ಬೆಂಗಳೂರು: ಕೆಲವರು ತಮ್ಮ ಬೈಕ್ಗಳ ನಂಬರ್ ಪ್ಲೇಟ್ ಮೇಲೆ ಶೋಕಿಗಾಗಿ ಏನೇನೋ ಬರೆಸುವುದುಂಟು. ಇದು ಅಪರಾಧ ಎಂದು ಗೊತ್ತಿದ್ದರೂ ಕೆಲವರು ಪೊಲೀಸ್ ಬಿಸಿ ಮುಟ್ಟಿದ ಮೇಲೆ ಮೆತ್ತಗಾಗುತ್ತಾರೆ.

ಇದೇ ರೀತಿ ಯುವಕನೊಬ್ಬ ತನ್ನ ಬೈಕ್ ನಂಬರ್ ಫ್ಲೇಟ್ ಮೇಲೆ ತಾನು ಎಂಎಲ್ಎ ಮೊಮ್ಮಗ ಎಂದು ಹಾಕಿಸಿಕೊಂಡು ವೈರಲ್ ಆಗಿದ್ದಾನೆ.

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ ಕ್ಷೇತ್ರದ ಶಾಸಕ ಎಂ.ಆರ್.ಗಾಂಧಿ ಅವರ ಮೊಮ್ಮಗ ನಾನು ಎಂದು ನಂಬರ್ ಫ್ಲೇಟ್ ಮೇಲೆ ಬರೆದುಕೊಂಡುಯುವಕ ಗಮನ ಸೆಳೆದಿದ್ದಾನೆ. ಆತನ ಹೆಸರು ಅಮಿಶ್ ಎನ್ನಲಾಗಿದ್ದು, ಫೋಟೊ ವೈರಲ್ ಆದ ಬಳಿಕ ಅದನ್ನು ತೆಗೆದು ಹಾಕಿದ್ದಾನೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಸಾರಿಗೆ ಇಲಾಖೆ ಕಾನೂನು ಪ್ರಕಾರವೇ ವಾಹನಗಳ ನೋಂದಣಿ ಫಲಕದ ಮೇಲೆ ನಂಬರ್ ಬರೆಸತಕ್ಕದ್ದು. ಆದರೆ, ಅನೇಕರು ಈ ನಿಯಮ ಉಲ್ಲಂಘಿಸಿ ಪೊಲೀಸರ ಅತಿಥಿಯಾಗುವುದುಂಟು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.