ವಾಷಿಂಗ್ಟನ್: ಕೊರೊನಾ ಸೋಂಕಿತರಿಗೆ ಮನೆಯಲ್ಲೇ ಉಚಿತ ಚಿಕಿತ್ಸೆ ನೀಡುವುದಕ್ಕಾಗಿ ಇಲ್ಲಿನ ಬಿಹಾರ ಮತ್ತು ಜಾರ್ಖಂಡ್ ಮೂಲದ ಭಾರತೀಯ – ಅಮೆರಿಕನ್ ವೈದ್ಯರ ಸಮೂಹವೊಂದು ಉಚಿತ ಟೆಲಿಮೆಡಿಸಿನ್ ಸಹಾಯವಾಣಿಯನ್ನು ಪ್ರಾರಂಭಿಸಿದೆ.

ಬಿಹಾರ ಮತ್ತು ಜಾರ್ಖಂಡ್ ಅಸೋಸಿಯೇಷನ್ ಆಫ್ ನಾರ್ತ್ ಅಮೆರಿಕ (ಬಿಜೆಎಎನ್) ಸಂಘಟನೆ ಈ ಉಚಿತ ವೈದ್ಯಕೀಯ ಸೇವೆಗೆ ಮುಂದಾಗಿದೆ.

ಬಿಜೆಎಎನ್ ಸಂಘಟನೆಯ ಅಧ್ಯಕ್ಷ ಡಾ.ಅವಿನಾಶ್ ಗುಪ್ತಾ ಮತ್ತು ಹಲವು ಭಾರತೀಯ-ಅಮೆರಿಕನ್ ವೈದ್ಯರ ನೇತೃತ್ವದಲ್ಲಿ ಅಂತರ್ಜಾಲ ಮತ್ತು ಮೊಬೈಲ್ ಅಪ್ಲಿಕೇಷನ್ಗಳನ್ನು ಬಳಸಿಕೊಂಡು ಕೋವಿಡ್– 19 ರೋಗಿಗಳಿಗೆ ಟೆಲಿಮೆಡಿಸಿನ್ ಮೂಲಕ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.

‘ಮನೆಯಲ್ಲೇ ಚಿಕಿತ್ಸೆ ಪಡೆಯುವ ನಮ್ಮ ದೇಶದ ಜನರಿಗೆ ಯಾವುದೇ ರೀತಿಯಲ್ಲಾದರೂ ಸಹಾಯವಾಗಲಿ ಎಂಬ ಕಾರಣದಿಂದ ಈ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಮಾಜಿ ಎಫ್ಐಎ ಅಧ್ಯಕ್ಷ ಅಲೋಕ್ ಕುಮಾರ್ ಹೇಳಿದರು. ಆರಂಭದಲ್ಲಿ ಹತ್ತರಿಂದ ಹನ್ನೆರಡು ಮಂದಿ ವೈದ್ಯರು ಟೆಲಿಮೆಡಿಸಿನ್ ಮೂಲಕ ಉಚಿತವಾಗಿ ಚಿಕಿತ್ಸೆ ನೀಡಲಿದ್ದಾರೆ.

ಕೋವಿಡ್ ಬಗ್ಗೆ ಜನರಲ್ಲಿರುವ ಅರಿವಿನ ಕೊರತೆಯನ್ನು ವೈದ್ಯರು ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವೈದ್ಯರ ಗುಂಪು ಸ್ಥಳೀಯವಾಗಿರುವ ಅಶ್ಥಾ ಮತ್ತು ಆಶಾ ಎಂಬ ಎರಡು ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆದು, ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾರಂಭಿಸಿದೆ. ಇದರ ಜತೆಗೆ ಜೂಮ್ ಸೆಷನ್ಗಳನ್ನು ಆಯೋಜಿಸಿ, ಪ್ರತಿ ವ್ಯಕ್ತಿಯೊಂದಿಗೆ ಸಂವಾದ ನಡೆಸಿ, ಕೋವಿಡ್ ಕುರಿತು ಸಲಹೆ ನೀಡುತ್ತಿದ್ದಾರೆ.

ಇದನ್ನೂ ಓದಿ... ಭಾರತದಲ್ಲಿ ಕೋವಿಡ್ ಸಂಕಷ್ಟ: ಫ್ರಾನ್ಸ್ನಿಂದ ವೈದ್ಯಕೀಯ ನೆರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.