ಶ್ರೀಲಂಕಾದ ಗಾಯಕಿ ಯೊಹಾನಿ ದಿಲೊಕಾ ಡಿ ಸಿಲ್ವಾ ಅವರ ಪ್ರಸಿದ್ಧ 'ಮನಿಕೆ ಮಗೆ ಹಿತೆ' ಹಾಡಿಗೆ ಹೆಜ್ಜೆ ಹಾಕುವ ಮೂಲಕ ಗರ್ಭಿಣಿಯೊಬ್ಬರು ನೆಟ್ಟಿಗರ ಮನ ಗೆದ್ದಿದ್ದಾರೆ.

ತಿಂಗಳ ಹಿಂದೆ ಟ್ರೆಂಡಿಂಗ್ನಲ್ಲಿದ್ದ ಯೊಹಾನಿ ಹಾಡಿಗೆ ಹಲವು ಸೆಲೆಬ್ರಿಟಿಗಳು, ನಟಿಯರು, ಯೂಟ್ಯೂಬರ್ಗಳು ಹೀಗೆ ಸಾಕಷ್ಟು ಮಂದಿ ರೀಲ್ಸ್ ವಿಡಿಯೊ ಮಾಡುತ್ತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದೀಗ ಮತ್ತೊರ್ವ ಯೂಟ್ಯೂಬರ್ ರೀನೂ ಸನ್ನಿ 'ಮನಿಕೆ ಮಗೆ ಹಿತೆ'ಗೆ ಡಾನ್ಸ್ ಮಾಡುವ ಮೂಲಕ ಪುನಃ ಹಾಡನ್ನು ಗುನುಗುವಂತೆ ಮಾಡಿದ್ದಾರೆ.

ಟ್ರೆಂಡಿಂಗ್ನಲ್ಲಿದ್ದ ಸಂದರ್ಭ ಈ ಹಾಡಿಗೆ ರೀಲ್ಸ್ ಮಾಡಲು ರೀನೂ ಸನ್ನಿ ಅವರಿಗೆ ಸಾಧ್ಯವಾಗದ ಹಿನ್ನೆಲೆ ಕೆಲವು ದಿನಗಳ ನಂತರ ಡಾನ್ಸ್ ಮಾಡಿದ್ದಾರೆ.

ಗುಲಾಬಿ ಬಣ್ಣದ ಸಡಿಲ ಉಡುಪಿನಲ್ಲಿರುವ ರೀನೂ ಸನ್ನಿ, 'ಬೇಬಿ ಬಂಪ್ ನನಗೆ ನಾಚುವಂತೆ, ನಾಜೂಕಿನಿಂದ ಇರುವಂತೆ, ಕೆಲವು ಸಲ ಜಾಗೃತವಾಗಿರುವಂತೆ ಮಾಡಿದೆ. ಆದರೆ ಅದರಿಂದಾಗಿ ನಮಗಿಷ್ಟದ ಚಟುವಟಿಕೆಯಿಂದ ದೂರವಿರಲು ಸಾಧ್ಯವಿಲ್ಲ.

ತಾಯಿಗೆ ವೈದ್ಯರ ತಪ್ಪು ಸಲಹೆಯಿಂದ ತನ್ನ ಜನನ: ಕೋರ್ಟ್ ಮೆಟ್ಟಿಲೇರಿದ ಯುವತಿಗೆ ಜಯ

ನಾನು ಕಳೆದುಕೊಂಡ ಎಲ್ಲ ರೀಲ್ಸ್ಗಳನ್ನು ಪುನಃ ಸಂಭ್ರಮಿಸುತ್ತಿದ್ದೇನೆ. ಈಗಲೂ ಈ ಹಾಡಿಗೆ ಹೆಜ್ಜೆ ಹಾಕುವುದು ಟ್ರೆಂಡಿಂಗ್ ಎಂದು ಭಾವಿಸಿದ್ದೇನೆ' ಎಂದು ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.

'ಅತಿಹೆಚ್ಚು ಕೇಳಲ್ಪಟ್ಟ ಹಾಡುಗಳಲ್ಲಿ 'ಮನಿಕೆ ಮಗೆ ಹಿತೆ' ಹಾಡು ಒಂದಾಗಿದೆ. ಜೋಡಿ ಅನೂರಭ್ ಅವರ ನೃತ್ಯ ಸಂಯೋಜನೆಯಲ್ಲಿ ಸ್ನೇಹಿತೆ ಕಾವ್ಯಾ ಮತ್ತು ಹೊಟ್ಟೆಯೊಳಗಿರುವ ಮಗುವಿನ ಜೊತೆ ಹೆಜ್ಜೆ ಹಾಕುತ್ತ ಸಂಭ್ರಮಿಸುತ್ತಿದ್ದೇನೆ' ಎಂದು ರೀನೂ ಸನ್ನಿ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಹೇಳಿದ್ದಾರೆ.

ಸರ್ಕಾರಿ ಕಚೇರಿಯಿಂದ ಕಡತಗಳನ್ನು ಕಚ್ಚಿಕೊಂಡು ಓಡಿದ ಮೇಕೆ, ಸಿಬ್ಬಂದಿಗೆ ಪಜೀತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.