ಚೆನ್ನೈ: ಭಾರತದ ನಗರಗಳಲ್ಲಿ ಅತಿ ಹೆಚ್ಚು ಕಂಡು ಬರುವ ವಾಹನಗಳೆಂದರೆ ಅವು ಆಟೋ ರಿಕ್ಷಾಗಳು. ಕಡಿಮೆ ದೂರದ ಪ್ರಯಾಣಕ್ಕೆ ಹೇಳಿ ಮಾಡಿಸಿದ ವಾಹನ ಆಟೋಗಳು ಎನ್ನುವಂತಾಗಿದೆ.

ಸಾಮಾನ್ಯವಾಗಿ ಆಟೋ ಡ್ರೈವರ್‌ಗಳು ತಮ್ಮ ಆಟೋ ರಿಕ್ಷಾಗಳನ್ನು ಬಣ್ಣಗಳಿಂದ, ಆಕರ್ಷಕ ಬರಹಗಳಿಂದ, ಫೋಟೊಗಳಿಂದ ಅಲಂಕರಿಸುತ್ತಾರೆ. ಆದರೆ ಇಲ್ಲೊಬ್ಬ ಆಟೊ ಡ್ರೈವರ್ ತಮ್ಮ ಆಟೋ ರಿಕ್ಷಾದೊಳಗೇ ಗಿಡಗಳನ್ನು ಬೆಳೆಸಿ ಪುಟ್ಟ ಗಾರ್ಡನ್ ನಿರ್ಮಿಸಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ‘ಹಸಿರು ಆಟೋ’ದ ವಿಡಿಯೊ ಹರಿದಾಡುತ್ತಿದೆ. ಚೆನ್ನೈ ನಗರದಲ್ಲಿ ಕಂಡುಬಂದ ಈ ಆಟೋದ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ @depthoughtsz ಎನ್ನುವ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

ವಿಡಿಯೊ ಹಂಚಿಕೊಂಡ ಬಳಿಕ ಅದರಲ್ಲಿ ಆಟೋದ ಇನ್ನಷ್ಟು ವಿಶೇಷತೆಗಳ ಬಗ್ಗೆಯೂ ಹೇಳಿದ ಅವರು, ಆಟೋದ ಒಳಗೆ ಕುಳಿತರೆ ಗಿಡಗಳ ಕುಂಡಗಳು, ಒಳಭಾಗಕ್ಕೆ ಅಂಟಿಕೊಂಡು ಬೆಳೆದಿರುವ ಹಸಿರಾದ ಬಳ್ಳಿಗಳು ಒಂದೆಡೆಯಾದರೆ, ಪ್ರಯಾಣಿಕರಿಗೆಂದು ಪುಸ್ತಕಗಳನ್ನೂ ಇರಿಸಿದ್ದಾರೆ ಎಂದು ವಿವರಿಸಿದ್ದಾರೆ.

ವಿಡಿಯೊ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಟೋ ಚಾಲಕನ ವಿಭಿನ್ನ ಕಲ್ಪನೆಗೆ, ಪರಿಸರ ಪ್ರೀತಿಗೆ ತಲೆಬಾಗಿದ್ದಾರೆ.

ಬಳಕೆದಾರರೊಬ್ಬರು ವಿಡಿಯೊ ನೋಡಿ ‘ಇದು ಟ್ರಾವೆಲಿಂಗ್ ಪಾರ್ಕ್’ ಎಂದು ಕಾಮೆಂಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.