ಬೆಂಗಳೂರು: ಅಪ್ಪಾ, ಹೋಗಬೇಡಪ್ಪಾ ಎಂದು ಅಪ್ಪನ ಕಾಲು ಹಿಡಿದು ಗಟ್ಟಿಯಾಗಿ ಅಳುವ ಪುಟ್ಟ ಬಾಲಕ.ಎಷ್ಟೇ ಸಮಾಧಾನ ಮಾಡಿದರೂ ಅಳು ನಿಲ್ಲಿಸುತ್ತಿಲ್ಲ. ನಾನು ಬೇಗ ಹೋಗಿ ಬರುತ್ತೇನೆ ಎಂದು ಅಪ್ಪ ಹೇಳುತ್ತಿದ್ದರೂ ಅಪ್ಪ ಹೊರಟು ನಿಂತಾಗ ಹೋಗಬೇಡಪ್ಪಾ ಎಂದು ಮತ್ತಷ್ಟು ಅಳುತ್ತಿದೆ ಆ ಕೂಸು.

ಪೊಲೀಸ್ ಅಧಿಕಾರಿಯೊಬ್ಬರು ಕರ್ತವ್ಯಕ್ಕೆ ಹೊರಡುವಾಗ ಮನೆಯಲ್ಲಿ ಮಗ ಅಳುತ್ತಾ ಹೋಗಬೇಡ ಎಂದು ಹಠ ಹಿಡಿಯುತ್ತಿರುವವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಅರುಣ್ ಬೋಥ್ರಾ ಎಂಬ ಪೊಲೀಸ್ ಈ ವಿಡಿಯೊವನ್ನು ಏಪ್ರಿಲ್ 28ರಂದು ಟ್ವಿಟರ್ನಲ್ಲಿಶೇರ್ ಮಾಡಿದ್ದು ಇಲ್ಲಿಯವರೆಗೆ 29 ಸಾವಿರಕ್ಕಿಂತಲೂ ಹೆಚ್ಚು ಮಂದಿ ಇದನ್ನು ಲೈಕ್ ಮಾಡಿದ್ದಾರೆ.

ಇದು ಪೊಲೀಸ್ ಸೇವೆಯಲ್ಲಿನ ಕಷ್ಟಕರವಾದ ಕೆಲಸ. ಸುದೀರ್ಘ ಹೊತ್ತು ಕೆಲಸ ಮುಗಿಸಿ ಮನೆಗೆ ಬರುವ ಪೊಲೀಸ್ ಅಧಿಕಾರಿಗಳು ಈ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬ ಸಾಲುಗಳೂ ಈ ಟ್ವೀಟ್ನಲ್ಲಿದೆ.

ಟ್ವೀಟ್ ನೋಡಿ ಪ್ರತಿಕ್ರಿಯಿಸಿರುವ ಹಲವಾರು ನೆಟ್ಟಿಗರು ಮಗುವಿನ ಅಳು ನೋಡಿ ಭಾವುಕರಾಗಿದ್ದರೆ. ಅನ್ನು ಕೆಲವರು ಹೆಚ್ಚು ಪೊಲೀಸರನ್ನು ನೇಮಕ ಮಾಡಿ ದಿನದ 8 ಗಂಟೆಗಳ ಕಾಲ ಪೊಲೀಸರಿಗೆ ಡ್ಯೂಟಿ ಇರುವಂತೆ ಮಾಡಿ ಎಂಬ ಸಲಹೆಯನ್ನೂ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.