ವಾಷಿಂಗ್ಟನ್: ಸಮಾಜ ಸೇವಾ ಚಟುವಟಿಕೆಗಳಿಗಾಗಿ ಉದಾರವಾಗಿ ದಾನ ಮಾಡಿ, ಜಾಗತಿಕವಾಗಿ ಗುರುತಿಸಿಕೊಂಡಿರುವ 100 ಭಾರತೀಯರ ಪಟ್ಟಿಯಲ್ಲಿ ಭಾರತದ ಉದ್ಯಮಿಗಳಾದ ಗೌತಮ್ ಅದಾನಿ, ನೀತಾ ಅಂಬಾನಿ, ಕುಮಾರ ಮಂಗಲಂ ಬಿರ್ಲಾ ಅವರು ಸ್ಥಾನ ಪಡೆದಿದ್ದಾರೆ.

ಅಮೆರಿಕ ಮೂಲದ ‘ಇಂಡಿಯಾಸ್ಪೊರಾ’ ಎಂಬ ಸಂಘಟನೆ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿವಿಧ ಮೂಲಗಳು, ಅಧ್ಯಯನಗಳಿಂದ ಸಂಗ್ರಹಿಸಿರುವ ಮಾಹಿತಿ, ಸಾರ್ವಜನಿಕ ವಲಯದಲ್ಲಿ ಸಿಗುವ ದಾಖಲೆಗಳನ್ನು ಆಧರಿಸಿ ಇದೇ ಮೊದಲ ಬಾರಿಗೆ ಇಂಥ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. 9 ಜನ ತೀರ್ಪುಗಾರರಿರುವ ತಂಡ ಈ ದಾನಿಗಳನ್ನು ಆಯ್ಕೆ ಮಾಡಿದೆ ಎಂದು ಮೂಲಗಳು ಹೇಳಿವೆ.

‘ಭಾರತದ ಗೌತಮ್ ಅದಾನಿ, ನೀತಾ ಅಂಬಾನಿ, ಕುಮಾರ ಮಂಗಲಂ ಬಿರ್ಲಾ, ಅಮೆರಿಕದ ಮಾಂಟೆ ಅಹುಜಾ, ಅಜಯ್ ಬಂಗಾ, ಮನೋಜ್ ಭಾರ್ಗವ, ಕೆನಡಾದ ಸೋನಮ್ ಅಜ್ಮೇರಾ, ಬಾಬ್ ಧಿಲ್ಲೋನ್ ಹಾಗೂ ಆದಿತ್ಯ ಝಾ, ಬ್ರಿಟನ್‌ನ ಮೊಹಮ್ಮದ್ ಅಮರ್ಸಿ, ಮನೋಜ್ ಬದಲೆ ಹಾಗೂ ಕುಜಿಂದರ್ ಬಹಿಯಾ ಅವರು ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ’ ಎಂದು ಸಂಘಟನೆಯ ಸಂಸ್ಥಾಪಕ ಎಂ.ಆರ್.ರಂಗಸ್ವಾಮಿ ತಿಳಿಸಿದ್ದಾರೆ.

‘ಅನೇಕ ಭಾರತೀಯರು ತಾವು ಸ್ಥಾಪಿಸಿರುವ ಉದ್ಯಮಗಳಲ್ಲಿ ಯಶಸ್ಸು ಗಳಿಸಿದ್ದಲ್ಲದೇ, ಸಮಾಜ ಸೇವೆಗಾಗಿ ತಮ್ಮ ಗಳಿಕೆಯ ಕೆಲ ಭಾಗವನ್ನು ವಿನಿಯೋಗಿಸುತ್ತಿರುವುದು ಪ್ರೇರಣಾದಾಯಕ’ ಎಂದು ರಂಗಸ್ವಾಮಿ ಹೇಳಿದ್ದಾರೆ.

‘ಉದಾರವಾಗಿ ಸಮಾಜಕ್ಕೆ ನೀಡಬೇಕು ಎಂಬುದಕ್ಕೆ ಇವರು ನಿದರ್ಶನವಾಗಿದ್ದಾರೆ. ಸಮಾಜವನ್ನು ಬಾಧಿಸುತ್ತಿರುವ ಕೆಲವು ಸಂಗತಿಗಳತ್ತ ಎಲ್ಲರೂ ಗಮನ ಹರಿಸಬೇಕು ಎಂಬುದನ್ನು ಸಹ ಈ ದಾನಿಗಳು ನಮಗೆ ನೆನಪಿಸಿದ್ದಾರೆ’ ಎಂದು ಶ್ಲಾಘಿಸಿದರು.

ಯುಎಇ, ಆಸ್ಟ್ರೇಲಿಯಾ, ಸಿಂಗಪುರದಲ್ಲಿರುವ ಭಾರತೀಯರು ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.