ಇಡೀ ವಿಶ್ವವನ್ನೇ ನಡುಗಿಸಿರುವಕೊರೊನಾಸೋಂಕಿನ ಬಗ್ಗೆ ಈಗಾಗಲೇ ಗೊತ್ತಿರುವಂತೆ ಬಹುತೇಕರಲ್ಲಿ ರೋಗಲಕ್ಷಣಗಳು ಸಾಮಾನ್ಯ ನೆಗಡಿ, ಜ್ವರದಂತಹ ಸೌಮ್ಯ ಸ್ವರೂಪದಲ್ಲಿರುತ್ತವೆ. ಇಂತಹ ಕೊರೊನಾಗೆ ಮಕ್ಕಳೇನೂ ಹೊರತಲ್ಲ. ಈಗಾಗಲೇ ಚೀನಾ ಮತ್ತಿತರ ಕೊರೊನಾಪೀಡಿತ ರಾಷ್ಟ್ರಗಳಲ್ಲಿ ಕೆಲವು ಮಕ್ಕಳಲ್ಲಿ ಈಸೋಂಕುಕಾಣಿಸಿಕೊಂಡಿದೆ.

ಆದರೆ ಒಂದು ಸಕಾರಾತ್ಮಕ ಸಂಗತಿಯೆಂದರೆ ಲಭ್ಯವಿರುವ ಅಧಿಕೃತ ಅಂಕಿ–ಅಂಶಗಳ ಪ್ರಕಾರ, ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ ಈ ಸೋಂಕಿನ ಪ್ರಮಾಣ ಅತ್ಯಂತ ಕಡಿಮೆ ಮಟ್ಟದಲ್ಲಿದೆ. ಈ ಸೋಂಕಿನ ಕಾರಣದಿಂದಲೇ ಎಂದು ದೃಢೀಕರಿಸಲ್ಪಟ್ಟು ಸಾವಿಗೆ ತುತ್ತಾಗಿರುವಮಕ್ಕಳಸಂಖ್ಯೆ ಬೆರಳೆಣಿಕೆಯಲ್ಲಿದೆ. ಇದಕ್ಕೆ ಇಂಥದ್ದೇ ಕಾರಣವೆಂದು ಖಡಾಖಂಡಿತವಾಗಿ ಹೇಳಲಾಗದಿದ್ದರೂ ಅಂದಾಜಿಸಬಹುದಾದ ಕೆಲವೊಂದು ಕಾರಣಗಳಿವೆ:

* ಮಕ್ಕಳು ಹೊರಜಗತ್ತಿಗೆ ಹೆಚ್ಚು ತೆರೆದುಕೊಳ್ಳದೇ ಇರುವುದು ಮತ್ತು ಅಂತರರಾಷ್ಟ್ರೀಯ ಪ್ರವಾಸ ಕೈಗೊಳ್ಳದೇ ಇರುವುದು.

*ಮಕ್ಕಳು ನೆಗಡಿಗೆ ಕಾರಣವಾಗುವ ಇನ್ನಿತರೆ ವೈರಾಣುಗಳ ಸೋಂಕಿನಿಂದ ಪದೇ ಪದೇ ಬಳಲುವುದರಿಂದ ಮತ್ತು ಆ ವೈರಾಣುಗಳೂ ಸಹಕೊರೊನಾವೈರಸ್ನಂತೆಯೇ ಆರ್ಎನ್ಎ ಗುಂಪಿಗೆ ಸೇರಿರುವುದರಿಂದಕೊರೊನಾಸೋಂಕನ್ನು ಹತ್ತಿಕ್ಕುವಂಥ ರೋಗನಿರೋಧಕ ಶಕ್ತಿಯನ್ನು ನೈಸರ್ಗಿಕವಾಗಿ ಪಡೆದಿರಬಹುದು.

*ಭಾರತದಂಥ ಕೆಲವು ರಾಷ್ಟ್ರಗಳಲ್ಲಿ ಸಾರ್ವತ್ರಿಕವಾಗಿ ನೀಡಲಾಗುವ ಬಿಸಿಜಿ ಲಸಿಕೆಯುಕೊರೊನಾಸೋಂಕಿನ ವಿರುದ್ಧ ಮಕ್ಕಳನ್ನು ರಕ್ಷಿಸುತ್ತಿರಬಹುದು.

ಇವುಗಳಲ್ಲದೆ ಇನ್ನೂ ಹಲವಾರು ಕಾರಣಗಳಿಂದ ಒಟ್ಟಾರೆಯಾಗಿ ಕೊರೊನಾಗೆ ಹದಿನೈದು ವರ್ಷಗಳೊಳಗಿನ ಮಕ್ಕಳೆಡೆಗೆ ಮೃದು ಧೋರಣೆ ಇರುವುದಂತೂ ನಿಜ.

ಮಕ್ಕಳಲ್ಲಿಕೊರೊನಾಸೋಂಕಿನ ಲಕ್ಷಣಗಳೇನು?

ರೋಗ ಲಕ್ಷಣಗಳಿಗೆ ಅನುಗುಣವಾಗಿ ಮಕ್ಕಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಬಹುದು.

1. ಯಾವುದೇ ರೋಗಲಕ್ಷಣಗಳಿಲ್ಲದಿರುವುದು.

2. ಮಾಮೂಲಿ ನೆಗಡಿಯಂತೆ ಮೂಗು ಸೋರುವಿಕೆ, ಸೀನು, ಕೆಮ್ಮು ಮತ್ತು ಜ್ವರ.

3. ಲಘು ಸ್ವರೂಪದ ನ್ಯುಮೋನಿಯಾ.

4. ತೀವ್ರ ಸ್ವರೂಪದ ನ್ಯುಮೋನಿಯಾ.

ಬಹುತೇಕ ಮಕ್ಕಳಲ್ಲಿ ರೋಗ ಲಕ್ಷಣಗಳು ಲಘು ಸ್ವರೂಪದವು. ಆದರೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಮತ್ತು ಯಾವುದೋ ಕಾರಣದಿಂದ ರೋಗನಿರೋಧಕ ಶಕ್ತಿ ಕುಂಠಿತವಾಗಿರುವ ಮಕ್ಕಳಲ್ಲಿ ರೋಗಲಕ್ಷಣಗಳ ತೀವ್ರತೆ ಹೆಚ್ಚಾಗಿರುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ರೋಗ ಲಕ್ಷಣಗಳನ್ನೇ ಆಧರಿಸಿ ‘ಇದುಕೊರೊನಾಸೋಂಕು’ ಎಂದು ಖಚಿತವಾಗಿ ಹೇಳುವುದು ಅಸಾಧ್ಯ. ಸೋಂಕಿತರೊಂದಿಗಿನ ಸಂಪರ್ಕ, ವಿದೇಶ ಪ್ರವಾಸ ಮುಂತಾದ ಸಂಗತಿಗಳನ್ನು ಗಮನದಲ್ಲಿರಿಸಿಕೊಂಡು ಸೂಕ್ತ ಪರೀಕ್ಷೆಗಳ ಮೂಲಕ ದೃಢಪಡಿಸಿಕೊಳ್ಳಬೇಕು.

ಮುಂಜಾಗ್ರತಾ ಕ್ರಮಗಳು

*ಸೋಂಕಿತ ವ್ಯಕ್ತಿಗಳಿಂದ ಮಕ್ಕಳನ್ನು ದೂರವಿರಿಸುವುದು.

*ಸೋಂಕುದೃಢಪಟ್ಟ ಮಕ್ಕಳನ್ನು ಪ್ರತ್ಯೇಕಿಸಿ ನಿಗಾ ವಹಿಸುವುದು.

*ಯಾವುದೇ ಸಂದರ್ಭದಲ್ಲಿ ರೋಗಲಕ್ಷಣಗಳು ಉಲ್ಬಣಗೊಂಡರೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸುವುದು.

*ಅಗತ್ಯ ಪೋಷಕಾಂಶಗಳಿಂದ ಕೂಡಿದ ಸಮತೋಲನ ಆಹಾರ ಸೇವನೆಗೆ ಉತ್ತೇಜಿಸುವುದು ಮತ್ತು ಹೆಚ್ಚು ದ್ರವ ಪದಾರ್ಥಗಳನ್ನು ನೀಡುವುದು.

*ರೋಗನಿರೋಧಕ ಶಕ್ತಿ ಕುಂಠಿತವಾಗಿರುವ ಕ್ಯಾನ್ಸರ್ಪೀಡಿತ ಮತ್ತಿತರಮಕ್ಕಳಬಗ್ಗೆ ವಿಶೇಷಕಾಳಜಿವಹಿಸುವುದು.

*ಸೋಂಕಿತ ಮಕ್ಕಳಿಗೆ ಅಗತ್ಯ ವಿಶ್ರಾಂತಿ ಕಲ್ಪಿಸುವುದು.

*ಸೀನುವಾಗ, ಕೆಮ್ಮುವಾಗ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಕ್ಕಳಿಗೆ ತಿಳಿಸಿಕೊಡುವುದು.

*ಕೈಗಳ ಸ್ವಚ್ಛತೆಯ ಮಹತ್ವ ಮತ್ತು ಸಮರ್ಪಕ ವಿಧಾನವನ್ನು ತಿಳಿಸಿಕೊಡುವುದು.

*ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಕುರಿತು ತಿಳಿಸಿಕೊಡುವುದು.

*ರೋಗನಿರೋಧಕ ಶಕ್ತಿ ವೃದ್ಧಿಸುವಂಥ ಆಟೋಟಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಮಕ್ಕಳನ್ನು ಉತ್ತೇಜಿಸುವುದು.

*ಕನಿಷ್ಠ ಎರಡು ವರ್ಷಗಳವರೆಗೆ ಸ್ತನ್ಯಪಾನವನ್ನು ಪ್ರೋತ್ಸಾಹಿಸುವುದು.

*ಫ್ಲು ಲಸಿಕೆಯನ್ನೂ ಒಳಗೊಂಡು ಎಲ್ಲಾ ಲಸಿಕೆಗಳನ್ನು ನಿಗದಿತ ಸಮಯದಲ್ಲಿ ನೀಡುವುದು.

*ಆಸ್ತಮಾದಿಂದ ಬಳಲುತ್ತಿರುವ ಮಕ್ಕಳು ವೈದ್ಯರು ಸೂಚಿಸಿದ ಔಷಧಗಳನ್ನು ಕಡ್ಡಾಯವಾಗಿ ಸೇವಿಸುವುದು.

(ಲೇಖಕರು ಮುಖ್ಯಸ್ಥರು,ಮಕ್ಕಳವಿಭಾಗಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ, ತುಮಕೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.