ನವದೆಹಲಿ: 'ನನ್ನ ಹಳೆಯ ಸಂಬಂಧದಲ್ಲಿ ಹಲವಾರು ಬಾರಿ ನಾನು ಥಳಿತ, ನಿಂದನೆಗೊಳಗಾಗಿದ್ದೇನೆ. ಬಾಲಿವುಡ್ನ ದೊಡ್ಡ ದಾನಶೀಲ ವ್ಯಕ್ತಿ.ಈತ ತನ್ನನ್ನು ಮನುಷ್ಯ ಎಂದು ಹೇಳಿಕೊಳ್ಳುತ್ತಿದ್ದರೂ ಆತ ಮನುಷ್ಯನೇ ಅಲ್ಲ' ಬಾಲಿವುಡ್ ನಟಿ ಐಶ್ವರ್ಯಾ ರೈ ಟ್ವೀಟ್ ಮಾಡಿದ್ದಾರೆ ಎನ್ನಲಾದ ಟ್ವೀಟ್ ಸ್ಕ್ರೀನ್ ಶಾಟ್ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಈ ಸ್ಕ್ರೀನ್ ಶಾಟ್ನ್ನು @TheGuruGhantal ಎಂಬ ಟ್ವಿಟರ್ಖಾತೆ ಟ್ವೀಟಿಸಿದ್ದು, ಹಲವಾರು ವರ್ಷಗಳ ನಂತರ ಈಕೆ ಕೊನೆಗೂ ಮೌನ ಮುರಿದಿದ್ದಾರೆ ಎಂದಿದ್ದರು.

ಈ ಟ್ವೀಟ್ ಐಶ್ವರ್ಯಾ ರೈ ಅವರ ಖಾತೆಯಿಂದ ಮಾಡಿದ ಟ್ವೀಟ್ ಹೌದೋ ಅಲ್ಲವೋ ಎಂದು ಬೂಮ್ ಲೈವ್ ಫ್ಯಾಕ್ಟ್ ಚೆಕ್ ಮಾಡಿದೆ,
ಐಶ್ವರ್ಯಾ ರೈ ಅವರ ಅಧಿಕೃತ ಟ್ವಿಟರ್ ಖಾತೆಗಾಗಿ ಗೂಗಲಿಸಿದರೂ ಯಾವುದೇ ಫಲ ಸಿಗಲಿಲ್ಲ.ಆಕೆಯ ಹೆಸರಿನಲ್ಲಿ ಹಲವಾರು ಟ್ವಿಟರ್ಖಾತೆಗಳಿದ್ದು, ಕೆಲವು ಅಭಿಮಾನಿಗಳ ಖಾತೆಗಳಾಗಿವೆ.ಇವು ಯಾವುದೂ ಐಶ್ವರ್ಯಾ ರೈ ಅವರ ಖಾತೆ ಅಲ್ಲ.
@AishwaryaRai ಎಂಬ ಟ್ವಿಟರ್ ಹ್ಯಾಂಡಲ್ ಪತ್ತೆಯಾದರೂ ಅದು ಸ್ಕ್ರೀನ್ ಶಾಟ್ನಲ್ಲಿ ತೋರಿಸಿದಂತೆ ವೆರಿಫೈಡ್ ಖಾತೆ ಅಲ್ಲ. ಖಾತೆಯಲ್ಲಿ ಬಳಸಿರುವ ಚಿತ್ರವೂ ಅದಲ್ಲ.ಆದರೆ ಈ ಟ್ವಿಟರ್ ಖಾತೆ ಐಶ್ವರ್ಯಾ ರೈ ಅವರ ಅಧಿಕೃತ ಇನ್ಸ್ಟಾಗ್ರಾಂ ಜತೆ ಲಿಂಕ್ ಹೊಂದಿತ್ತು.
ಐಶ್ವರ್ಯಾ ರೈ ಸಿನಿಮಾರಂಗದಿಂದ ಬಿಡುವು ತೆಗೆದುಕೊಂಡ ನಂತರ ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿಲ್ಲ.ಸದ್ಯ ಅವರು ಇನ್ಸ್ಟಾ ಗ್ರಾಂನಲ್ಲಿ ಮಾತ್ರ ಸಕ್ರಿಯರಾಗಿದ್ದು ಇನ್ಸ್ಟಾಗ್ರಾಂ ಖಾತೆ AishwaryaRaiBachchan ಎಂದಿದೆ.ಇನ್ಸ್ಟಾಗ್ರಾಂ ಖಾತೆಗೆ 5 ಮಿಲಿಯನ್ ಫಾಲೋಯರ್ಗಳಿದ್ದು, ಈಕೆ ಯಾರಲ್ಲೂ ಫಾಲೋ ಮಾಡುತ್ತಿಲ್ಲ.

ಇತ್ತೀಚೆಗೆ ಲೊರಿಯಾಲ್ ಬ್ರಾಂಡ್ನ ಕಾರ್ಯಕ್ರಮವೊಂದರಲ್ಲಿ ಐಶ್ವರ್ಯಾ ಮೀಟೂ ಬಗ್ಗೆ ಮಾತನಾಡಿದ್ದರು.ನಾನು ಈ ಬಗ್ಗೆ ಮಾತನಾಡಿದ್ದೇನೆ, ನಾನು ಈ ಹಿಂದೆಯೂ ಮಾತನಾಡಿದ್ದೆ, ಈಗಲೂ ಮಾತನಾಡುತ್ತೇನೆ.ಇನ್ನು ಮುಂದೆಯೂ ಮಾತನಾಡುತ್ತೇನೆ ಎಂದು ಐಶ್ವರ್ಯಾ ಹೇಳಿರುವುದನ್ನು ನ್ಯೂಸ್ 18 ವರದಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.