ನಾಗ್ಪುರ: ಭಾರತದ ಹಲವು ನಗರಗಳಲ್ಲಿ ಮೆಟ್ರೊ ರೈಲಿನ ಸೌಲಭ್ಯ ಆರಂಭವಾಗಿರುವುದು ಜನರಿಗೆ ಆರಾಮದ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಇತ್ತೀಚೆಗೆ ಮೆಟ್ರೊ ರೈಲಿನಲ್ಲಿ ನಡೆಯುವ ಪ್ರಯಾಣಿಕರ ಜಗಳ, ಸಾಮಾಜಿಕ ಜಾಲತಾಣಗಳಿಗಾಗಿ ವಿಡಿಯೊ ಮಾಡುವುದು ಸಾಮಾನ್ಯ ಎನ್ನುವಂತಾಗಿದೆ.

ಇದೀಗ ನಾಗ್ಪುರ ಮೆಟ್ರೊ ರೈಲಿನಲ್ಲಿ ಯುವಕ ಯುವತಿಯರು ಫ್ಯಾಷನ್ ಶೋ ನಡೆಸಿದ್ದಾರೆ. ತರಹೇವಾರಿ ಉಡುಗೆಗಳನ್ನು ತೊಟ್ಟು ರ್ಯಾಂಪ್ ಮಾಡುವ ಮೂಲಕ ಇತರ ಪ್ರಯಾಣಿಕರು ಕಣ್ಣರಳಿಸಿ ನೋಡುವಂತೆ ಮಾಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮೆಟ್ರೊ ರೈಲಿನಲ್ಲಿ ನಡೆದ ಫ್ಯಾಷನ್ ಶೋದ ವಿಡಿಯೊ ಹರಿದಾಡುತ್ತಿದೆ. ಇನ್ಸ್ಟಾಗ್ರಾಂನಲ್ಲಿ ಬಳಕೆದಾರರೊಬ್ಬರು ಈ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ.

ಪುಟ್ಟ ಮಕ್ಕಳು ಕೂಡ ಚೆಂದದ ಉಡುಗೆ ತೊಟ್ಟು ಫ್ಯಾಶನ್ ಶೋನಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡ ಬಳಿಕ 16 ಲಕ್ಷಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.

ವಿಡಿಯೊಕ್ಕೆ ನೆಟ್ಟಿಗರು ಮಿಶ್ರ ಕಾಮೆಂಟ್ಗಳನ್ನು ಮಾಡಿದ್ದಾರೆ. ಫ್ಯಾಶನ್ ಶೋವನ್ನು ಹಲವರು ಮೆಚ್ಚಿಕೊಂಡರೆ, ಇನ್ನು ಕೆಲವರು ಪ್ರಯಾಣಿಕರಿಗೆ ತೊಂದರೆ ಉಂಟುಮಾಡುವ ಈ ರೀತಿಯ ಕೆಲಸಕ್ಕೆ ಸರ್ಕಾರ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.