ಕೆಲವು ಮಹಿಳೆಯರು ಮಧ್ಯ ವಯಸ್ಸು ದಾಟುತ್ತಿದ್ದಂತೆ ಚಲನಶೀಲತೆ, ಉತ್ಸಾಹ ಕಳೆದುಕೊಂಡುಬಿಡುತ್ತಾರೆ. ಯಾವುದಕ್ಕೂ ಸಮಯವಿಲ್ಲ ಎಂಬ ಉವಾಚ ಬೇರೆ. ಇದಕ್ಕೆ ಹಲವಾರು ಕಾರಣಗಳಿರಬಹುದು. ಆದರೆ ಅದನ್ನೆಲ್ಲ ಹಿಂದಕ್ಕೆ ಬಿಟ್ಟು ಹೊಸದನ್ನು ಕಲಿಯುತ್ತ, ಹವ್ಯಾಸ ಬೆಳೆಸಿಕೊಳ್ಳುತ್ತ ಹೋದರೆ ಸಮಸ್ಯೆಗಳನ್ನು ಮರೆಯಲು ಸಾಧ್ಯ.

‘ಅಯ್ಯೋ ಏನು ಮಾಡಲೂ ಸಮಯವೇ ಇರುವುದಿಲ್ಲ...’

ಇದು ಬಹಳಷ್ಟು ಮಹಿಳೆಯರ ಉವಾಚ. ಕೆಲವು ಸಂದರ್ಭದಲ್ಲಿ ಇದು ನಿಜ ಸಹ. ಆದರೆ ಬಹಳಷ್ಟು ಸಾರಿ ನಾವು ಬೇಗ ಈ ಮಾತನ್ನು ಒಪ್ಪಿಕೊಂಡು ಅಪ್ಪಿಕೊಂಡು ಬಿಡುತ್ತೇವೆ. ದಿನದ 24 ಗಂಟೆಗಳು ನಮಗೆ ಸಾಕಾಗದೇ ಇರಬಹುದು. ಆದರೆ ಅದನ್ನು ವ್ಯರ್ಥ ಮಾಡದೇ ಉಪಯೋಗಿಸಿಕೊಳ್ಳುವವರೂ ಇದ್ದಾರೆ. ಮತ್ತೆ ಇದು ವ್ಯಕ್ತಿಯ ಸಾಮರ್ಥ್ಯದ ಪ್ರಶ್ನೆ ಸಹ.

‘ಏನೂ ಸರಿಯಾಗಿ ಮಾಡಲು ಆಗುತ್ತಿಲ್ಲ, ಮಾಮೂಲಿ ಕೆಲಸವೇ ಹೊರೆಯಾಗುತ್ತದೆ, ಮನೆಯ ವಾತಾವರಣ ಹದಗೆಡುತ್ತದೆ, ಮನಸ್ಸಿಗೆ ಕಿರಿಕಿರಿ, ಇದರಿಂದ ನನಗೆ ತುಂಬಾ ವಯಸ್ಸಾಗಿಬಿಟ್ಟಿದೆಯೇನೋ ಎಂಬ ಭಾವನೆ ಮೂಡುತ್ತದೆ’ ಎಂಬುದು ಕೆಲವು ಮಹಿಳೆಯರ ದೂರು.

ಸಾಮಾನ್ಯವಾಗಿ ಇರ್ಯಾರೂ ದಿನನಿತ್ಯದ ಕೆಲಸಗಳನ್ನು ಮಾಡಲು ಆಗದವರಲ್ಲ. ಜೊತೆಗೆ ಹೆಚ್ಚಿನ ಕೆಲಸಗಳ ಜವಾಬ್ದಾರಿಯನ್ನು ಹೊರಲು ಶಕ್ತವಾಗಿರುವವರೂ ಇರುತ್ತಾರೆ. ಆದರೆ ಮನಸ್ಸಿನ ಯಾವುದೋ ಮೂಲೆಯಲ್ಲಿ ಅಡಗಿಸಿಟ್ಟುಕೊಂಡಿರುವ ಬೇಸರ, ಆತಂಕ ಇವರನ್ನು ಸರಿಯಾಗಿ ಕೆಲಸ ಮಾಡದಂತೆ ತಡೆಯುತ್ತಿದೆ. ಇದೇ ಕಾರಣವಾಗಿ ಬಹಳಷ್ಟು ಮಹಿಳೆಯರು ಖಿನ್ನತೆಗೆ ಗುರಿಯಾಗಿ, ಆರೋಗ್ಯ ಸಮಸ್ಯೆಗೆ ಒಳಗಾಗುತ್ತಾರೆ.

ಮಧ್ಯ ವಯಸ್ಸಿನ ಸಮಸ್ಯೆಗಳು

ಮಧ್ಯವಯಸ್ಸಿಗೆ ಹತ್ತಿರವಾಗುತ್ತಿದ್ದಂತೆ ಮಹಿಳೆಯರಿಗೆ ಮೆನೋಪಾಸ್, ಬೊಜ್ಜು ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಸಮಸ್ಯೆಗಳ ಪರಿಹಾರಕ್ಕೆ ವ್ಯಾಯಾಮ ಮುಖ್ಯ. ಜೊತೆಗೆ ಮನಸ್ಸನ್ನು ಬೇಡದ ವಿಷಯಗಳಿಂದ ದೂರವಿಟ್ಟುಕೊಳ್ಳಲು ಕೆಲ ಚಟುವಟಿಕೆಗಳು ಬೇಕಾಗುತ್ತದೆ. ಆದರೆ ದಿನನಿತ್ಯದ ಕೆಲಸಗಳೇ ಸಾಕು, ದೇಹಕ್ಕೆ ಮತ್ತಷ್ಟು ಶ್ರಮ ನೀಡುವುದು ಬೇಡ ಎಂಬ ಅಭಿಪ್ರಾಯ ಹಲವರದು. ಜೊತೆಗೆ ವೈಯಕ್ತಿಕವಾಗಿಯೋ ಅಥವಾ ಕುಟುಂಬದಲ್ಲಿ ಏನಾದರೂ ಸಮಸ್ಯೆಯಾಗಿದ್ದರೆ ಅದನ್ನು ಅತಿಯಾಗಿ ಭಾವಿಸುವುದು, ತಾವೊಬ್ಬರೇ ಅಂತಹ ಸಮಸ್ಯೆಗೆ ಗುರಿಯಾಗಿರುವುದು ಎಂದು ಹಗಲಿರುಳು ಕೊರಗುವುದು. ಈ ರೀತಿ ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೇ ಹಾಗೇ ಇದ್ದುಬಿಡುವುದು. ಇಂತಹ ಪರಿಸ್ಥಿತಿಯಲ್ಲಿ ಅವರು ಹೊಸ ಕಲಿಕೆಗಳಲ್ಲೂ ಹಿಂದೆ ಬೀಳುತ್ತಾರೆ.

ಆದರೆ ಇಂದಿನ ಪರಿಸ್ಥಿತಿಯಲ್ಲಿ ಬದಲಾವಣೆಗಳಿಗೆ ಒಗ್ಗಿಕೊಳ್ಳದೆ ಬೇರೆ ದಾರಿಯೇ ಇಲ್ಲ. ಕಾಲಕ್ಕೆ ಅನುಗುಣವಾಗಿ ತಂತ್ರಜ್ಞಾನದ ಅರಿವು ಪಡೆಯುವುದು ಅತ್ಯಗತ್ಯ. ಇಂತಹದಕ್ಕೆಲ್ಲ ಪ್ರತಿಬಾರಿಯೂ ಮಕ್ಕಳ ಅಥವಾ ಬೇರೆಯವರ ನೆರವಿಗಾಗಿ ಆಶ್ರಯಿಸುತ್ತಾ ಪರಾವಲಂಬಿಗಳಾಗುವುದು ದೊಡ್ಡ ಸಮಸ್ಯೆಯೇ.

ಕಲಿಕೆಗೆ ವಯಸ್ಸಿನ ಮಿತಿ ಇಲ್ಲ. ಯಾವುದೇ ವಯಸ್ಸಿನಲ್ಲಾದರೂ ಏನನ್ನು ಬೇಕಾದರೂ ಕಲಿಯಬಹುದು. ಹಾಗೆಯೇ ನಮ್ಮ ಅರಿವಿಗೆ ಒಂದು ಚೌಕಟ್ಟು ಹಾಕಿಕೊಂಡು ಅಷ್ಟೇ ಸಾಕು ಎಂದುಕೊಂಡರೆ, ನಾವು ಮುಂದೆ ಹೋಗಲು ಸಾಧ್ಯವಿಲ್ಲ.

ಹವ್ಯಾಸಗಳು ಬೇಕಾದಷ್ಟಿವೆ

ರಂಗೋಲಿ, ಸಂಗೀತ, ಹೂ ಜೋಡಣೆ, ಕರಕುಶಲ ಕಲೆ, ನೃತ್ಯ, ಕೇಶ ಅಲಂಕಾರ... ಹೀಗೆ ಇವುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವೆಲ್ಲ ಬೇರೆ ಬೇರೆ ಹವ್ಯಾಸಗಳಷ್ಟೇ ಹೊರತು ಕಲಿಕೆಯಲ್ಲ; ಕೆಲವು ಮಹಿಳೆಯರಲ್ಲಿ ಇವೆಲ್ಲ ಹವ್ಯಾಸಗಳೂ ಇರುತ್ತವೆ. ಇನ್ನೂ ಕೆಲವರು ಓದು, ಬರಹ, ಮಾತು, ಚಾರಣ, ಕ್ರೀಡೆ ಇಂಥ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಾರೆ. ಕೆಲವರು ಅಡುಗೆ, ಮನೆ ಒಳಾಂಗಣ ವಿನ್ಯಾಸ, ಕಸೂತಿ, ಹೊಲಿಗೆ ಮುಂತಾದವುಗಳಲ್ಲಿ ಸಿದ್ಧಹಸ್ತರಾಗಿರುತ್ತಾರೆ. ಸದಾ ಏನಾದರೂ ಕಲಿಯುತ್ತಿರುತ್ತಾರೆ, ಕಲಿಸುತ್ತಿರುತ್ತಾರೆ. ಯಾವುದಕ್ಕೂ ಅವರು ಸಮಯ ಇಲ್ಲ ಅನ್ನುವುದಿಲ್ಲ. ಮತ್ತ್ಯಾವುದಿದೆ ಕಲಿಯುವುದಕ್ಕೆ ಎಂದೂ ಯೋಚಿಸುತ್ತಿರುತ್ತಾರೆ.

ಇಂತಹವರ ಬಳಿ ಬೇಸರಕ್ಕೆ ಅವಕಾಶವೇ ಇರುವುದಿಲ್ಲ, ಸದಾ ಕ್ರಿಯಾಶೀಲರಾಗಿರುವುದರಿಂದ ಅವರ ಆರೋಗ್ಯವೂ ಚೆನ್ನಾಗಿರುತ್ತದೆ. ತಮ್ಮ ಸುತ್ತಮುತ್ತಲ ಪರಿಸರದಲ್ಲಿ ಇತರರ ಮೇಲೂ ಪ್ರಭಾವ ಬೀರುತ್ತಾರೆ. ಅವರೂ ಕೂಡ ವೈಯಕ್ತಿಕ ಹಾಗೂ ಕುಟುಂಬದ ಸಮಸ್ಯೆಗಳಿಂದೇನೂ ಮುಕ್ತರಾಗಿರುವುದಿಲ್ಲ. ಆದರೆ ಸಮಸ್ಯೆಗಳು ತಮ್ಮ ಚಟುವಟಿಕೆಗಳಿಗೆ ಕಡಿವಾಣ ಹಾಕದಂತೆ ನೋಡಿಕೊಳ್ಳುತ್ತಾರೆ. ಅವರದು ಓಡುವ ಸಮಯದ ಜೊತೆಗೆ ಹೆಜ್ಜೆ ಹಾಕುವ ಪ್ರಯತ್ನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.