಮ್ಮ ಸಂಪರ್ಕಗಳಿಂದ ವೈಯಕ್ತಿಕ ಸಂದೇಶಗಳನ್ನು ಕಳುಹಿಸಬಹುದು ಅಥವಾ ಗ್ರೂಪ್ ಚಾಟ್ ಸಹ ಆರಂಭಿಸಬಹುದು. ನಿಮ್ಮ ಗ್ರೂಪ್ಗೊಂದು ಹೆಸರಿಡಿ ಮತ್ತು ಅದನ್ನು ಸಂಘಟಿತವಾಗಿಟ್ಟುಕೊಳ್ಳಬಹುದು. ಒಂದು ವೇಳೆ ಯಾರಾದರೂ ಟೀಮ್ಸ್ ಅನ್ನು ಹೊಂದಿರದೇ ಇದ್ದರೂ ಅವರು ಎಸ್ಎಂಎಸ್ ಸಂದೇಶಗಳ ಮೂಲಕ ಎಲ್ಲಾ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.