ನವದೆಹಲಿ: ಸಾಮಾನ್ಯವಾಗಿ ಮಾನವರ ಬಾಯಲ್ಲಿ 32 ಹಲ್ಲುಗಳಿರುತ್ತವೆ. ಆದರೆ ಇಲ್ಲೊಬ್ಬ ಮಹಿಳೆ ಬಾಯಲ್ಲಿ 38 ಹಲ್ಲುಗಳನ್ನು ಹೊಂದಿದ್ದು, ಅತಿ ಹೆಚ್ಚು ಹಲ್ಲುಗಳನ್ನು ಹೊಂದಿರುವ ಮಹಿಳೆ ಎನ್ನುವ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಭಾರತ ಮೂಲದ 26 ವರ್ಷದ ಕಲ್ಪನಾ ಬಾಲನ್ ಎನ್ನುವ ಮಹಿಳೆ ಈ ದಾಖಲೆ ನಿರ್ಮಿಸಿದ್ದಾರೆ.

ಕಲ್ಪನಾ ನಾಲ್ಕು ಹೆಚ್ಚುವರಿ ದವಡೆಯ (ಕೆಳ ದವಡೆ) ಹಲ್ಲುಗಳನ್ನು ಮತ್ತು ಎರಡು ಹೆಚ್ಚುವರಿ ಮ್ಯಾಕ್ಸಿಲ್ಲರಿ (ಮೇಲಿನ ದವಡೆ) ಹಲ್ಲುಗಳನ್ನು ಹೊಂದಿದ್ದಾರೆ. ಚಿಕ್ಕಂದಿನಲ್ಲಿ ಹೆಚ್ಚುವರಿ ಹಲ್ಲುಗಳು ಬೆಳೆಯುವುದನ್ನು ಗಮನಿಸಿದರೂ ಅದರಿಂದ ಯಾವುದೇ ರೀತಿಯ ನೋವಿರದ ಕಾರಣ ಅತ್ತ ಗಮನ ಹರಿಸಿರಲಿಲ್ಲ. ಕ್ರಮೇಣ ಹಲ್ಲುಗಳು ಬೆಳೆದಂತೆ ಅವುಗಳ ನಡುವೆ ಆಹಾರವು ಸಿಕ್ಕಿಬೀಳುವುದರಿಂದ ಸಮಸ್ಯೆ ಎದುರಿಸಿದ್ದರು. ಈ ಬಗ್ಗೆ ತಿಳಿದಾಗ ಕಲ್ಪನಾ ಪೋಷಕರು, ಹಲ್ಲುಗಳನ್ನು ತೆಗೆಸುವಂತೆ ಸೂಚಿಸಿದ್ದರು.

ಕಲ್ಪನಾ ಅವರಿಗೆ ಚಿಕಿತ್ಸೆ ನೀಡುವ ದಂತ ವೈದ್ಯರು, ಹೆಚ್ಚುವರಿಯಾಗಿರುವ ಹಲ್ಲುಗಳನ್ನು ಕೀಳುವುದು ಕಷ್ಟಕರವಾಗಿರುವುದರಿಂದ ಹಲ್ಲುಗಳು ಬೆಳೆಯುವವರೆಗೆ ತೆಗೆಯುವುದು ಬೇಡವೆಂದು ಸಲಹೆ ನೀಡಿದ್ದರು. ಆದರೆ ಹಲ್ಲುಗಳು ಬೆಳೆದ ನಂತರ ಕಲ್ಪನಾ ಅವರಿಗೆ ಅದನ್ನು ಕೀಳಿಸುವ ಪ್ರಕ್ರಿಯೆ ಭಯ ಹುಟ್ಟಿಸಿದ ಕಾರಣ ಹಾಗೆಯೇ ಉಳಿಸಿಕೊಂಡಿದ್ದಾರೆ ಎಂದು ಗಿನ್ನಿಸ್ ವಿಶ್ವ ದಾಖಲೆ ಸಂಸ್ಥೆ ಮಾಹಿತಿ ನೀಡಿದೆ.

ಅತಿ ಹೆಚ್ಚು ಹಲ್ಲುಗಳನ್ನು ಹೊಂದಿರುವ ಪುರುಷ ಎನ್ನುವ ಖ್ಯಾತಿಗೆ ಕೆನಡಾದ ಇವಾನೊ ಮೆಲ್ಲೋನ್ ಎನ್ನುವ ವ್ಯಕ್ತಿ ಪಾತ್ರರಾಗಿದ್ದಾರೆ. ಇವರ ಬಾಯಲ್ಲಿ ಬರೋಬ್ಬರಿ 41 ಹಲ್ಲುಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.